ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಪಾಕಿಸ್ತಾನದ ಇಮ್ರಾನ್ ಖಾನ್ ಮಾರ್ಗವನ್ನು ಅನುಸರಿಸಿ ಗೆದ್ದಿದ್ದಾರೆ ಎಂದ ಮಾಜಿ ಆಟಗಾರ

 India is doing what we used to do under Imran Khan says Ramiz Raja
ಅಂದು ಇಮ್ರಾನ್ ಖಾನ್ ಮಾಡಿದ್ದನ್ನ ಇಂದು ವಿರಾಟ್ ಕೊಹ್ಲಿ ಮಾಡ್ತಿದ್ದಾರೆ | Oneindia Kannada

ಟೀಮ್ ಇಂಡಿಯಾ ಜೂನ್ 3ರಂದು ಇಂಗ್ಲೆಂಡ್‌ನ ಸೌತಾಂಪ್ಟನ್ ತಲುಪಲಿದ್ದು ಜೂನ್ 18ರಂದು ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಳ್ಳಲಿರುವ ಟೀಮ್ ಇಂಡಿಯಾ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ಐಪಿಎಲ್‌ನಲ್ಲಿ ಕೊಹ್ಲಿ ಮಾತು ಕೇಳದೇ ಜೆಮಿಸನ್ ಒಳ್ಳೆಯ ಕೆಲಸ ಮಾಡಿದ್ದಾನೆ; ಟಿಮ್ ಸೌಥಿ ಪ್ರಶಂಸೆ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ದೊಡ್ಡ ಪ್ರಮಾಣದಲ್ಲಿ ಚರ್ಚೆಗಳಾಗುತ್ತಿದ್ದು ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ಯಾವ ತಂಡ ಗೆಲ್ಲಲಿದೆ ಎಂಬುದನ್ನು ಊಹಿಸಿದ್ದಾರೆ. ಇದೀಗ ಪಾಕಿಸ್ತಾನದ ಮಾಜಿ ಆಟಗಾರ ರಮೀಜ್ ರಾಜಾ ಕೂಡ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿದ್ದು ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್‌ಗೆ ಹೋಲಿಕೆ ಮಾಡಿದ್ದಾರೆ.

ಆ ಪಂದ್ಯದಿಂದ ನಾನು ಕೆಟ್ಟವನಾಗಿ ತಂಡದಿಂದ ಹೊರಬಿದ್ದೆ, ಎಷ್ಟೋ ರಾತ್ರಿ ನಿದ್ರೆ ಮಾಡಿರಲಿಲ್ಲ: ರವೀಂದ್ರ ಜಡೇಜಾ

'ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ತುಂಬಾ ಬಲಿಷ್ಠವಾಗಿದೆ. ವಿರಾಟ್ ಕೊಹ್ಲಿಯ ಆಕ್ರಮಣಕಾರಿ ನಾಯಕತ್ವ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆಟದ ಯೋಜನೆ ಆಕ್ರಮಣಶೀಲತೆಯಿಂದ ಕೂಡಿದ್ದು ತಂಡದಲ್ಲಿ ನಕಾರಾತ್ಮಕ ಅಂಶಗಳಿಗೆ ಸ್ಥಾನವಿರುವುದಿಲ್ಲ. ಹೀಗಾಗಿ ಮುಕ್ತವಾಗಿ ಆಟವನ್ನು ಆಡುತ್ತಾ ಎದುರಾಳಿಗಳ ಮೇಲೆ ಪ್ರಾಬಲ್ಯವನ್ನು ಸಾಧಿಸಬಹುದು. ಇದೇ ಮಾದರಿಯನ್ನು ನಾವು ಇಮ್ರಾನ್ ಖಾನ್ ನಾಯಕತ್ವದಲ್ಲಿ ಅನುಸರಿಸುತ್ತಿದ್ದೆವು. ಇದೀಗ ವಿರಾಟ್ ಕೊಹ್ಲಿ ಕೂಡ ಇಮ್ರಾನ್ ಖಾನ್ ರೀತಿಯಲ್ಲಿಯೇ ತಂಡವನ್ನು ಮುನ್ನಡೆಸುತ್ತಿದ್ದಾರೆ' ಎಂದು ರಮೀಜ್ ರಾಜಾ ಹೇಳಿದ್ದಾರೆ.

Story first published: Tuesday, June 1, 2021, 16:07 [IST]
Other articles published on Jun 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X