ಮೊದಲ ಏಕದಿನ ಪಂದ್ಯ : ಭಾರತಕ್ಕೆ ಗೆಲ್ಲಲು 270ರನ್ ಗುರಿ

Posted By:

ಡರ್ಬನ್, ಫೆಬ್ರವರಿ 01: ದಕ್ಷಿಣ ಆಫ್ರಿಕಾ-ಭಾರತ ನಡುವಿನ ಆರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಡರ್ಬನ್‌ನ ಕಿಂಗ್ಸ್‌ಟನ್ ಮೈದಾನದಲ್ಲಿ ಪ್ರಾರಂಭವಾಗಿದೆ. ಭಾರತಕ್ಕೆ ಗೆಲ್ಲಲು 270ರನ್ ಗಳ ಗುರಿ ನೀಡಲಾಗಿದೆ.

ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ವೇಗಿಗಳಿಗೆ ನೆರವು ನೀಡುವ ಪಿಚ್‌ನಲ್ಲಿ ಚೇಸಿಂಗ್ ಕಷ್ಟವೆಂದೇ ಹೇಳಲಾಗುತ್ತದೆ. ಆದರೆ ಭಾರತದ ಬೌಲರ್‌ಗಳು ಉತ್ತಮ ದಾಳಿ ನಡೆಸಿದಲ್ಲಿ ಅತಿಥೇಯರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದಲ್ಲಿ ಗೆಲುವಿನ ಸಾಧ್ಯತೆ ಇದೆ.

ವಿರಾಟ್‌ ಕೊಹ್ಲಿ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದ್ದಾರೆ. ಆಡುವ 11 ಬಳಗದಲ್ಲಿ ಸ್ಥಾನ ಪಡೆಯಲು ಕರ್ನಾಟಕದ ಮನೀಷ್ ಪಾಂಡೆ ವಿಫಲರಾಗಿದ್ದಾರೆ.

India v/s South Africa first one day cricket

ಭಾರತದ ತಂಡ
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ, ಎಂಎಸ್ ಧೋನಿ (ಕೀಪರ್), ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಯಜುವೇಂದರ್ ಚಾಹಲ್.

ದಕ್ಷಿಣ ಆಫ್ರಿಕ ತಂಡ
ಹಶೀಮ್ ಆಮ್ಲಾ, ಕ್ವಾಂಟನ್ ಡಿ ಕಾಕ್ (ಕೀಪರ್), ಫಾಪ್ ಡು ಪ್ಲಿಸಿಸ್ (ನಾಯಕ), ಅಡಿನ್ ಮಾರ್ಕ್ರಮ್, ಪಾಲ್ ಡುಮಿನಿ, ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ಅಂಡಿಲೆ ಫಿಲುಕ್ವಾಯೊ, ಕಗೀಸೊ ರಬಾಡ, ಮಾರ್ನೆ ಮಾರ್ಕೆಲ್, ಇಮ್ರಾನ್ ತಾಹಿರ್.

Story first published: Thursday, February 1, 2018, 16:54 [IST]
Other articles published on Feb 1, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ