ಪಂತ್‌ಗೆ ಮುಂದುವರಿದ ಬೆಂಬಲ: ಬಾಂಗ್ಲಾ ವಿರುದ್ಧ ಪಂತ್‌ಗೆ ಅವಕಾಶ ದೊರೆಯಬೇಕು ಎಂದ ಮಾಜಿ ಕ್ರಿಕೆಟಿಗ

ಭಾರತೀಯ ಕ್ರಿಕೆಟ್ ತಂಡ ಇತ್ತೀಚೆಗಷ್ಟೇ ನ್ಯೂಜಿಲಂಡ್ ಪ್ರವಾಸ ಮುಗಿಸಿದ್ದು ಇದೀಗ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಸಜ್ಜಾಗಿದೆ. ಈಗಾಗಲೇ ಬಾಂಗ್ಲಾದೇಶಕ್ಕೆ ತೆರಳಿರುವ ಭಾರತೀಯ ಆಟಗಾರರ ಬಳಗ ಮೊದಲಿಗೆ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದು ಅದಾದ ಬಳಿಕ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸಂದರ್ಭದಲ್ಲಿ ಕಿವಿಸ್ ಸರಣಿ ಸೇರಿದಂತೆ ಟಿ20 ವಿಶ್ವಕಪ್‌ನಲ್ಲಿಯೂ ಕಳಪೆ ಪ್ರದರ್ಶನ ನೀಡಿರುವ ರಿಷಭ್ ಪಂತ್ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗಿದೆ. ಹಾಗಿದ್ದರೂ ಮಾಜಿ ಕ್ರಿಕೆಟಿಗರು ಹಾಗೂ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಬೆಂಬಲ ಪಂತ್‌ಗೆ ಮುಂದುವರಿದಿದೆ.

ರಿಷಭ್ ಪಂತ್ ಟೆಸ್ಟ್ ಸರಣಿಯಲ್ಲಿ ತಾನು ತಂಡಕ್ಕೆ ಪ್ರಮುಖ ಆಸ್ತಿ ಎಂಬುದನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಹೊಂದಿರುವ ಪಂತ್ ಸೀಮಿತ ಓವರ್‌ಗಳಿಗೆ ಹೇಳಿ ಮಾಡಿಸಿದಂತಿರುವ ಆಟಗಾರ ಎಂಬ ಅಭಿಪ್ರಾಯ ಆರಂಭದಿಂದಲೂ ಕೇಳಿ ಬರುತ್ತಿದೆ. ಆದರೆ ಅದಕ್ಕೆ ಪೂರಕವಾಗುವಂತಾ ಪರಿಣಾಮಕಾರಿ ಪ್ರದರ್ಶನವನ್ನು ರಿಷಭ್ ಪಂತ್ ನೀಡುವಲ್ಲಿ ವಿಫಲವಾಗಿದ್ದಾರೆ. ಅದರಲ್ಲೂ ಇತ್ತೀಚೆಗೆ ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಬಳಿಕ ಟೀಕೆಗಳು ಮತ್ತಷ್ಟು ಹೆಚ್ಚಾಗಿದೆ.

ರಿಷಭ್ ಮ್ಯಾಚ್ ವಿನ್ನರ್, ಸಂಜು ಸ್ಯಾಮ್ಸನ್ ಕಾಯಲೇ ಬೇಕು: ಶಿಖರ್ ಧವನ್ರಿಷಭ್ ಮ್ಯಾಚ್ ವಿನ್ನರ್, ಸಂಜು ಸ್ಯಾಮ್ಸನ್ ಕಾಯಲೇ ಬೇಕು: ಶಿಖರ್ ಧವನ್

ಬಾಂಗ್ಲಾ ವಿರುದ್ಧ ಪಂತ್ ಆಡಲಿ

ಬಾಂಗ್ಲಾ ವಿರುದ್ಧ ಪಂತ್ ಆಡಲಿ

ಹಾಗಿದ್ದರೂ ಯುವ ಆಟಗಾರನಿಗೆ ಮಾಜಿ ಕ್ರಿಕೆಟಿಗರು ಹಾಗೂ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನಿಂದ ರಿಷಭ್ ಪಂತ್‌ಗೆ ದೊರೆಯುವ ಬೆಂಬಲ ಕಡಿಮೆಯಾಗಿಲ್ಲ. ಟೀಮ್ ಇಂಡಿಯಾದಲ್ಲಿ ಸತತವಾಗಿ ಪಂತ್ ಆಡುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಯ ಹಿನ್ನೆಲೆಯಲ್ಲಿ ಮಾತನಾಡರುವ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಈ ಏಕದಿನ ಸರಣಿಯಲ್ಲಿ ರಿಷಬ್ ಪಂತ್‌ಗೆ ಆಡುವ ಅವಕಾಶವನ್ನು ನೀಡಬೇಕು ಎಂದಿದ್ದಾರೆ.

ಪಂತ್ ಭವಿಷ್ಯ ನಿರ್ಧರಿಸುವ ಮುನ್ನ ಒಂದು ಅವಕಾಶ

ಪಂತ್ ಭವಿಷ್ಯ ನಿರ್ಧರಿಸುವ ಮುನ್ನ ಒಂದು ಅವಕಾಶ

ರಿಷಭ್ ಪಂತ್ ಅವರ ವೈಟ್‌ಬಾಲ್ ಭವಿಷ್ಯವನ್ನು ನಿರ್ಧರಿಸುವ ಮುನ್ನ ಅವರಿಗೆ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ ಸಬಾ ಕರೀಮ್. ಅದಾದ ಬಳಿಕವೇ ಆತನ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದಿದ್ದಾರೆ. "ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ರಿಷಭ್ ಪಂತ್‌ಗೆ ಅವಕಾಶ ನಿಡಬೇಕಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಒಪಂತ್ ಹೇಗೆ ಆಡುತ್ತಾರೆ ಎಂಬುದನ್ನು ನೋಡಲು ನಾನು ಬಯಸುತ್ತೇನೆ. ಈ ಸರಣಿಯಲ್ಲಿಯೂ ಅತನಿಂದ ಉತ್ತಮ ಪ್ರದರ್ಶನ ಬಾರದಿದ್ದರೆ ಪರ್ಯಾಯ ಆಟಗಾರನನ್ನು ಕಂಡುಕೊಳ್ಳಬೇಕಾಗುತ್ತದೆ. ಅದು ಇಶಾನ್ ಕಿಶನ್ ಅಥವಾ ಸಂಜು ಸ್ಯಾಮ್ಸನ್ ಆಗಿರಬಹುದು" ಎಂದಿದ್ದಾರೆ ಸಬಾ ಕರೀಮ್.

ಮೂರು ಪಂದ್ಯಗಳ ಏಕದಿನ ಸರಣಿ

ಮೂರು ಪಂದ್ಯಗಳ ಏಕದಿನ ಸರಣಿ

ಭಾರತ ಬಾಂಗ್ಲಾದೇಶ ಪ್ರವಾಸದಲ್ಲಿ ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಮೊದಲ ಪಂದ್ಯ ಡಿಸೆಂಬರ್ 4ರಂದು ಭಾನುವಾರ ಮೀರ್‌ಪುರದಲ್ಲಿ ನಡೆದರೆ ಎರಡು 7 ಹಾಗೂ 10ರಂದು ನಡೆಯಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಈ ಸರಣಿಯ ಮೂಲಕ ಕಮ್‌ಬ್ಯಾಕ್ ಮಾಡಲಿದ್ದಾರೆ. ವಿಶ್ವಕಪ್ ಬಳಿಕ ನ್ಯೂಜಿಲೆಮಡ್ ಪ್ರವಾಸದಿಂದ ಈ ಆಟಗಾರರು ವಿಶ್ರಾಂತಿ ಪಡೆದುಕೊಂಡಿದ್ದರು.

ಟೀಮ್ ಇಂಡಿಯಾ ಏಕದಿನ ಸ್ಕ್ವಾಡ್

ಟೀಮ್ ಇಂಡಿಯಾ ಏಕದಿನ ಸ್ಕ್ವಾಡ್

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್

For Quick Alerts
ALLOW NOTIFICATIONS
For Daily Alerts
Story first published: Friday, December 2, 2022, 13:22 [IST]
Other articles published on Dec 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X