ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ 3ನೇ ಏಕದಿನ: ಈ ಮೂವರು ಹಿರಿಯರನ್ನು ತಂಡದಿಂದ ಹೊರಗಿಡಿ ಎಂದ ಗಂಭೀರ್!

India should give opportunity to these players in 3rd ODI against South Africa says Gautam Gambhir

ದಕ್ಷಿಣ ಆಫ್ರಿಕಾದಲ್ಲಿ ಕಳೆದೊಂದು ತಿಂಗಳಿನಿಂದ ಬೀಡುಬಿಟ್ಟಿರುವ ಟೀಂ ಇಂಡಿಯಾ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಹೌದು, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೊದಲಿಗೆ ಹರಿಣಗಳ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತಿತ್ತು ಹಾಗೂ ಸದ್ಯ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಕೂಡ ತನ್ನ ಕಳಪೆ ಪ್ರದರ್ಶನವನ್ನು ಮುಂದುವರಿಸಿರುವ ಟೀಂ ಇಂಡಿಯಾ ಈಗಾಗಲೇ ಮುಗಿದಿರುವ ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತು ಸರಣಿಯಲ್ಲಿ ಸೋಲನ್ನು ಅನುಭವಿಸಿದೆ.

ನಾಯಕತ್ವದ ನಿಜವಾದ ಒತ್ತಡ ರೋಹಿತ್‌ಗೆ ಆ ಪಂದ್ಯದಲ್ಲಿ ಅರ್ಥವಾಗಲಿದೆ ಎಂದು ಎಚ್ಚರಿಸಿದ ಮಾಜಿ ಕ್ರಿಕೆಟಿಗ!ನಾಯಕತ್ವದ ನಿಜವಾದ ಒತ್ತಡ ರೋಹಿತ್‌ಗೆ ಆ ಪಂದ್ಯದಲ್ಲಿ ಅರ್ಥವಾಗಲಿದೆ ಎಂದು ಎಚ್ಚರಿಸಿದ ಮಾಜಿ ಕ್ರಿಕೆಟಿಗ!

ಹೀಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳನ್ನು ಕೂಡ ಅನೇಕ ವರ್ಷಗಳ ನಂತರ ಸೋತಿರುವ ಟೀಮ್ ಇಂಡಿಯಾ ಭಾರೀ ದೊಡ್ಡ ಮುಖಭಂಗಕ್ಕೆ ಒಳಗಾಗಿದ್ದು, ಭಾರೀ ಟೀಕೆಗಳನ್ನು ಎದುರಿಸುತ್ತಿದೆ. ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ಇಂದು ( ಜನವರಿ 23 ) ಕೇಪ್ ಟೌನ್‌‌ನ ನ್ಯೂಲೆಂಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

ಕೊಹ್ಲಿ, ರಾಹುಲ್ ನಡುವೆ ಬಿರುಕಿದೆ; ಇದಕ್ಕೆ ಪಂದ್ಯದ ವೇಳೆ ನಡೆದ ಈ ಘಟನೆಯೇ ಸಾಕ್ಷಿ ಎಂದ ಮಾಜಿ ಕ್ರಿಕೆಟಿಗಕೊಹ್ಲಿ, ರಾಹುಲ್ ನಡುವೆ ಬಿರುಕಿದೆ; ಇದಕ್ಕೆ ಪಂದ್ಯದ ವೇಳೆ ನಡೆದ ಈ ಘಟನೆಯೇ ಸಾಕ್ಷಿ ಎಂದ ಮಾಜಿ ಕ್ರಿಕೆಟಿಗ

ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿರುವುದರಿಂದ ಇದೀಗ ಅಂತಿಮ ಪಂದ್ಯದ ಮೇಲೆ ನಿರೀಕ್ಷೆ ಹಾಗೂ ಕುತೂಹಲಗಳು ಕಡಿಮೆ ಇವೆ ಎಂದೇ ಹೇಳಬಹುದು. ಹೌದು, 3 ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿಜೇತ ತಂಡ ಎಂಬ ಫಲಿತಾಂಶ ಈಗಾಗಲೇ ದೊರಕಿರುವುದರಿಂದ ಅಂತಿಮ ಪಂದ್ಯ ಕುತೂಹಲ ಹಾಗೂ ನಿರೀಕ್ಷೆಗಳನ್ನು ಹುಟ್ಟು ಹಾಕುವಲ್ಲಿ ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಆದರೂ ಸಹ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಆಡುವ ಬಳಗದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಪಂದ್ಯ ಗೆಲ್ಲುವ ಯೋಚನೆಯಲ್ಲಿದೆ. ಅತ್ತ ಈ ಪಂದ್ಯದ ಮೂಲಕ ಸರಣಿಯಲ್ಲಿ ಬೆಂಚ್ ಕಾದಿರುವ ಆಟಗಾರರಿಗೆ ಅವಕಾಶಗಳನ್ನು ನೀಡಬೇಕು ಎಂಬ ಅಭಿಪ್ರಾಯವನ್ನು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವ್ಯಕ್ತಪಡಿಸಿದ್ದು ಈ ಕೆಳಕಂಡ ಆಟಗಾರರನ್ನು ತಂಡದಿಂದ ಹೊರಗಿಟ್ಟು ಈ ಯುವ ಆಟಗಾರರಿಗೆ ಅವಕಾಶ ಕೊಡಬೇಕೆಂದು ಹೇಳಿಕೆ ನೀಡಿದ್ದಾರೆ.

ಈ ಮೂವರಿಗೆ ವಿಶ್ರಾಂತಿ ಕೊಡಿ ಎಂದ ಗೌತಮ್ ಗಂಭೀರ್

ಈ ಮೂವರಿಗೆ ವಿಶ್ರಾಂತಿ ಕೊಡಿ ಎಂದ ಗೌತಮ್ ಗಂಭೀರ್

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಯಾವ ಆಟಗಾರರಿಗೆ ಅವಕಾಶವನ್ನು ನೀಡಬೇಕು ಎಂಬುದರ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ಹಿರಿಯ ಆಟಗಾರರಾದ ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ತಂಡದಿಂದ ಹೊರಗಿಡಬೇಕು ಎಂದಿದ್ದಾರೆ. ಈ ಮೂವರಿಗೂ ವಿಶ್ರಾಂತಿ ನೀಡುವ ಮೂಲಕ ಇತರೆ ಆಟಗಾರರಿಗೆ ಆಡುವ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಈ ಬೌಲರ್‌ಗಳಿಗೆ ಅವಕಾಶ ನೀಡಬೇಕು ಎಂದ ಗಂಭೀರ್

ಈ ಬೌಲರ್‌ಗಳಿಗೆ ಅವಕಾಶ ನೀಡಬೇಕು ಎಂದ ಗಂಭೀರ್

ಇನ್ನೂ ಮುಂದುವರಿದು ಮಾತನಾಡಿರುವ ಗೌತಮ್ ಗಂಭೀರ್ ಹೀಗೆ ಟೀಮ್ ಇಂಡಿಯಾದ ಈ ಮೂವರು ಹಿರಿಯ ಬೌಲರ್‌ಗಳಿಗೆ ವಿಶ್ರಾಂತಿಯನ್ನು ನೀಡಿ ಸರಣಿಯಲ್ಲಿ ಬೆಂಚ್ ಕಾಯುತ್ತಿರುವ ಜಯಂತ್ ಯಾದವ್, ಪ್ರಸಿದ್ಧ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ಅವರಿಗೆ ಆಡುವ ಬಳಗದಲ್ಲಿ ಅವಕಾಶವನ್ನು ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಈ ಪಂದ್ಯದ ಮೂಲಕ ಬೆಂಚ್ ಕಾಯುತ್ತಿರುವ ಬೌಲರ್‌ಗಳಿಗೆ ಅವಕಾಶ ನೀಡಿ ಅವರನ್ನು ಪರೀಕ್ಷಿಸಬಹುದು ಎಂದು ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಬೇಡ

ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಬೇಡ

ಬೌಲಿಂಗ್ ವಿಭಾಗದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿಯನ್ನು ನೀಡಿ ಬೆಂಚ್ ಕಾಯುತ್ತಿದ್ದ ಬೌಲರ್‌ಗಳಿಗೆ ಅವಕಾಶಗಳನ್ನು ನೀಡಬೇಕು ಎಂದಿರುವ ಗೌತಮ್ ಗಂಭೀರ್ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂದಿದ್ದಾರೆ.

ಭಾರತ ಸಂಭಾವ್ಯ ಆಡುವ ಬಳಗ: ಶಿಖರ್ ಧವನ್, ರುತುರಾಜ್ ಗಾಯಕವಾಡ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ( ವಿಕೆಟ್‍ ಕೀಪರ್), ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್/ ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್/ ದೀಪಕ್ ಚಹಾರ್, ಯುಜುವೇಂದ್ರ ಚಾಹಲ್

ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿಜೇತ ತಂಡ ಎಂಬ ಫಲಿತಾಂಶ ಈಗಾಗಲೇ ದೊರಕಿರುವುದರಿಂದ ಅಂತಿಮ ಪಂದ್ಯ ಕುತೂಹಲ ಹಾಗೂ ನಿರೀಕ್ಷೆಗಳನ್ನು ಹುಟ್ಟು ಹಾಕುವಲ್ಲಿ ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಆದರೂ ಸಹ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಆಡುವ ಬಳಗದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಪಂದ್ಯ ಗೆಲ್ಲುವ ಯೋಚನೆಯಲ್ಲಿದೆ. ಅತ್ತ ಈ ಪಂದ್ಯದ ಮೂಲಕ ಸರಣಿಯಲ್ಲಿ ಬೆಂಚ್ ಕಾದಿರುವ ಆಟಗಾರರಿಗೆ ಅವಕಾಶಗಳನ್ನು ನೀಡಬೇಕು ಎಂಬ ಅಭಿಪ್ರಾಯವನ್ನು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವ್ಯಕ್ತಪಡಿಸಿದ್ದು ಈ ಕೆಳಕಂಡ ಆಟಗಾರರನ್ನು ತಂಡದಿಂದ ಹೊರಗಿಟ್ಟು ಈ ಯುವ ಆಟಗಾರರಿಗೆ ಅವಕಾಶ ಕೊಡಬೇಕೆಂದು ಹೇಳಿಕೆ ನೀಡಿದ್ದಾರೆ.

Story first published: Sunday, January 23, 2022, 12:48 [IST]
Other articles published on Jan 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X