ಕ್ರಿಕೆಟ್‌: ವಿಜಯದತ್ತ ಭಾರತ ಚಿತ್ತ, ತಂಡದಲ್ಲಿ ಬದಲಾವಣೆ ಇಲ್ಲ

Posted By:
India eye on victory against S.Africa in 3rd one day cricket match

ಬೆಂಗಳೂರು, ಫೆಬ್ರವರಿ 06: ದಕ್ಷಿಣ ಆಫ್ರಿಕಾ ವಿರುದ್ಧ 6 ಏಕದಿನ ಪಂದ್ಯದ ಸರಣಿಯಲ್ಲಿ ಈಗಾಗಲೇ 2-0 ಮುನ್ನಡೆ ಪಡೆದಿರುವ ಭಾರತವು ನಾಳೆ (ಬುಧವಾರ) ಕೇಪ್‌ಟೌನ್‌ನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಗೆಲುವಿನ ಮೇಲೆ ಗುರಿ ನೆಟ್ಟಿದೆ.

ಮೊದಲ ಎರಡು ಏಕದಿನ ಪಂದ್ಯದಲ್ಲಿ ಪ್ರಾಬಲ್ಯ ಪೂರ್ವಕ ಗೆಲುವು ಪಡೆದ ಭಾರತ ತಂಡ ಅತಿಥೇಯ ದ.ಆಫ್ರಿಕಾವನ್ನು ಕ್ರಿಕೆಟ್‌ನ ಎಲ್ಲ ವಿಭಾಗಗಳಲ್ಲೂ ಸೋಲಿಸಿತು. ಅದರಲ್ಲಿಯೂ ಬೌಲಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಭಾರತ ನಾಳೆಯೂ ಗೆಲ್ಲುವ ಫೇವರೇಟ್ ಎನಿಸಿಕೊಂಡಿದೆ.

ದ.ಆಫ್ರಿಕಾ ತಂಡವು ತನ್ನ ಸ್ಟಾರ್ ಆಟಗಾರರಾದ ಎಬಿ ಡಿವಿಲಿಯರ್ಸ್ ಮತ್ತು ಫಾಪ್ ಡು ಪ್ಲಿಸಿಸ್ ಅವರನ್ನು ಗಾಯದಿಂದಾಗಿ ಕಳೆದುಕೊಂಡು ನಷ್ಟ ಅನುಭವಿಸಿದ್ದರೆ ನಾಳಿನ ಪಂದ್ಯದಿಂದ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಕೀಪರ್ ಕ್ವಿಂಟನ್ ಡಿ ಕಾಕ್ ಕೂಡ ಗಾಯದ ಸಮಸ್ಯೆಯಿಂದ ಅಂಗಳದಿಂದ ಹೊರಗುಳಿಯಲಿದ್ದಾರೆ. ಇದು ದ.ಆಫ್ರಿಕಾಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಭಾರತ ತಾನು ಮೊದಲೆರೆಡು ಪಂದ್ಯದಲ್ಲಿ ಆಡಿಸಿದ್ದ ಆಟಗಾರರನ್ನೇ ಕಣಕ್ಕಿಳಿಸುತ್ತಿದ್ದು, ಹೊಸ ಪ್ರಯೋಗಗಳನ್ನು ಮಾಡುವ ಅಪಾಯವನ್ನು ತೆಗೆದುಕೊಳ್ಳುವುದು ಅನುಮಾನ. ಭಾರತ ತಂಡದ್ದೇನಿದ್ದರೂ ಈಗ ಸರಣಿ ಗೆಲುವಿನ ಮೇಲೆ ಕಣ್ಣು, ಸರಣಿ ಗೆಲುವಿನ ನಂತರ ಬೆಂಚು ಕಾಯಿಸಿದ್ದ ಆಟಗಾರರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗಬಹುದು.

ಯುಜವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಭಾರತದ ಹೊಸ ಸ್ಪಿನ್‌ ಜೋಡಿಯಾಗಿ ಉದಯಿಸಿದ್ದು, ಎರಡು ಏಕದಿನ ಪಂದ್ಯದಲ್ಲಿ ಒಟ್ಟು 13 ವಿಕೆಟ್ ಅವರಿಬ್ಬರು ಬುಟ್ಟಿಗೆ ಹಾಕಿಕೊಂಡಿದ್ದಾರೆ.

ನಾಳಿನ (ಬುಧವಾರ) ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಆಡುವ 11 ಆಟಗಾರರ ಪಟ್ಟಿ ಇಂತಿದೆ... ಪಂದ್ಯ ಭಾರತೀಯ ಕಾಲಮಾನ 4.30ಕ್ಕೆ ಪ್ರಾರಂಭವಾಗಲಿದೆ.

1) ರೋಹಿತ್ ಶರ್ಮಾ
2) ಶಿಖರ್ ಧವನ್
3) ವಿರಾಟ್ ಕೋಹ್ಲಿ (ನಾಯಕ)
4) ಅಜಿಂಕ್ಯಾ ರಹಾನೆ
5) ಕೇದಾರ್ ಜಾದವ್
6) ಎಂಎಸ್ ಧೋನಿ (ಕೀಪರ್)
7) ಹಾರ್ದಿಕ್ ಪಾಂಡ್ಯಾ
8) ಭುವನೇಶ್ವರ್ ಕುಮಾರ್
9) ಯುಜವೇಂದ್ರ ಚಾಹಲ್
10) ಕುಲದೀಪ್ ಯಾದವ್
11) ಜಸ್ಪ್ರೀತ್ ಬುಮ್ರಾ

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, February 6, 2018, 18:45 [IST]
Other articles published on Feb 6, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ