ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ವಿರುದ್ಧ ಬೋಲ್ಡ್ ಹೇಳಿಕೆ ನೀಡಿದ ಪಾರ್ಥಿವ್ ಪಟೇಲ್

India vs Australia: Parthiv Patels Bold Statement About Virat Kohli

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲೂ ಹೀನಾಯವಾಗಿ ಸೋತಿದೆ. ಸರಣಿ ಸೋತಿರುವುದರಿಂದ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆ ಜೋರಾಗಿದೆ. ಈ ಮಧ್ಯೆ ಭಾರತದ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್, ಕೊಹ್ಲಿ ನಾಯಕತ್ವದ ವಿರುದ್ಧ ಬೋಲ್ಡ್‌ ಹೇಳಿಕೆ ನೀಡಿದ್ದಾರೆ.

ಪಾಕ್ ತಂಡ ವಾಪಸ್ ಕಳುಹಿಸುವುದಾಗಿ ನ್ಯೂಜಿಲೆಂಡ್ ಹೆದರಿಸುತ್ತಿರುವುದೇಕೆ?!ಪಾಕ್ ತಂಡ ವಾಪಸ್ ಕಳುಹಿಸುವುದಾಗಿ ನ್ಯೂಜಿಲೆಂಡ್ ಹೆದರಿಸುತ್ತಿರುವುದೇಕೆ?!

ಭಾರತ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಸೂಕ್ತ ಎ೦ದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಏಕದಿನದಲ್ಲಿ ಶರ್ಮಾ ಹೆಸರಿನಲ್ಲಿರುವ ದಾಖಲೆಗಳು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದ ಅಭೂತಪೂರ್ವ ಯಶಸ್ವಿ.

ನಾಯಕತ್ವದ ಬಗ್ಗೆ ಮಾತನಾಡಿರುವ ಪಾರ್ಥಿವ್ ಪಟೇಲ್, 'ನನಗೆ ರೋಹಿತ್ ಶರ್ಮಾ ನಾಯಕತ್ವದ ರೀತಿ ಹೆಚ್ಚು ಇಷ್ಟ. ಆತ ಮೈದಾನದಲ್ಲಿ ಶಾಂತವಾಗಿರುತ್ತಾನೆ. ಒತ್ತಡದ ಸಂದರ್ಭದಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾನೆ. ತಂಡವನ್ನು ಕಟ್ಟುವ ನೆಲೆಯಲ್ಲಿ ನನ್ನ ಪ್ರಕಾರ ರೋಹಿತ್ ಬೆಸ್ಟ್ ಕ್ಯಾಪ್ಟನ್,' ಎಂದಿದ್ದಾರೆ.

ಉತ್ತಮ ಉದಾಹರಣೆಯೊಂದಿಗೆ ಬೂಮ್ರಾ ಸಮರ್ಥಿಸಿದ ಕೆಎಲ್ ರಾಹುಲ್ಉತ್ತಮ ಉದಾಹರಣೆಯೊಂದಿಗೆ ಬೂಮ್ರಾ ಸಮರ್ಥಿಸಿದ ಕೆಎಲ್ ರಾಹುಲ್

2020ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪಾರ್ಥಿವ್ ಇದ್ದರಾದರೂ ಅವರಿಗೆ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ನೀಡಿರಲಿಲ್ಲ. ಫಿಟ್ ಆಗಿದ್ದರೂ ಅವಕಾಶ ನೀಡದಿದ್ದ ಬಗ್ಗೆ ಸಹಜವಾಗೇ ಪಾರ್ಥಿವ್‌ಗೆ ಬೇಸರವಿದೆ. ಸಾಲದ್ದಕ್ಕೆ ಇತ್ತ ಆರ್‌ಸಿಬಿ ಕಪ್‌ ಗೆಲ್ಲದಿರುವುದು, ಭಾರತ ತಂಡ ಸೋಲಿನ ಸುಳಿಯಲ್ಲಿರುವುದು ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸುವಂತೆ ಮಾಡಿದೆ.

Story first published: Monday, November 30, 2020, 21:14 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X