ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡ್ನಿ ಟೆಸ್ಟ್ : ಆಸ್ಟ್ರೇಲಿಯಾ 300ಕ್ಕೆ ಆಲೌಟ್, ಫಾಲೋಅನ್ ನೀಡಿದ ಭಾರತ

India Vs Australia, 4th Test Day 4, Live Updates: Early lunch taken as rain delays start of play

ಸಿಡ್ನಿ, ಜನವರಿ 06: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯ ಅಂತಿಮ ಪಂದ್ಯದ ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿಯಾಗಿದೆ. ಸರಿ ಸುಮಾರು 2 ಗಂಟೆ ಅವಧಿಯ ಆಟವನ್ನು ಮಳೆ ನುಂಗಿದೆ.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 300 ಸ್ಕೋರಿಗೆ ಆಲೌಟ್ ಆಗಿದ್ದು, ಫಾಲೋಆನ್ ಪಡೆದು ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 6ರನ್ ಗಳಿಸಿದ್ದಾಗ, ಮಂದ ಬೆಳಕಿನ ಕಾರಣ ಆಟವನ್ನು ನಿಲ್ಲಿಸಲಾಯಿತು.

ನಾಲ್ಕನೇ ದಿನದ ಆರಂಭದಲ್ಲೇ ಆಸ್ಟ್ರೇಲಿಯಾಕ್ಕೆ ಭಾರತದ ವೇಗಿ ಮೊಹಮ್ಮದ್ ಶಮಿ ಆಘಾತ ನೀಡಿದರು. ಕಮಿನ್ಸ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. 37 ರನ್ ಗಳಿಸಿದ್ದ ಪೀಟರ್ ಹ್ಯಾಂಡ್ಸ್ ಕಂಬ್ ಅವರನ್ನು ಜಸ್ ಪ್ರೀತ್ ಬೂಮ್ರಾ ಬೋಲ್ಡ್ ಮಾಡಿದರು. ಮಿಚೆಲ್ ಸ್ಟಾರ್ಕ್ 29ರನ್ ಗಳಿಸಿ ಔಟಾಗದೆ ಉಳಿದಿದರು. ಕುಲದೀಪ್ ಯಾದವ್ 99ರನ್ನಿತ್ತು 5 ವಿಕೆಟ್ ಪಡೆದು ಮಿಂಚಿದರು. ಶಮಿ ಹಾಗೂ ಜಡೇಜ ತಲಾ 2 ಹಾಗೂ ಬೂಮ್ರಾ 1 ವಿಕೆಟ್ ಗಳಿಸಿದರು.

ಆಟಗಾರರು ಅವಧಿಗೆ ಮುನ್ನ ಭೋಜನ ವಿರಾಮವನ್ನು ತೆಗೆದುಕೊಂಡಿದ್ದು, ಶೀಘ್ರದಲ್ಲೇ ಆಟದ ಬಗ್ಗೆ ಅಂಪೈರ್ ಗಳು ನಿರ್ಣಯ ಕೈಗೊಳ್ಳಲಿದ್ದಾರೆ. ಶನಿವಾರ ಕೂಡಾ ಮಂದ ಬೆಳಕಿನ ಕಾರಣ, ಆಟವನ್ನು ಅವಧಿಗೆ ಮುನ್ನ ಮುಕ್ತಾಯಗೊಳಿಸಲಾಗಿತ್ತು.

1
43626

ಭಾನುವಾರದ ದಿನದ ಆರಂಭದ ಸ್ಕೋರ್ : ಭಾರತದ 622/7 ಸ್ಕೋರಿಗೆ ಉತ್ತರವಾಗಿ ಆಸ್ಟ್ರೇಲಿಯಾ 236/6 ಸ್ಕೋರ್ ಮಾಡಿದೆ. ಪೀಟರ್ ಹ್ಯಾಂಡ್ಸ್ ಕಂಬ್ 28 ಹಾಗೂ ಪ್ಯಾಟ್ ಕಮಿನ್ಸ್ 25ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.

ಭಾರತದ ಪರ ಸ್ಪಿನ್ನರ್ ಗಳಾದ ರವೀಂದ್ರ ಜಡೇಜ 2 ಹಾಗೂ ಕುಲದೀಪ್ ಯಾದವ್ 3 ವಿಕೆಟ್ ಗಳಿಸಿದ್ದು, ಉತ್ತಮ ಪ್ರದರ್ಶನ ನೀಡಿದ್ದಾರೆ.

Story first published: Sunday, January 6, 2019, 11:23 [IST]
Other articles published on Jan 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X