ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ Vs ಆಸ್ಟ್ರೇಲಿಯಾ ಸರಣಿ: ಕೊಹ್ಲಿ ಬಳಗದ ಸಾಧನೆಗಳ ಅಂಕಿ ಅಂಶ

ಸಿಡ್ನಿ, ಜನವರಿ 7: ಕಳೆದ 70 ವರ್ಷಗಳಲ್ಲಿ ಭಾರತದ ಯಾವ ನಾಯಕನೂ ಮಾಡಿರದ ಅಭೂತಪೂರ್ವ ಸಾಧನೆಯನ್ನು ವಿರಾಟ್ ಕೊಹ್ಲಿ ಮಾಡಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದರೂ ಭಾರತಕ್ಕೆ ಅದೇ ದೊಡ್ಡ ಸಾಧನೆ ಎನಿಸಿಕೊಳ್ಳುತ್ತಿತ್ತು. ಇನ್ನು ಸರಣಿ ಗೆಲುವು ಕನಸಿನ ಮಾತೇ ಆಗಿತ್ತು. ಆದರೆ, ಭಾರತ ಈ ಸೋಲಿನ ಸರಪಳಿಯನ್ನು ತುಂಡರಿಸಿ ದಿಗ್ವಿಜಯ ಸಾಧಿಸಿದೆ.

ಈ ಸರಣಿ ಹಲವು ದಾಖಲೆಗಳನ್ನೂ ನಿರ್ಮಿಸಿದೆ. 1988ರ ಬಳಿಕ ಮೊಟ್ಟ ಮೊದಲ ಬಾರಿಗೆ ತಂಡವೊಂದು ಆಸ್ಟ್ರೇಲಿಯಾಕ್ಕೆ ಅದರದ್ದೇ ನೆಲದಲ್ಲಿ ಫಾಲೋಆನ್ ಹೇರಿರುವುದು ಸಾಧನೆಯೇ ಸರಿ.

1947-48ರಲ್ಲಿ ಭಾರತ ಮೊದಲ ಸಲ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಒಮ್ಮೆಯೂ ಸರಣಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಕೊಹ್ಲಿ ನಾಯಕತ್ವದ ಬಳಗ ಈ ಸಾಧನೆ ಮಾಡಿದೆ.

ಇದು ನನ್ನ ಜೀವನದ ಅತ್ಯುತ್ತಮ ಸಾಧನೆ : ವಿರಾಟ್ ಕೊಹ್ಲಿ ಇದು ನನ್ನ ಜೀವನದ ಅತ್ಯುತ್ತಮ ಸಾಧನೆ : ವಿರಾಟ್ ಕೊಹ್ಲಿ

ಮತ್ತೊಂದು ವಿಶೇಷವೆಂದರೆ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲಿಯೇ ಮಣಿಸಿ ಟ್ರೋಫಿ ಎತ್ತಿ ಹಿಡಿದ ಏಷ್ಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

ಈ ಸರಣಿಯ ಕೆಲವು ಆಸಕ್ತಿಕರ ಅಂಕಿ ಅಂಶಗಳ ಮಾಹಿತಿ ಇಲ್ಲಿದೆ...

ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದ ದೇಶಗಳು

ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದ ದೇಶಗಳು

ಇಂಗ್ಲೆಂಡ್- 13 ಬಾರಿ
ವೆಸ್ಟ್ ಇಂಡೀಸ್- 1979/80, 1984/85, 1988/89, 1992/93
ನ್ಯೂಜಿಲೆಂಡ್- 1985/86
ದಕ್ಷಿಣ ಆಫ್ರಿಕಾ- 2008/09, 2012/13, 2016/17
ಭಾರತ - 2018/19

ಟೆಸ್ಟ್ ಸರಣಿಯಲ್ಲಿ 2-1 ಗೆಲುವು: ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಐತಿಹಾಸಿಕ ಸಾಧನೆ

ಆಸ್ಟ್ರೇಲಿಯಾದಲ್ಲಿ ಸರಣಿ ಶ್ರೇಷ್ಠ

ಆಸ್ಟ್ರೇಲಿಯಾದಲ್ಲಿ ಸರಣಿ ಶ್ರೇಷ್ಠ

ಕೆ. ಶ್ರೀಕಾಂತ್ 1985/86
ಕಪಿಲ್ ದೇವ್ 1985/86
ಸಚಿನ್ ತೆಂಡೂಲ್ಕರ್ 1999/00
ರಾಹುಲ್ ದ್ರಾವಿಡ್ 2003/04
ಚೇತೇಶ್ವರ್ ಪೂಜಾರ 2018/19

ಸಿಡ್ನಿ, 4ನೇ ಟೆಸ್ಟ್: ವಿಶೇಷತೆಯೊಂದಿಗೆ ಅಭಿಮಾನಿಗಳ ಮನಗೆದ್ದ ಕೊಹ್ಲಿ

ಹೊರದೇಶದಲ್ಲಿ ನಾಯಕ ವಿರಾಟ್ ಗೆಲುವು

ಹೊರದೇಶದಲ್ಲಿ ನಾಯಕ ವಿರಾಟ್ ಗೆಲುವು

2-1 ಶ್ರೀಲಂಕಾ, 2015
2-0 ವೆಸ್ಟ್ ಇಂಡೀಸ್, 2016
3-0 ಶ್ರೀಲಂಕಾ, 2017
2-1 ಆಸ್ಟ್ರೇಲಿಯಾ, 2018/19

ಈತ 2ನೇ ಆ್ಯಡಂ ಗಿಲ್‌ಕ್ರಿಸ್ಟ್: ಭಾರತದ ಬ್ಯಾಟ್ಸ್ಮನ್‌ಗೆ ಪಾಂಟಿಂಗ್‌ ಶ್ಲಾಘನೆ

'SENA' ದೇಶಗಳಲ್ಲಿ ಭಾರತದ ಗೆಲುವು

'SENA' ದೇಶಗಳಲ್ಲಿ ಭಾರತದ ಗೆಲುವು

3-1 ನ್ಯೂಜಿಲೆಂಡ್, 1967/68
1-0 ಇಂಗ್ಲೆಂಡ್, 1971
2-0 ಇಂಗ್ಲೆಂಡ್, 1986
1-0 ಇಂಗ್ಲೆಂಡ್, 2007
1-0 ನ್ಯೂಜಿಲೆಂಡ್, 2008/09
2-1 ಆಸ್ಟ್ರೇಲಿಯಾ, 2018/19

ಭಾರತದ 'ಹೊಸ ಗೋಡೆ' ಪೂಜಾರ

ಭಾರತದ 'ಹೊಸ ಗೋಡೆ' ಪೂಜಾರ

ಅತಿ ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿಯುವ ಮೂಲಕ ಎದುರಾಳಿಗಳ ಸಂಯಮ ಪರೀಕ್ಷಿಸುತ್ತಿದ್ದ 'ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಸ್ಥಾನವನ್ನು ತುಂಬುವ ಆಟಗಾರನಾಗಿ, 'ಹೊಸ ಗೋಡೆ' ಚೇತೇಶ್ವರ ಪೂಜಾರ ಆಶಾಕಿರಣವಾಗಿ ಕಾಣಿಸಿದ್ದಾರೆ. ಆಸೀಸ್ ಬೌಲರ್‌ಗಳನ್ನು ಅವರ ನೆಲದಲ್ಲಿ ಸಮರ್ಥವಾಗಿ ಎದುರಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸರಣಿಯಲ್ಲಿ 521 ರನ್ ಸೇರಿಸಿದ ಅವರು ಆಸ್ಟ್ರೇಲಿಯಾ ನೆಲದಲ್ಲಿ ಸರಣಿಯೊಂದರಲ್ಲಿ ಅತಿ ಹೆಚ್ಚು ಚೆಂಡು ಎದುರಿಸಿದ ಕೀರ್ತಿಗೆ ಪಾತ್ರರಾದರು.
1258 ಎಸೆತ, ಚೇತೇಶ್ವರ ಪೂಜಾರ, 2018/19
1203 ಎಸೆತ, ರಾಹುಲ್ ದ್ರಾವಿಡ್, 2003/04
1192 ಎಸೆತ, ವಿಜಯ್ ಹಜಾರೆ, 1947/48
1093 ಎಸೆತ, ವಿರಾಟ್ ಕೊಹ್ಲಿ, 2014/15
1032 ಎಸೆತ, ಸುನಿಲ್ ಗವಾಸ್ಕರ್, 1977/78

Story first published: Monday, January 7, 2019, 13:07 [IST]
Other articles published on Jan 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X