ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಶಂಕರ್ ಅಬ್ಬರ: ನ್ಯೂಜಿಲೆಂಡ್ ವಿರುದ್ಧ ಮನೀಶ್ ಪಾಂಡೆ ಪಡೆಗೆ ಜಯ

India A beat New Zealand A in first unofficial one day match

ಬೇ ಓವಲ್, ಡಿಸೆಂಬರ್ 8: ಆಲ್‌ರೌಂಡರ್ ವಿಜಯ್ ಶಂಕರ್ ಮತ್ತು ಶ್ರೇಯಸ್ ಅಯ್ಯರ್ ಅವರ ಅಮೋಘ ಅರ್ಧಶತಕಗಳ ನೆರವಿನಿಂದ ಭಾರತ ಎ ತಂಡವು ನ್ಯೂಜಿಲೆಂಡ್ ಎ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ.

ಈ ಮೂಲಕ ಮನೀಶ್ ಪಾಂಡೆ ನೇತೃತ್ವದ ಭಾರತ ತಂಡ ಮೂರು ಅನಧಿಕೃತ ಏಕದಿನ ಪಂದ್ಯಗಳ ಸರಣಿಯಲ್ಲಿ 1-0ರ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ನಾಯಕ ಮನೀಶ್ ಪಾಂಡೆ ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನ್ಯೂಜಿಲೆಂಡ್‌ನ ಜಾರ್ಜ್ ವರ್ಕರ್ ಮತ್ತು ಹಮೀಶ್ ರುದರ್ ಫೋರ್ಡ್ ಉತ್ತಮ ಆರಂಭ ಒದಗಿಸಿದರು. ಕೊನೆಯಲ್ಲಿ ಟಿಮ್ ಸೀಫರ್ಟ್ ಮತ್ತು ಜೇಮ್ಸ್ ನೀಶಮ್ ಬಿರುಸಿನ ಆಟವಾಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಅಜರುದ್ದೀನ್‌ಗೆ ನಿಷೇಧ ತೆರವಾಗಿದೆ, ನನಗೇಕಿಲ್ಲ?: ಶ್ರೀಶಾಂತ್ ಅಳಲುಅಜರುದ್ದೀನ್‌ಗೆ ನಿಷೇಧ ತೆರವಾಗಿದೆ, ನನಗೇಕಿಲ್ಲ?: ಶ್ರೀಶಾಂತ್ ಅಳಲು

ನೀಶಮ್ ಕೇವಲ 48 ಎಸೆತಗಳಲ್ಲಿ 79 ರನ್ ಗಳಿಸಿದರು. ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 308 ರನ್ ಪೇರಿಸಿತು.

ಭಾರತದ ಪರ ಸಿದ್ಧಾರ್ಥ್ ಕೌಲ್ ಎರಡು ವಿಕೆಟ್ ಪಡೆದರೆ, ಖಲೀಲ್ ಅಹ್ಮದ್, ನವದೀಪ್ ಸೈನಿ, ಕೆ. ಗೌತಮ್ ತಲಾ ಒಂದು ವಿಕೆಟ್ ಪಡೆದರು.

ಸವಾಲಿನ ಮೊತ್ತ ಬೆನ್ನತ್ತಿದ ಭಾರತ ಎ ತಂಡಕ್ಕೆ ಮಯಾಂಕ್ ಅಗರವಾಲ್ ಮತ್ತು ಶುಭ್‌ಮನ್ ಗಿಲ್ ಬಿರುಸಿನ ಆರಂಭ ನೀಡಿದರು. ಆದರೆ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ಇಬ್ಬರೂ ವಿಫಲರಾದರು.

1ನೇ ಟೆಸ್ಟ್: ಪೂಜಾರ ಅಭಯ, ಆಸೀಸ್ ವಿರುದ್ಧ ಭಾರತ ಇನ್ನಿಂಗ್ಸ್ ಮುನ್ನಡೆ1ನೇ ಟೆಸ್ಟ್: ಪೂಜಾರ ಅಭಯ, ಆಸೀಸ್ ವಿರುದ್ಧ ಭಾರತ ಇನ್ನಿಂಗ್ಸ್ ಮುನ್ನಡೆ

ತಂಡದ ಮೊತ್ತ 9 ಓವರ್‌ಗಳಲ್ಲಿ 61 ಆಗಿದ್ದಾಗ 24 ರನ್ ಗಳಿಸಿದ್ದ ಮಯಾಂಕ್ ಔಟಾದರು. ಮೂರೇ ಓವರ್‌ಗಳಲ್ಲಿ ಗಿಲ್ ಕೂಡ 37 ರನ್‌ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಮನೀಶ್ ಪಾಂಡೆ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಜತೆಯಾಟ ನೀಡಿದರು. ಶ್ರೇಯಸ್ ಅಯ್ಯರ್ 54 ರನ್ ಗಳಿಸಿದರೆ, ಮನೀಶ್ ಪಾಂಡೆ 42 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ತ್ವರಿತಗತಿಯಲ್ಲಿ 200 ವಿಕೆಟ್ ಗಳಿಸಿ 82 ವರ್ಷ ಹಳೆ ದಾಖಲೆ ಮುರಿದ ಯಾಸಿರ್ ಶಾತ್ವರಿತಗತಿಯಲ್ಲಿ 200 ವಿಕೆಟ್ ಗಳಿಸಿ 82 ವರ್ಷ ಹಳೆ ದಾಖಲೆ ಮುರಿದ ಯಾಸಿರ್ ಶಾ

159 ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ವಿಜಯ್ ಶಂಕರ್ ಮತ್ತು ಇಶಾನ್ ಕಿಶನ್ ಆಸರೆಯಾದರು. ಇಬ್ಬರೂ ಐದನೇ ವಿಕೆಟ್‌ಗೆ 116 ರನ್ ಸೇರಿಸಿದರು. ಕಿಶನ್ 47 ರನ್ ಗಳಿಸಿ ಔಟಾದರೂ, ಇನ್ನೊಂದೆಡೆ ವಿಜಯ್ ಶಂಕರ್ (87*/80) ತಂಡವನ್ನು ಗೆಲುವಿನ ದಡ್ಡಕ್ಕೆ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಎ: 308/6 (50) ಹಮೀಶ್ ರುದರ್ ಫೋರ್ಡ್ 70, ಜೇಮ್ಸ್ ನೀಶಮ್ 79, ಟಿಮ್ ಸೀಫೆರ್ಟ್ 59, ಜಾರ್ಜ್ ವರ್ಕರ್ 35, ಸಿದ್ಧಾರ್ಥ್ ಕೌಲ್ 74/2, ಕೆ. ಗೌತಮ್ 46/1

ಭಾರತ ಎ: 311/6 (49) ವಿಜಯ್ ಶಂಕರ್ 87*, ಶ್ರೇಯಸ್ ಅಯ್ಯರ್ 54, ಇಶಾನ್ ಕಿಶನ್ 47, ಮನೀಶ್ ಪಾಂಡೆ 42, ಶುಭ್ ಮನ್ ಗಿಲ್ 37, ಹಮೀಶ್ ಬೆನೆಟ್ 65/2, ಲೊಕಿ ಫರ್ಗ್ಯೂಸನ್ 75/2

Story first published: Saturday, December 8, 2018, 16:51 [IST]
Other articles published on Dec 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X