ಭಾರತ vs ಜಿಂಬಾಬ್ವೆ: ಮತ್ತೆ ತಂಡದಿಂದ ಹೊರಬಿದ್ದ ಕಮ್‌ಬ್ಯಾಕ್‌ಗೆ ಕಾಯುತ್ತಿದ್ದ ಯುವ ಕ್ರಿಕೆಟಿಗ

ಭಾರತ ಹಾಗೂ ಜಿಂಬಾಬ್ವೆ ತಂಡಗಳ ವಿರುದ್ಧದ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಈ ಸರಣಿಯ ಮೂಲಕ ಭಾರತ ತಂಡಕ್ಕೆ ಕಮ್‌ಬ್ಯಾಕ್‌ಗೆ ಕಾಯುತ್ತಿದ್ದ ಯುವ ಆಲ್‌ರೌಂಡರ್ ಆಟಗಾರ ಮತ್ತೆ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಜಿಂಬಾಬ್ವೆ ಸರಣಿಯಿಂದ ಹೊರಬಿದ್ದ ಭಾರತ ತಂಡದ ಆಟಗಾರನಾಗಿದ್ದಾರೆ.

ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರೂ ವಾಶಿಂಗ್ಟನ್ ಸುಂದರ್‌ಗೆ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಮಧ್ಯೆ ಈ ಯುವ ಆಲ್‌ರೌಂಡರ್‌ಗೆ ಆಗಾಗ ಗಾಯದ ಸಮಸ್ಯೆಗಳು ಕಾಡುತ್ತಿದೆ. ಇನ್ನು ಕಮ್‌ಬ್ಯಾಕ್‌ಗೆ ಮತ್ತೊಂದು ಅವಕಾಶ ಸಿಕ್ಕಿತು ಎನ್ನುವಾಗ ಮತ್ತೊಮ್ಮೆ ಗಾಯಕ್ಕೆ ತುತ್ತಾಗಿದ್ದಾರೆ ತಮಿಳುನಾಡು ಮೂಲಕ ಆಟಗಾರ.

ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?

ಕೌಂಟಿ ತಂಡದ ಪರ ಆಡುತ್ತಿದ್ದಾಗ ಗಾಯ

ಕೌಂಟಿ ತಂಡದ ಪರ ಆಡುತ್ತಿದ್ದಾಗ ಗಾಯ

ಭಾರತ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಈ ಸರಣಿಯಲ್ಲಿ ಭಾಗವಹಿಸುವ ತಂಡದಲ್ಲಿ ವಾಶಿಂಗ್ಟನ್ ಸುಂದರ್ ಅವಕಾಶ ಪಡೆದುಕೊಂಡಿದ್ದರು. ಆದರೆ ಕೌಂಟಿ ತಂಡ ಲಂಕಾಶೈರ್ ತಂಡದ ಪರವಾಗಿ ಏಕದಿನ ಮಾದರಿಯಲ್ಲಿ ಆಡುತ್ತಿದ್ದಾಗ ವಾಶಿಂಗ್ಟನ್ ಸುಂದರ್ ಭುಜದ ಗಾಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಎನ್‌ಸಿಎನಲ್ಲಿ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ವಾಶಿ ಅಲಭ್ಯತೆಯನ್ನು ಸ್ಪಷ್ಟಪಡಿಸಿದ ಬಿಸಿಸಿಐ ಅಧಿಕಾರಿ

ವಾಶಿ ಅಲಭ್ಯತೆಯನ್ನು ಸ್ಪಷ್ಟಪಡಿಸಿದ ಬಿಸಿಸಿಐ ಅಧಿಕಾರಿ

ಜಿಂಬಾಬ್ವೆ ಸರಣಿಯಲ್ಲಿ ಭಾಗವಹಿಸಲಿರುವ ಭಾರತೀಯ ಆಟಗಾರರ ಬಳಗ ಈಗಾಗಲೇ ಹರಾರೆಗೆ ತಲುಪಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಈ ಸಂದರ್ಭದಲ್ಲಿ ವಾಶಿಂಗ್ಟನ್ ಗಾಯದ ವಿಚಾರವಾಗಿ ಬಿಸಿಸಿಐನ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಜಿಂಬಾಬ್ವೆ ಸರಣಿಯಿಂದ ವಾಶಿಂಗ್ಟನ್ ಸುಂದರ್ ಹೊರಬಿದ್ದಿದ್ದಾರೆ. ರಾಯಲ್ ಲಂಡನ್ ಕಪ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಎಡ ಭುಜಕ್ಕೆ ಅವರು ಗಾಯಗೊಂಡಿದ್ದಾರೆ. ಅವರು ಬೆಂಗಳೂರಿನ ಎನ್‌ಸಿಎನಲ್ಲಿ ರಿಹ್ಯಾಬ್‌ನಲ್ಲಿ ಭಾಗಿಯಾಗಲಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.

ಜಿಂಬಾಬ್ವೆ ವಿರುದ್ಧದ ಸರಣಿಗೆ ಕ್ಷಣಗಣನೆ

ಜಿಂಬಾಬ್ವೆ ವಿರುದ್ಧದ ಸರಣಿಗೆ ಕ್ಷಣಗಣನೆ

ಆಗಸ್ಟ್ 18ರಿಂದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಆರಂಭವಾಗಲಿದ್ದು ಕೆಎಲ್ ರಾಹುಲ್ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಕೆಎಲ್ ರಾಹುಲ್ ಕೂಡ ಗಾಯದಿಂದಾಗಿ ಕಳೆದ ಸುಮಾರು ಎರಡು ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವುಳಿದಿದ್ದರು. ಈ ಸರಣಿಯ ಮೂಲಕ ರಾಹುಲ್ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಹಿತ ಕೆಲ ಪ್ರಮುಖ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಮೊದಲಿಗೆ ಶಿಖರ ಧವನ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಬಳಿಕ ರಾಹುಲ್‌ಗೆ ಈ ಜವಾಬ್ಧಾರಿ ವಹಿಸಲಾಗಿದೆ.

ಪದೇ ಪದೇ ಗಾಯಕ್ಕೆ ಒಳಗಾಗುತ್ತಿರುವ ಸುಂದರ್

ಪದೇ ಪದೇ ಗಾಯಕ್ಕೆ ಒಳಗಾಗುತ್ತಿರುವ ಸುಂದರ್

ಕಳೆದ ಒಂದು ವರ್ಷದಿಂದ ವಾಶಿಂಗ್ಟನ್ ಸುಂದರ್ ಪದೇ ಪದೇ ಗಾಯ ಹಾಘೂ ಕೊರೊನಾ ಕಾರಣದಿಂದಾಗಿ ಹಲವು ಸರಣಿಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. 2021ರ ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಿದ್ಧತೆಯ ಭಾಗವಾಗಿ ಅಭ್ಯಾಸ ಪಂದ್ಯದಲ್ಲಿ ಆಡುತ್ತಿದ್ದಾಗ ಬೆರಳಿನ ಗಾಯಕ್ಕೆ ಒಳಗಾಗಿದ್ದರು. ಅದಾದ ಬಳಿಕ ಒಂದಾದ ಬಳಿಕ ಮತ್ತೊಂದರಂತೆ ಗಾಯಕ್ಕೆ ಒಳಗಾಗುತ್ತಿದ್ದಾರೆ.

ಬೆರಳಿನ ಗಾಯಕ್ಕೆ ಒಳಗಾದ ಬಳಿಕ ಸಂಪೂರ್ಣ ದೇಶೀಯ ಕ್ರಿಕೆಟ್ ಋತುವನ್ನು ವಿಶ್ರಾಂತಿಯಲ್ಲಿಯೇ ಕಳೆದ ಸುಂದರ್ ದಕ್ಷಿಣ ಆಫ್ರಿಕಾ ವಿರುದ್ಧದ ಜನವರಿಯಲ್ಲಿ ನಡೆದ ಸರಣಿಗೆ ಮುನ್ನ ಕೋರೊನಾವೈರಸ್‌ಗೆ ತುತ್ತಾದರು. ಅದಾಗಿ ಒಂದು ತಿಂಗಳ ಬಳಿಕ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ತವರಿನಲ್ಲಿ ನಡೆದ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದಲೂ ಹೊರಗುಳಿದರು. ಐಪಿಎಲ್‌ನಿಂದಲೂ ಕೆಲ ಪಂದ್ಯಗಳಲ್ಲಿ ಸುಂದರ್ ಆಡಿರಲಿಲ್ಲ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 16, 2022, 13:00 [IST]
Other articles published on Aug 16, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X