ಕೊಹ್ಲಿ ಅನುಷ್ಕಾ ಮದುವೆಯಾಗಿ ತಪ್ಪು ಮಾಡಿದ್ರು, ನಾನಾಗಿದ್ರೆ ಮದುವೆ ಆಗುತ್ತಿರಲಿಲ್ಲ: ಮಾಜಿ ಕ್ರಿಕೆಟಿಗ!

Anushka ಜೊತೆ ಮದುವೆಯಾಗಿ ಕ್ರಿಕೆಟ್ ಬದುಕು ಹಾಳುಮಾಡಿಕೊಂಡ Virat Kohli | Oneindia Kannada

ವಿವಾದಗಳು ವಿರಾಟ್ ಕೊಹ್ಲಿಯನ್ನು ಹುಡುಕಿಕೊಂಡು ಬರುತ್ತವೆಯೋ ಅಥವಾ ವಿರಾಟ್ ಕೊಹ್ಲಿಯೇ ವಿವಾದಗಳಿಗೆ ಈಡಾಗುತ್ತಾರೋ ಗೊತ್ತಿಲ್ಲ. ಆದರೆ ಪ್ರತಿದಿನವೂ ಕ್ರಿಕೆಟ್ ಕುರಿತಾಗಿ ಹೊರಬೀಳುವ ಸುದ್ದಿಗಳಲ್ಲಿ ವಿರಾಟ್ ಕೊಹ್ಲಿ ವಿವಾದದ ಕುರಿತಾಗಿ ಒಂದಲ್ಲ ಒಂದು ವಿಷಯ ಇದ್ದೇ ಇರುತ್ತದೆ. ಒಮ್ಮೊಮ್ಮೆ ವಿರಾಟ್ ಕೊಹ್ಲಿ ಮೈದಾನದಲ್ಲಿ ನಡೆದುಕೊಂಡ ರೀತಿಯ ಕುರಿತು ಟೀಕೆಗಳು ವ್ಯಕ್ತವಾದರೆ, ಇನ್ನೂ ಕೆಲವು ಬಾರಿ ವಿರಾಟ್ ಕೊಹ್ಲಿ ಹೆಚ್ಚಿನ ರನ್ ಗಳಿಸದೇ ಔಟ್ ಆದ ಕುರಿತು ಟೀಕೆ ಹಾಗೂ ಟ್ರೋಲ್ ವ್ಯಕ್ತವಾಗುತ್ತವೆ ಹಾಗೂ ಇಷ್ಟು ಮಾತ್ರವಲ್ಲದೇ ವಿರಾಟ್ ಕೊಹ್ಲಿ ಕುಟುಂಬದ ವಿಚಾರವಾಗಿ ವಿವಾದಾತ್ಮಕ ಸುದ್ದಿಗಳು ಹರಿದಾಡುತ್ತಿರುತ್ತವೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಕುರಿತಾಗಿ ಯಾವುದಾದರೊಂದು ವಿವಾದಾತ್ಮಕ ವಿಚಾರ ಪ್ರತಿದಿನವೂ ಕ್ರಿಕೆಟ್ ಅಭಿಮಾನಿಗಳ ಗಮನಕ್ಕೆ ಇತ್ತೀಚಿನ ದಿನಗಳಲ್ಲಿ ಬರುತ್ತಿದೆ ಎಂದರೆ ತಪ್ಪಾಗಲಾರದು.

ಕೆಎಲ್ ರಾಹುಲ್‌ಗೆ ಮತ್ತೆ ನಾಯಕತ್ವ; ಸುಳಿವು ಕೊಟ್ಟ ಕೋಚ್ ರಾಹುಲ್‌ ದ್ರಾವಿಡ್ಕೆಎಲ್ ರಾಹುಲ್‌ಗೆ ಮತ್ತೆ ನಾಯಕತ್ವ; ಸುಳಿವು ಕೊಟ್ಟ ಕೋಚ್ ರಾಹುಲ್‌ ದ್ರಾವಿಡ್

ಇನ್ನು ವಿರಾಟ್ ಕೊಹ್ಲಿ ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯವರೆಗೂ ಭಾರತ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ಈ ಮೂರೂ ತಂಡಗಳಿಗೂ ಕೂಡ ನಾಯಕನಾಗಿದ್ದರು. ಆದರೆ ನಂತರ ಸ್ವತಃ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ನಂತರದ ದಿನಗಳಲ್ಲಿ ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಲ್ಪಟ್ಟರು. ಹೀಗೆ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ಕಳೆದುಕೊಂಡ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಕೂಡ ರಾಜೀನಾಮೆಯನ್ನು ಸಲ್ಲಿಸಿದರು. ಹೀಗೆ ವಿರಾಟ್ ಕೊಹ್ಲಿ ಮೂರ್ನಾಲ್ಕು ತಿಂಗಳ ಅಂತರದಲ್ಲಿ ಎಲ್ಲಾ ಮಾದರಿಯ ತಂಡಗಳ ನಾಯಕತ್ವವನ್ನು ಕೂಡಾ ಕಳೆದುಕೊಂಡು ಸದ್ಯ ಕೇವಲ ಓರ್ವ ಆಟಗಾರನಾಗಿ ಮಾತ್ರ ಟೀಮ್ ಇಂಡಿಯಾದಲ್ಲಿದ್ದಾರೆ.

ಇವರು ಸರಣಿಯಲ್ಲಿ ಇಲ್ಲದೇ ಇದ್ದುದರಿಂದ ದ.ಆಫ್ರಿಕಾ ವಿರುದ್ಧ ಸೋಲಬೇಕಾಯಿತು ಎಂದ ದ್ರಾವಿಡ್!ಇವರು ಸರಣಿಯಲ್ಲಿ ಇಲ್ಲದೇ ಇದ್ದುದರಿಂದ ದ.ಆಫ್ರಿಕಾ ವಿರುದ್ಧ ಸೋಲಬೇಕಾಯಿತು ಎಂದ ದ್ರಾವಿಡ್!

ಇನ್ನು ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಂಡಿರುವುದರ ಕುರಿತು ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ವಿರಾಟ್ ಕೊಹ್ಲಿ ಅಭಿಮಾನಿಗಳು ಹಾಗೂ ಭಾರತ ಕ್ರಿಕೆಟ್ ತಂಡದ ಹಲವಾರು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಬಿಸಿಸಿಐ ಷಡ್ಯಂತ್ರವನ್ನು ಹೆಣೆದು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದು ಹಾಕಿತು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದರೆ ಇನ್ನೂ ಕೆಲವರು ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಈ ಹಿಂದೆ ನೀಡುತ್ತಿದ್ದಂತೆ ಪ್ರದರ್ಶನ ನೀಡದೇ ಇರುವ ಕಾರಣ ನಾಯಕತ್ವವನ್ನು ಕಳೆದುಕೊಂಡರು ಎಂಬ ಮಾತುಗಳನ್ನು ಕೂಡ ಆಡುತ್ತಿದ್ದಾರೆ. ಇನ್ನು ಈ ವಿಷಯದ ಕುರಿತಾಗಿ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಮಾತನಾಡಿದ್ದು, ಕೊಹ್ಲಿ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಇದೆ ಓದಿ..

ವಿರಾಟ್ ಕೊಹ್ಲಿ ಮದುವೆಯಾಗಿ ತಪ್ಪು ಮಾಡಿದ್ರು ಎಂದ ಶೋಯಬ್ ಅಖ್ತರ್

ವಿರಾಟ್ ಕೊಹ್ಲಿ ಮದುವೆಯಾಗಿ ತಪ್ಪು ಮಾಡಿದ್ರು ಎಂದ ಶೋಯಬ್ ಅಖ್ತರ್

ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಳನ್ನು ಮದುವೆಯಾಗುವುದಕ್ಕೂ ಮುನ್ನ ಸಾಲು ಸಾಲು ಶತಕಗಳನ್ನು ಬಾರಿಸಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಹಲವಾರು ವರ್ಷಗಳ ಕಾಲ ಯಶಸ್ವಿ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಾ ಬಂದಿದ್ದರು. ಆದರೆ ಮದುವೆಯಾದ ಬಳಿಕ ಅಂತಹ ಗುಣಮಟ್ಟದ ಆಟವನ್ನು ಆಡುವಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದಾರೆ. ಉತ್ತಮ ರನ್ ಕಲೆ ಹಾಕಿ ಅಮೋಘ ಪ್ರದರ್ಶನ ನೀಡುತ್ತಿದ್ದ ವಿರಾಟ್ ಕೊಹ್ಲಿ ಮದುವೆಯಾಗಬಾರದಿತ್ತು ಎಂಬ ಅಭಿಪ್ರಾಯವನ್ನು ಶೋಯಬ್ ಅಖ್ತರ್ ತಿಳಿಸಿದ್ದಾರೆ.

ನಾನು ಕೊಹ್ಲಿ ಸ್ಥಾನದಲ್ಲಿದ್ದಿದ್ದರೆ ಮದುವೆಯಾಗುತ್ತಿರಲಿಲ್ಲ ಎಂದ ಶೋಯಬ್ ಅಖ್ತರ್

ನಾನು ಕೊಹ್ಲಿ ಸ್ಥಾನದಲ್ಲಿದ್ದಿದ್ದರೆ ಮದುವೆಯಾಗುತ್ತಿರಲಿಲ್ಲ ಎಂದ ಶೋಯಬ್ ಅಖ್ತರ್

ಇನ್ನೂ ಮುಂದುವರಿದು ಮಾತನಾಡಿರುವ ಶೋಯಬ್ ಅಖ್ತರ್ ವಿರಾಟ್ ಕೊಹ್ಲಿ ಮೊದಲಿನಂತೆಯೇ ಶತಕಗಳನ್ನು ಬಾರಿಸುತ್ತಾ ಇರಬೇಕಾಗಿತ್ತು ಎಂದು ಬಯಸುತ್ತೇನೆ ಎಂದಿದ್ದು, ನಾನೇನಾದರೂ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಇದ್ದಿದ್ದರೆ ಖಂಡಿತವಾಗಿಯೂ ಮದುವೆಯಾಗುತ್ತಿರಲಿಲ್ಲ. ಏಕೆಂದರೆ ಇಂತಹ ವಯಸ್ಸಿನಲ್ಲಿ ಸಿಗುವ 10ರಿಂದ 12 ವರ್ಷಗಳ ಕಾಲದ ಕ್ರಿಕೆಟ್ ಅನುಭವ ಮತ್ತೆ ಸಿಗುವುದಿಲ್ಲ, ಹೀಗಾಗಿ ನಾನು ಉತ್ತಮ ಬ್ಯಾಟಿಂಗ್ ಮುಂದುವರಿಸುತ್ತಾ ಮದುವೆಯಾಗದೇ ಇರುತ್ತಿದ್ದೆ ಎಂದು ಶೋಯಬ್ ಅಖ್ತರ್ ತಿಳಿಸಿದ್ದಾರೆ.

ಶೋಯಬ್ ಅಖ್ತರ್ ಹೇಳಿಕೆಗೆ ಭಾರೀ ವಿರೋಧ

ಶೋಯಬ್ ಅಖ್ತರ್ ಹೇಳಿಕೆಗೆ ಭಾರೀ ವಿರೋಧ

ಇನ್ನು ಶೋಯಬ್ ಅಖ್ತರ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯ ವಿಚಾರವನ್ನು ಕ್ರಿಕೆಟ್‌ಗೆ ತಳುಕು ಹಾಕಿರುವ ಶೋಯಬ್ ಅಖ್ತರ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅಭಿಮಾನಿಗಳು ಗರಂ ಆಗಿದ್ದಾರೆ. ವೈಯಕ್ತಿಕ ಜೀವನಕ್ಕೂ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕೂ ಯಾವುದೇ ಸಂಬಂಧವಿಲ್ಲ ಹಾಗೂ ಮದುವೆಯಾದ ಬಳಿಕವೂ ಕೂಡ ವಿರಾಟ್ ಕೊಹ್ಲಿ ತಂಡದ ಪರ ಉತ್ತಮ ಬ್ಯಾಟಿಂಗ್ ಮಾಡುತ್ತಾ ಬಂದಿದ್ದಾರೆ, ಅಂಕಿ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳದೇ ಕೊಹ್ಲಿ ಕುರಿತು ಶೋಯಬ್ ಅಖ್ತರ್ ಈ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, January 25, 2022, 13:38 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X