ಮುಂದಿನ ವರ್ಷ ಭಾರತ ಮತ್ತೊಮ್ಮೆ ಇಂಗ್ಲೆಂಡ್ ಪ್ರವಾಸ: ಸರಣಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ

ಭಾರತ ಇಂಗ್ಲೆಂಡ್‌ಗೆ ಪ್ರವಾಸವನ್ನು ಕೈಗೊಂಡು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದು ಈ ಸರಣಿ ಈಗ ಅಂತಿಮ ಘಟ್ಟವನ್ನು ತಲುಪಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮತ್ತೊಂದು ಇಂಗ್ಲೆಂಡ್ ಪ್ರವಾಸ ನಿಗದಿಯಾಗಿದ್ದು ಇದರ ಸಂಪೂರ್ಣ ವೇಳಾಪಟ್ಟಿ ಕೂಡ ಸಿದ್ಧವಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈ ಸರಣಿಯ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ.

ಮುಂದಿನ ವರ್ಷ ಅಂದರೆ 2022ರಲ್ಲಿ ಈ ಸರಣಿಯ ಆಯೋಜನೆಯಾಗಲಿದ್ದು ಇದು ಸಂಪೂರ್ಣ ಸೀಮಿತ ಓವರ್‌ಗಳ ಸರಣಿಯಾಗಿರಲಿದೆ. ಮುಂದಿನ ವರ್ಷದ ಜುಲೈನಲ್ಲಿ ಈ ಸರಣಿಯ ಆಯೋಜನೆಯಾಗಲಿದ್ದು ಐಪಿಎಲ್ 15ನೇ ಆವೃತ್ತಿಯ ನಂತರ ಈ ಸರಣಿ ನಡೆಯಲಿದೆ. ಏಪ್ರಿಲ್ ಮೇ ತಿಂಗಳಿನಲ್ಲಿ ಐಪಿಎಲ್ 15ನೇ ಆವೃತ್ತಿ ನಡೆಯುವ ಸಾಧ್ಯತೆಯಿದೆ.

ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!

ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿರಲಿದೆ. ಟಿ20 ಸರಣಿಯ ಮೊದಲ ಪಂದ್ಯ ಜುಲೈ 1ರಂದು ನಡೆಯಲಿದ್ದು ಓಲ್ಡ್ ಟ್ರಾಫರ್ಡ್ ಆತಿಥ್ಯ ವಹಿಸಲಿದೆ. ಅದಾದ ಬಳಿಕ ಎರಡನೇ ಪಂದ್ಯ ಜುಲೈ 3ನೇ ತಾರೀಕಿಗೆ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯಲಿದೆ. ಸರಣಿಯ ಅಂತಿಮ ಟಿ20 ಪಂದ್ಯ ಏಜಸ್‌ಬೌಲ್‌ನಲ್ಲಿ ನಡೆಯಲಿದ್ದು ಜುಲೈ 6ರಂದು ನಡೆಯಲಿದೆ. ಈ ಸರಣಿಯ ಬಳಿಕ ಏಕದಿನ ಸರಣಿ ಆರಂಭವಾಗಲಿದ್ದು ಮೊದಲ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 9ರಂದು ನಡೆದರೆ ಎರಡನೇ ಪಂದ್ಯ ಓವಲ್ ಮೈದಾನದಲ್ಲಿ ಜುಲೈ 12ರಂದು ಆಯೋಜನೆಯಾಗಲಿದೆ. 3ನೇ ಹಾಗೂ ಸರಣಿಯ ಅಂತಿಮ ಪಂದ್ಯ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಜುಲೈ 14ರಂದು ನಡೆಯಲಿದೆ.

ಟಿ20 ಸರಣಿಯ ವೇಳಾಪಟ್ಟಿ ಹೀಗಿದೆ:
ಮೊದಲ ಪಂದ್ಯ ಜುಲೈ 1, ಸ್ಥಳ: ಓಲ್ಡ್ ಟ್ರಾಫರ್ಡ್
ಎರಡನೇ ಪಂದ್ಯ ಜುಲೈ 3 ಸ್ಥಳ: ಟ್ರೆಂಟ್ ಬ್ರಿಡ್ಜ್‌
ಮೂರನೇ ಪಂದ್ಯ ಜುಲೈ 6 ಸ್ಥಳ: ಏಜಸ್‌ಬೌಲ್‌

ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ:
ಮೊದಲ ಪಂದ್ಯ ಜುಲೈ 9 ಬರ್ಮಿಂಗ್‌ಹ್ಯಾಮ್‌
ಎರಡನೇ ಪಂದ್ಯ ಜುಲೈ 12 ಓವಲ್
ಮೂರನೇ ಪಂದ್ಯ ಜುಲೈ 14 ಲಾರ್ಡ್ಸ್ ಮೈದಾನ

ಸದ್ಯ ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಅಂತಿಮ ಒಂದು ಪಂದ್ಯ ಮಾತ್ರವೇ ಬಾಕಿಯರುವ ಕಾರಣ ಅಂತಿಮ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದರೆ ಪ್ರವಾಸಿ ಭಾರತ ಈಗ ಮೇಲುಗೈ ಸಾಧಿಸಿರುವ ಕಾರಣ ಸರಣಿಯಲ್ಲಿ ಒಂದು ಮಟ್ಟಿಗೆ ನಿರಾಳವಾಗಿದೆ. ಭಾರತ ಅಂತಿಮ ಪಂದ್ಯದಲ್ಲಿ ಕನಿಷ್ಠ ಡ್ರಾ ಮಾಡಿಕೊಂಡರೂ ಸರಣಿ ಭಾರತದ ಪಾಲಾಗಲಿದೆ. ಒಂದು ವೇಳೆ ಕೊನೆಯ ಪಂದ್ಯವನ್ನು ಸೋತರು ಸರಣಿ ಸಮಬಲವಾಗಲಿದೆ.

ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ ಈ ವರ್ಷಾರಂಭದಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ಮೂರು ಮಾದರಿಯ ಸರಣಿಯಲ್ಲಿಯೂ ಇಂಗ್ಲೆಂಡ್ ತಂಡ ಭಾಗಿಯಾಗಿತ್ತು. ಫೆಬ್ರವರಿಯಲ್ಲಿ ನಡೆದಿದ್ದ ಈ ಸರಣಿಯಲ್ಲಿ ಮೊದಲಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆದಿತ್ತು. ಈ ಸರಣಿಯನ್ನು ಭಾರತ 3-1 ಅಂತರದಿಂದ ಗೆಲ್ಲುವ ಮೂಲಕ ಸರಣಿಯನ್ನು ವಶಕ್ಕೆ ಪಡೆದುಕೊಂಡಿತ್ತು.

ಭಾರತ vs ಇಂಗ್ಲೆಂಡ್: ಅಂತಿಮ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ ಸಂಭವಭಾರತ vs ಇಂಗ್ಲೆಂಡ್: ಅಂತಿಮ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ ಸಂಭವ

ಟೆಸ್ಟ್ ಸರಣಿಯ ನಂತರ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೀಮಿತ ಓವರ್‌ಗಳ ಸರಣಿಯಲ್ಲಿಯೂ ಭಾಗಿಯಾಗಿತ್ತು. ಮಾರ್ಚ್ 12ರಿಂದ ಆರಂಭವಾದ ಟಿ20 ಸರಣಿಯ ಎಲ್ಲಾ ಪಂದ್ಯಗಳು ಕೂಡ ನೂತನವಾಗಿ ನಿರ್ಮಾಣವಾದ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು. ಐದು ಪಂದ್ಯಗಳ ಟಿ20 ಸರಣಿಯನ್ನು ಕೂಡ ಟೀಮ್ ಇಂಡಿಯಾ ವಶಕ್ಕೆ ಪಡೆದುಕೊಂಡಿತ್ತ. ಇದರಲ್ಲಿ 3-2 ಅಂತರದ ಗೆಲುವು ದಾಖಲಾಗಿತ್ತು.
ನಂತರ ಮೂರು ಪಂದ್ಯಗಳ ಏಕದಿನ ಸರಣಿ ಕೂಡ ನಡೆದಿತ್ತು. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಈ ಪಂದ್ಯವನ್ನು ಕೂಡ ಭಾರತ ವಶಕ್ಕೆ ಪಡೆಯುವಲ್ಲಿ ಸಫಲವಾಗಿತ್ತು. 2-1 ಅಂತರದಿಂದ ಆಬರತ ಈ ಸರಣೀಯ್ನನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಭಾರತ ಹಾಗೂ ಇಂಗ್ಲೆಂಡ್‌ನಲ್ಲಿ ಈ ವರ್ಷ ನಡೆದ ಸರಣಿಯಲ್ಲಿ ಟೀಮ್ ಇಂಡಿಯಾ ಅಮೋಘ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಮುಂದಿನ ವರ್ಷವೂ ಇದೇ ಪ್ರದರ್ಶನ ಮುಮದುವರಿಸುವ ವಿಶ್ವಾಸದಲ್ಲಿ ಭಾರತೀಯ ತಂಡವಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, September 8, 2021, 16:24 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X