U-19 ವಿಶ್ವಕಪ್: ಭಾರತವನ್ನು ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದ ಬಾಂಗ್ಲಾದೇಶ

ಅಂಡರ್ 19 ವಿಶ್ವಕಪ್ ಅನ್ನು ಮತ್ತೊಂದು ಬಾರಿ ಗೆಲ್ಲುವ ಭಾರತದ ಕನಸು ಭಗ್ನವಾಗಿದೆ. ಫೈನಲ್ ಪಂದ್ಯವನ್ನು ಬಾಂಗ್ಲಾದೇಶ ಗೆದ್ದುಕೊಂಡಿದೆ. ಭಾರತೀಯ ಅಂಡರ್-19 ತಂಡವನ್ನು ಮಣಿಸುವಲ್ಲಿ ಬಾಂಗ್ಲಾದೇಶದ ಕಿರಿಯರು ಯಶಸ್ವಿಯಾಗಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ ಬಾಂಗ್ಲಾದೇಶ ಈ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ.
ನಾಲ್ಕು ಬಾರಿ ವಿಶ್ವಕಪ್ ಗೆದ್ದಿರುವ ಟೀಮ್ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಮಣಿದಿದೆ. ಈ ಮೂಲಕ ಬಾಂಗ್ಲಾ ಎಲ್ಲಾ ವಿಭಾಗಗಳಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.
ಪಂದ್ಯದ ಅಂತ್ಯದ ವೇಳೆಯಲ್ಲಿ ಮಳೆ ಅಡ್ಡಿಯಾದ ಕಾರಣ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶಕ್ಕೆ ಐದು ಓವರ್‌ಗಳಲ್ಲಿ 7ಗಳಿಸುವ ಸುಲಭ ಸವಾಲನ್ನು ನೀಡಲಾಯ್ತು. ಈ ಸವಾಲನ್ನು ಬಾಂಗ್ಲಾದೇಶ ತಲುಪುವಲ್ಲಿ ಯಶಸ್ವಿಯಾಯ್ತು.

ಆರಂಭಿಕ ಆಘಾತ:
ಟೀಮ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತು. ನಿಧಾನವಾಗಿ ಆರಂಭ ಪಡೆದ ಟೀಮ್ ಇಂಡಿಯಾ ಕಿರಿಯರು ಏಳನೇ ಓವರ್‌ನಲ್ಲಿ 9 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಮತ್ತಷ್ಟು ಒತ್ತಡವನ್ನು ಹೇರಿಕೊಂಡಿತು.

ಎರಡನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ:
ಎರಡನೇ ವಿಕೆಟ್‌ಗೆ ಜೈಸ್ವಾಲ್‌ಗೆ ಜೊತೆಯಾದ ತಿಲಕ್ ವರ್ಮ ನಿಧಾನವಾಗಿ ಆಟವನ್ನು ಪ್ರದರ್ಶಿಸಿದರು. ಈ ಜೋಡಿ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ 94ರನ್‌ಗಳ ಜೊತೆಯಾವನ್ನು ನೀಡಿತು ಈ ಜೋಡಿ. ಬಳಿಕ ತಿಲಕ್ ವರ್ಮಾ 38 ರನ್‌ಗೆ ವಿಕೆಟ್ ಒಪ್ಪಿಸಿದರು.

ಮತ್ತೊಂದು ಅರ್ಧ ಶತಕ ಸಿಡಿಸಿದ ಜೈಸ್ವಾಲ್:
ಟೀಮ್ ಇಂಡಿಯಾ ಅಂಡರ್ 19 ತಂಡದ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತೊಂದು ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದಾರೆ. ಇದು ಜೈಸ್ವಾಲ್ ಈ ಟೂರ್ನಿಯಲ್ಲಿ ಸಿಡಿಸಿದ 5ನೇ 50+ ರನ್ ಆಗಿದೆ. ಇಂದು 88 ರನ್‌ಗಳಿಸಿದ ಜೈಸ್ವಾಲ್ ಶತಕದ ಗಡಿ ತಲುಪಲು ವಿಫಲರಾದರು. ಆದರೆ ಇದಕ್ಕಾಗಿ 121 ಎಸೆತಗಳನ್ನು ಎದುರಿಸಿದ್ದಾರೆ.

ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಬಾಂಗ್ಲಾ:
ಬಾಂಗ್ಲಾದೇಶ ಬೌಲರ್‌ಗಳು ಇಂದಿನ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ದಾಳಿಯನ್ನು ನಡೆಸಿದ್ದಾರೆ. ಅವಿಶೇಕ್ ದಾಸ್ ಮೂರು ವಿಕೆಟ್ ಕಿತ್ತರೆ, ಶೋರಿಫುಲ್ ಇಸ್ಲಾಮ್ ಮತ್ತು ತನ್ಜಿಮ್ ಹಸನ್ ಶಕಿಬ್ ತಲಾ ಎರಡು ವಿಕೆಟ್ ಪಡೆದರು. ಮತ್ತೊಂದು ವಿಕೆಟ್ ರಕಿಬುಲ್ ಹಸನ್ ಪಾಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications