ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?

India playing with their weakest playing XI against strongest Australian playing XI

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಬಹಳಷ್ಟು ಆಟಗಾರರು ಗಾಯಗೊಂಡು ತಂಡದಿಂದ ಹೊರ ಬಿದ್ದಿದ್ದಾರೆ. ಮುಖ್ಯವಾಗಿ ಅನುಭವಿಗಳೇ ಅತೀ ಕಡಿಮೆ ಸಂಖ್ಯೆಯಲ್ಲಿರುವ ಪ್ಲೇಯಿಂಗ್‌ XI ಈಗ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ನಾಲ್ಕನೇ ಮತ್ತು ಕೊನೇಯ ಟೆಸ್ಟ್ ಪಂದ್ಯ ಆಡುತ್ತಿದೆ. ಭಾರತದ ಪ್ರವಾಸದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಟಗಾರರು ಗಾಯಗೊಂಡಿದ್ದು ಬಹುಶಃ ಇದೇ ಮೊದಲಬಾರಿ ಎನ್ನುವ ಹಾಗೆ ಟೀಮ್ ಇಂಡಿಯಾ ಗಾಯದ ಸಮಸ್ಯೆ ಎದುರಿಸುತ್ತಿದೆ.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ಸದ್ಯ ಪ್ರವಾಸಿ ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ಮಧ್ಯೆ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟೆಸ್ಟ್ ಸರಣಿಯೀಗ 1-1ರಿಂದ ಸಮಬಲಗೊಂಡಿರುವುದರಿಂದ ಕೊನೇ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

'ಈಗಿರುವವರಲ್ಲಿ ಈ 6 ಆಟಗಾರರನ್ನು ನನ್ನ ಟೆಸ್ಟ್ ತಂಡಕ್ಕೆ ಆರಿಸುತ್ತಿದ್ದೆ': ಗಂಗೂಲಿ'ಈಗಿರುವವರಲ್ಲಿ ಈ 6 ಆಟಗಾರರನ್ನು ನನ್ನ ಟೆಸ್ಟ್ ತಂಡಕ್ಕೆ ಆರಿಸುತ್ತಿದ್ದೆ': ಗಂಗೂಲಿ

ಆದರೆ ನಾಲ್ಕನೇ ಟೆಸ್ಟ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದೆದುರು ಅತೀ ದುರ್ಬಲ ಭಾರತೀಯ ತಂಡ ಆಡುತ್ತಿದೆ ಅನ್ನೋದು ಗೊತ್ತೇ?

ಅನುಭವಿಗಳೇ ಇಲ್ಲ

ಅನುಭವಿಗಳೇ ಇಲ್ಲ

ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿರುವ ಟೀಮ್ ಇಂಡಿಯಾ ಎದುರಾಳಿಗೆ ಹೋಲಿಸಿದರೆ ಅತ್ಯಂತ ದುರ್ಬಲವಾಗಿದೆ ಅನ್ನೋದನ್ನು ಅಂಕಿ-ಅಂಶಗಳು ಹೇಳುತ್ತವೆ. ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಮಿಚೆಲ್ ಸ್ಟಾರ್ಕ್, ಟಿಮ್ ಪೈನ್, ನೇಥನ್ ಲಿಯಾನ್‌ನಂತ ಬಲಿಷ್ಠ ಅನುಭವಿಗಳಿದ್ದರೆ, ಭಾರತದಲ್ಲಿ ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಮಾತ್ರ ಅನುಭವಿಗಳು.

ನೀವೂ ಕೋಟ್ಯಾಧಿಪತಿಯಾಗಬಹುದು; ಹಣ ಗಳಿಸಲು ಇಲ್ಲಿದೆ ಸುಲಭ ದಾರಿ!

ದುರ್ಬಲ ತಂಡ ಅಂತ ಹೇಗನ್ನೋದು?

ದುರ್ಬಲ ತಂಡ ಅಂತ ಹೇಗನ್ನೋದು?

ನಾಲ್ಕನೇ ಟೆಸ್ಟ್‌ನಲ್ಲಿ ಆಡುತ್ತಿರುವ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ ಅತೀ ದುರ್ಬಲ ತಂಡ ಅಂತ ಹೇಗನ್ನೋದು? ಎರಡೂ ಆಡುವ ತಂಡಗಳ ಆಟಗಾರರ ಸಾಧನೆಯ ಅಂಕಿ-ಅಂಶಗಳನ್ನು ಗಮನಿಸಿದರೆ, ತಾಳೆ ಹಾಕಿದರೆ ಯಾವುದು ಬಲಿಷ್ಠ ತಂಡ, ಯಾವುದು ದುರ್ಬಲ ತಂಡ ಅನ್ನೋದು ಗೊತ್ತಾಗುತ್ತದೆ. ಎರಡೂ ತಂಡಗಳಿಗೂ ಹೋಲಿಸಿದರೆ ಭಾರತ ನಿಜಕ್ಕೂ ದುರ್ಬಲ ತಂಡವಾಗಿ ಕಾಣಿಸುತ್ತದೆ.

ಭಾರತ-ಆಸ್ಟ್ರೇಲಿಯಾ ಬಲಾಬಲ

ಭಾರತ-ಆಸ್ಟ್ರೇಲಿಯಾ ಬಲಾಬಲ

4ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರುವ ಆಟಗಾರರ ಅಂಕಿ-ಅಂಶಗಳನ್ನು ಗಮನಿಸಿದರೆ; ಆಸ್ಟ್ರೇಲಿಯಾ ಅತ್ಯಂತ ಬಲಿಷ್ಠ ತಂಡ, ಭಾರತ ಅತ್ಯಂತ ದುರ್ಬಲ ತಂಡ ಅನ್ನೋದಕ್ಕೆ ಕೆಳಗೆ ಅಂಕಿ ಅಂಶಗಳಿವೆ
* ಆಸ್ಟ್ರೇಲಿಯಾ: 504 ಪಂದ್ಯಗಳು, 23,767 ರನ್‌ಗಳು, 1,046 ವಿಕೆಟ್‌ಗಳು.
* ಭಾರತ: 215 ಪಂದ್ಯಗಳು, 14,814 ರನ್, 13 ವಿಕೆಟ್‌ಗಳು

ಗಾಯಕ್ಕೀಡಾಗಿರುವ ಭಾರತೀಯರು

ಗಾಯಕ್ಕೀಡಾಗಿರುವ ಭಾರತೀಯರು

* ಭುವನೇಶ್ವರ್ ಕುಮಾರ್, ತೊಡೆ ಸ್ನಾಯುಗಳ ಗಾಯ, ತಂಡದಿಂದ ಹೊರಕ್ಕೆ
* ಇಶಾಂತ್ ಶರ್ಮಾ, ಸೊಂಟ ಮತ್ತು ತೊಡೆ ಮೂಳೆ ಸೇರುವಲ್ಲಿ ನೋವು, ತಂಡದಿಂದ ಹೊರಕ್ಕೆ
* ಮೊಹಮ್ಮದ್ ಶಮಿ, ಬಲಗೈಗೆ ಗಾಯ, ತಂಡದಿಂದ ಹೊರಕ್ಕೆ
* ಉಮೇಶ್ ಯಾದವ್, ಕಾಲಿನ ಹಿಂಬಾಗದ ಸ್ನಾಯುಗಳು (ಕಾಫ್) ಬೇನೆ, ತಂಡದಿಂದ ಹೊರಕ್ಕೆ
* ಕೆಎಲ್ ರಾಹುಲ್, ಕೈಯ ಮಣಿಕಟ್ಟು ಗಾಯ, ತಂಡದಿಂದ ಹೊರಕ್ಕೆ
* ಹನುಮ ವಿಹಾರಿ, ಹ್ಯಾಮ್‌ಸ್ಟ್ರಿಂಗ್, ತಂಡದಿಂದ ಹೊರಕ್ಕೆ
* ರವೀಂದ್ರ ಜಡೇಜಾ, ಹೆಬ್ಬೆಟ್ಟಿಗೆ ಗಾಯ, ತಂಡದಿಂದ ಹೊರಕ್ಕೆ
* ಜಸ್‌ಪ್ರೀತ್‌ ಬೂಮ್ರಾ, ಕಿಬ್ಬೊಟ್ಟೆ ನೋವು, ತಂಡದಿಂದ ಹೊರಕ್ಕೆ
* ರವಿಚಂದ್ರನ್ ಅಶ್ವಿನ್, ಬೆನ್ನುನೋವು, ತಂಡದಿಂದ ಹೊರಕ್ಕೆ

Story first published: Monday, January 18, 2021, 14:15 [IST]
Other articles published on Jan 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X