ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಟೆಸ್ಟ್ : ಆಸೀಸ್ ಗೆ ಆರಂಭಿಕ ಅಘಾತ, ಗೆಲುವಿನತ್ತ ಭಾರತ

ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 609 ರನ್ ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 4ನೇ ದಿನದಾಂತ್ಯಕ್ಕೆ 23 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ರಾಂಚಿ, ಮಾರ್ಚ್. 19 : ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು(ಮಾರ್ಚ್ 19) ಚೇತೇಶ್ವರ ಪೂಜಾರ ದ್ವಿಶತಕ(202), ವೃದ್ದಿಮಾನ್ ಸಾಹ(117) ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 609 ರನ್ ಗಳ ಬೃಹತ್ ಮೊತ್ತ ಕಲೆಹಾಕಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಈ ಮೂಲಕ ಕೊಹ್ಲಿ ಪಡೆ 152 ರನ್ ಗಳ ಮುನ್ನಡೆ ಸಾಧಿಸಿತು. ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 4ನೇ ದಿನದಾಂತ್ಯಕ್ಕೆ 23 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Ranchi Test, Day 4: India declare first innings at 603/9, lead Australia by 152 runs

ಚೇತೇಶ್ವರ ಪೂಜಾರ 525 ಎಸೆತಗನ್ನು ಎದುರಿಸಿ ವೃತ್ತಿ ಜೀವನದ ಮೂರನೇ ದ್ವಿಶತಕ ಸಿಡಿಸಿ ತಂಡಕ್ಕೆ ಆಧಾರವಾದರು. ವೃದ್ದಿಮಾನ್ ಸಹಾ ತಮ್ಮ ವೃತ್ತಿ ಜೀವನದ ಮೂರನೇ ಶತಕ ಸಿಡಿಸಿ ಮಿಂಚಿದರು.

ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ ಕೇವಲ 55 ಎಸೆತಗಳಲ್ಲಿ 54 ರನ್ ಸಿಡಿಸಿದರು. ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಜಡೇಜಾ ಮತ್ತೊಮ್ಮೆ ಕಂಟಕವಾಗಿ ಪರಿಣಮಿಸಿದರು. ವೇಗವಾಗಿ ರನ್ ಕಲೆಹಾಕುತ್ತಿದ್ದ ಡೇವಿಡ್ ವಾರ್ನರ್(14) ಅವರನ್ನು ಬೌಲ್ಡ್ ಮಾಡಿ ಮೊದಲ ಯಶಸ್ಸು ದೊರಕಿಸಿಕೊಟ್ಟರು.

ನಂತರ ಆಡಲಿಳಿದ ನಥಾನ್ ಲಿನ್ಕೇವಲ 2 ರನ್ ಗಳಸಿ ಜಡೇಜಾಗೆ ಎರಡನೇ ಬಲಿಯಾದರು. ಇನ್ನು 129 ರನ್ ಗಳ ಹಿನ್ನೆಡೆಯಲ್ಲಿರುವ ಆಸೀಸ್ ಆರಂಭದಲ್ಲಿಯೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದಿರಂದ ಐದನೇ ದಿನವಾದ ಸೋಮವಾರದ ಆಟ ಸಾಕಷ್ಟು ಕುತೂಹಲ ಮೂಡಸಲಿದೆ.

ಭಾರತ ಪರ ಚೇತೇಶ್ಚ ಪೂಜಾರ 202, ವೃದ್ದಿಮಾನ್ ಸಹಾ 117, ಕೆಎಲ್ ರಾಹುಲ್ 67, ಮುರುಳಿ ವಿಜಯ್ 82, ಜಡೇಜಾ ಅಜೇಯ 54 ರನ್ ಗಳಿಸಿ ತಂಡದ ಸ್ಕೋರ್ ಹೆಚ್ಚಿಸಿದರು.

India Vs Australia, Day 4: Hosts score 503/6 at Tea; Saha-Pujara maintain domination

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು(ಮಾರ್ಚ್ 19) ಚೇತೇಶ್ವರ ಪೂಜಾರ ದ್ವಿಶತಕ 202 ಹಾಗೂ ವೃದ್ದಿಮಾನ ಸಹಾ ಶತಕದ ನೆರವನಿಂದ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದೆ.

ಇತ್ತೀಚೆಗಿನ ವರದಿಯಂತೆ ಭಾರತ 7 ವಿಕೆಟ್ ಕಳೆದುಕೊಂಡು 541 ಸ್ಕೋರ್ ಮಾಡಿದೆ. ದ್ವಿಶತಕದ ಸಿಡಿಸಿ ಸಂಭ್ರಮದಲ್ಲಿ ಬ್ಯಾಟ್ ಬೀಸುತ್ತಿದ್ದ ಪೂಜಾರಾ 202 ರನ್ ಗಳಿಸಿ ಲಯನ್ ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ವೃದ್ದಿಮಾನ್ ಸಹಾ (116) ರವೀಂದ್ರ ಜಡೇಜಾ ಅಜೇಯ (08) ಕ್ರೀಸ್ ನಲ್ಲಿದ್ದಾರೆ.

ಚಹಾ ವಿರಾಮದ ವೇಳೆಗೆ ಭಾರತ 503/6 ಸ್ಕೋರ್ ಮಾಡಿ 52 ರನ್ ಗಳ ಮನ್ನಡೆ ಸಾಧಿಸಿದೆ. ಚೇತೇಶ್ವರ್ ಪೂಜಾರಾ 190 ರನ್ ಗಳನ್ನು ಬಾರಿಸಿ ದ್ವಿಶತಕದ ಹೊಸ್ತಿಲಲ್ಲಿದ್ದಾರೆ. ಇನ್ನೊದೆಡೆ ಪೂಜಾರಗೆ ಸಾಥ್ ನೀಡುತ್ತಿರುವ ವೃದ್ದಿಮಾನ್ ಸಹಾ(99) ಶತಕ ಸಿಡಿಸುವ ತವಕದಲ್ಲಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X