ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾವಿಲ್ಲಿ ಬಂದಿದ್ದೇ ಗೆಲ್ಲುವುದಕ್ಕೆ: ಐತಿಹಾಸಿಕ ಜಯದ ಬಳಿಕ ನಾಯಕ ಕೊಹ್ಲಿ ಪ್ರತಿಕ್ರಿಯೆ

India are here to win: team India skipper Virat Kohli on victory against England
ಗೆಲುವು ನಮ್ ಕಡೆ ಇದೆ ಅಂತ ಗೊತ್ತಾಗಿದ್ದು ಈ ಆಟಗಾರ ಬಂದ್ಮೇಲೆ ಎಂದ ವಿರಾಟ್ | Oneindia Kannada

ಓವಲ್‌ನಲ್ಲಿ ನಡೆಸಿ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ದಾಖಲಿಸಿದೆ. ಈ ಐತಿಹಾಸಿಕ ಗೆಲುವಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ತಂಡ ನೀಡಿದ ಒಟ್ಟಾರೆ ಪ್ರದರ್ಶನದಿಂದಾಗಿ ತನಗೆ ಹೆಮ್ಮೆಯಾಗುತ್ತಿದೆ ಎಂದು ವಿರಾಟ್ ಕೊಹ್ಲಿ ವಿವರಿಸಿದ್ದಾರೆ. ಇನ್ನು ಅಂತಿಮ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು 10 ವಿಕೆಟ್ ಪಡೆಯುವ ವಿಶ್ವಾಸವಿತ್ತು ಎಂದಿದ್ದಾರೆ.

368 ರನ್‌ಗಳ ದಾಖಲೆಯ ಗೆಲುವಿನ ಗುರಿ ಪಡೆದ ಇಂಗ್ಲೆಂಡ್ ತಂಡ ಅದ್ಭುತವಾದ ಆರಂಭವನ್ನು ಪಡೆದುಕೊಂಡಿತ್ತು. ಆದರೆ ಬಳಿಕ ಅದಕ್ಕೆ ತದ್ವಿರುದ್ಧವಾಗಿ ಆಘಾತಕಾರಿಯಾಗಿ ಕುಸಿತವನ್ನು ಕೂಡ ಕಂಡಿತು. ಅದರಲ್ಲೂ ಭೀಜನ ವಿರಾಮದ ಬಳಿಕ ಇಂಗ್ಲೆಂಡ್ ತಂಡ ಎರಡನೇ ಸೆಶನ್‌ನಲ್ಲಿ ಆರು ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿನತ್ತ ಸ್ಪಷ್ಟವಾಗಿ ಮುಖಮಾಡಿತ್ತು. ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರಾದ ಹಸೀಬ್ ಹಮೀದ್ (63 ರನ್) ಹಾಗೂ ರೋರಿ ಬರ್ನ್ಸ್ (50 ರನ್) ಮೊದಲ ವಿಕೆಟ್‌ಗೆ ಭರ್ಜರಿ 100 ರನ್‌ಗಳ ಜೊತೆಯಾಟವನ್ನು ನೀಡಿದ್ದರು. ಈ ಜೋಡಿ ಬೇರ್ಪಟ್ಟ ಬಳಿಕ ಇಂಗ್ಲೆಂಡ್ ಪರವಾಗಿ ಯಾರು ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲೇ ಇಲ್ಲ. ತಂಡದ ಮೊತ್ತ 210 ರನ್‌ಗಳಾಗುವಷ್ಟರಲ್ಲಿ ತಂಡದ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲು ಕಂಡಿತ್ತು.

10 ವಿಕೆಟ್ ಪಡೆಯುವ ವಿಶ್ವಾಸ

10 ವಿಕೆಟ್ ಪಡೆಯುವ ವಿಶ್ವಾಸ

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತನಾಡಿದರು. ಭಾರತೀಯ ತಂಡ 10 ವಿಕೆಟ್‌ಗಳನ್ನು ತೆಗೆಯಬಹುದು ಎಂಬ ವಿಶ್ವಾಸವನ್ನು ಇಟ್ಟುಕೊಂಡಿತ್ತು. ಚೆಂಡು ರಿವರ್ಸ್ ಪಡೆಯಲು ಆರಂಭವಾಗುತ್ತಿದ್ದಂತೆಯೇ ಜಸ್ಪ್ರೀತ್ ಬೂಮ್ರಾ ಚೆಂಡನ್ನು ಕೇಳಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಎರಡು ವಿಕೆಟ್‌ಗಳನ್ನು ಒಂದರ ಹಿಂದೊಂದರಂತೆ ಪಡೆಯುವ ಮೂಲಕ ಪಂದ್ಯವನ್ನು ಭಾರತದತ್ತ ತಿರುಗಿಸಿದರು ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.

ನಾವು ಗೆಲ್ಲಲೆಂದೇ ಬಂದಿದ್ದೇವೆ

ನಾವು ಗೆಲ್ಲಲೆಂದೇ ಬಂದಿದ್ದೇವೆ

"ನನ್ನ ಪ್ರಕಾರ ಎರಡು ಇನ್ನಿಂಗ್ಸ್‌ಗಳಲ್ಲಿ ನಾವು ಪ್ರದರ್ಶಿಸಿದ ಆಟದ ಪ್ರವೃತ್ತಿ ಈ ಪಂದ್ಯದ ಅತ್ಯುತ್ತಮವಾದ ಅಂಶವಾಗಿದೆ. ನಾವು ಈ ಪಂದ್ಯವನ್ನು ರಕ್ಷಿಸಿಕೊಳ್ಳುವತ್ತ ಗಮನಹರಿಸಲೇ ಇಲ್ಲ. ನಾವಿಲ್ಲಿ ಗೆಲ್ಲಲೆಂದೇ ಬಂದಿದ್ದೇವೆ. ನಮ್ಮ ತಂಡ ತೋರಿದ ಪ್ರದರ್ಶನಕ್ಕೆ ನಾನು ಹೆಮ್ಮೆ ಪಡುತ್ತೇನೆ" ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ರಿವರ್ಸ್‌ಸ್ವಿಂಗ್‌ಅನ್ನು ಪರಿಣಾಮಕಾರಿಯಾಗು ಬಳಸಿಕೊಂಡಿರುವುದಕ್ಕೆ ನಾಯಕ ಕೊಹ್ಲಿ ಪ್ರಶಂಸಿದರು. "ಈ ಪಿಚ್ ಫ್ಯಾಟ್ ಆಗಿದ್ದು ಜೊತೆಗೆ ಇಲ್ಲಿ ವಾತಾವರಣವೂ ಸಾಕಷ್ಟು ಬಿಸಿಯಾಗಿತ್ತು. ಒಂದು ತುದಿಯಲ್ಲಿ ಜಡೇಜಾ ಬೌಲಿಂಗ್ ನಡೆಸುತ್ತಿದ್ದಾಗ ನಮಗೆ ಅವಕಾಶವಿದೆ ಎಂದು ತಿಳಿದಿತ್ತು. ಜೊತೆಗೆ ಬೌಲ್‌ಗಳು ರಿವರ್ಸ್‌ವಿಂಗ್‌ನಲ್ಲಿಯೂ ಅದ್ಭುತವಾಗಿ ಪ್ರದರ್ಶನ ನೀಡಿದರು" ಎಂದಿದ್ದಾರೆ ವಿರಾಟ್ ಕೊಹ್ಲಿ.

ರೋಹಿತ್ ಪ್ರದರ್ಶನಕ್ಕೆ ಕೊಹ್ಲಿ ಮೆಚ್ಚುಗೆ

ರೋಹಿತ್ ಪ್ರದರ್ಶನಕ್ಕೆ ಕೊಹ್ಲಿ ಮೆಚ್ಚುಗೆ

ಇನ್ನು ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದರು. "ರೋಹಿತ್ ಶರ್ಮಾ ಅವರ ಇನ್ನಿಂಗ್ಸ್ ಅದ್ಭುತವಾಗಿತ್ತು. ಶಾರ್ದೂಲ್ ಈ ಪಂದ್ಯದಲ್ಲಿ ನೀಡಿದ ಪ್ರದರ್ಶನ ವಿಶೇಷವಾಗಿ ನಿಲ್ಲುತ್ತದೆ. ಅವರ ಎರಡು ಅರ್ಧ ಶತಕಗಳು ಎದುರಾಳಿಯನ್ನು ಕುಸಿಯುವಂತೆ ಮಾಡಿತ್ತು. ನನ್ನ ಪ್ರಕಾರ ಅವರು ಎರಡು ಇನ್ನಿಂಗ್ಸ್‌ನಲ್ಲಿಯೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು" ಎಂದು ವಿರಾಟ್ ಕೊಹ್ಲಿ ವಿವರಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಈ ಪಂದ್ಯದಲ್ಲಿನ ಗೆಲುವು ಭಾರತೀಯ ತಂಡಕ್ಕೆ ಮುಂದಿನ ಪಂದ್ಯವನ್ನು ಕೂಡ ಗೆಲ್ಲಲು ಸ್ಪೂರ್ತಿ ನೀಡಿದೆ ಎಂದಿದ್ದಾರೆ ವಿರಾಟ್ ಕೊಹ್ಲಿ. "ಇದು ನಮಗೆ ಮುಂದಿನ ಪಂದ್ಯವನನ್ಉ ಕೂಡ ಗೆಲ್ಲಲು ಹೆಚ್ಚಿನ ಸ್ಪೂರ್ತಿಯನ್ನು ನೀಡಿದೆ. ನಮಗೆ ನಂಬಿಕೆಯಿದೆ, ಹೀಗಾಗಿ ನಾವು ಮುಂದಿನ ಪಂದ್ಯದಲ್ಲಿ ದೊರೆಯುವ ಅವಕಾಶಗಳಿಗಾಗಿ ಕಾಯುತ್ತಿರುತ್ತೇವೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.

Story first published: Tuesday, September 7, 2021, 10:03 [IST]
Other articles published on Sep 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X