ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಸರಣಿ ಗೆದ್ದ ಬಳಿಕ ಭಾರತ, ರೋಹಿತ್, ಧೋನಿ ಬರೆದ ದಾಖಲೆಗಳು!

By Mahesh
ಸರಣಿ ಗೆದ್ದ ಬಳಿಕ ಭಾರತ, ರೋಹಿತ್, ಧೋನಿ ಬರೆದ ದಾಖಲೆಗಳು! | Oneindia Kannada
India vs England T20i Series Records MS Dhoni and Rohit Sharma

ಕಾರ್ಡಿಫ್, ಜುಲೈ 08: ಅತಿಥೇಯ ಇಂಗ್ಲೆಂಡ್ ವಿರುದ್ಧದ ಮೂರು ಟಿ20ಐ ಪಂದ್ಯಗಳ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯವನ್ನು ಭಾರತ 7 ವಿಕೆಟ್ ಗಳಿಂದ ಇಂದು ಗೆದ್ದುಕೊಂಡಿದೆ.

ರೋಹಿತ್ ಭರ್ಜರಿ ಶತಕ, ಆಂಗ್ಲರ ವಿರುದ್ಧ ಟಿ20 ಸರಣಿ ಕೈವಶರೋಹಿತ್ ಭರ್ಜರಿ ಶತಕ, ಆಂಗ್ಲರ ವಿರುದ್ಧ ಟಿ20 ಸರಣಿ ಕೈವಶ

ಗೆಲ್ಲಲು ಬೇಕಿದ್ದ 198ರನ್ ಗಳನ್ನು ಮೂರು ವಿಕೆಟ್ ಕಳೆದುಕೊಂಡು ಸುಲಭವಾಗಿ ಭಾರತ ಜಯಿಸಿತು. ಈ ಮೂಲಕ 2-1ರಲ್ಲಿ ಸರಣಿ ಗೆದ್ದ ವಿರಾಟ್ ಕೊಹ್ಲಿ ಪಡೆ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಈ ಗೆಲುವಿನ ನಂತರ ಟೀಂ ಇಂಡಿಯಾ, ರೋಹಿತ್ ಶರ್ಮ, ಎಂಎಸ್ ಧೋನಿ ಅವರು ಬರೆದ ದಾಖಲೆಗಳ ಪಟ್ಟಿ ಇಲ್ಲಿದೆ.

1
42370

ಎಂಎಸ್ ಧೋನಿ:
* ಟಿ20ಐ ಪಂದ್ಯಗಳಲ್ಲಿ 50 ಕ್ಯಾಚ್ ಗಳಿಸಿದ ಮೊದಲ ವಿಕೆಟ್ ಕೀಪರ್.
* ಟಿ20ಐ ಪಂದ್ಯವೊಂದರಲ್ಲಿ 5 ಕ್ಯಾಚ್ ಹಿಡಿದ ಮೊದಲ ವಿಕೆಟ್ ಕೀಪರ್
* ಟಿ20ಐ ಪಂದ್ಯವೊಂದರಲ್ಲಿ 6 ವಿಕೆಟ್ ಗಳಿಸಿದ ಸಾಧನೆ(ಐದು ಕ್ಯಾಚ್, ಒಂದು ರನ್ ಔಟ್), ಈ ಮುಂಚೆ ಅಫ್ಘಾನಿಸ್ತಾನದ ಮೊಹಮ್ಮದ್ ಶಹಜಾದ್ 5 ವಿಕೆಟ್ ಗಳಿಸಿದ್ದರು.
* ಒಟ್ಟಾರೆಯಾಗಿ ಟಿ20 ಪಂದ್ಯಗಳಿಂದ 150 ಕ್ಯಾವ್ ಪೂರೈಸಿದ ಮೊದಲ ವಿಕೆಟ್ ಕೀಪರ್.

ರೋಹಿತ್ ಶರ್ಮ:
* ಟೆಸ್ಟ್, ಏಕದಿನ, ಟಿ20 ಮೂರು ಮಾದರಿಯಲ್ಲೂ ಮೂರು ಶತಕ ಗಳಿಸಿರುವ ಏಕೈಕ ಆಟಗಾರ.
* ಟಿ20ಐನಲ್ಲಿ ಕಾಲಿನ್ ಮನ್ರೋ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರ.
* ಟಿ20ಐನಲ್ಲಿ 2000ರನ್ ಪೂರೈಸಿದ ಐದನೇ ಆಟಗಾರ, ಬ್ರೆಂಡನ್ ಮೆಕಲಮ್, ಮಾರ್ಟಿನ್ ಗಪ್ಟಿಲ್, ಶೋಯಿಬ್ ಮಲ್ಲಿಕ್ ಹಾಗೂ ವಿರಾಟ್ ಕೊಹ್ಲಿ ಇತರೆ ಆಟಗಾರರು.
* ಒಟ್ಟಾರೆ, ಇದು ಅವರ ಐದನೇ ಟಿ20 ಶತಕವಾಗಿದ್ದು, ಬೇರೆ ಭಾರತೀಯ ಆಟಗಾರರು ಈ ಸಾಧನೆ ಮಾಡಿಲ್ಲ.
* ಟಿ20ಯಲ್ಲಿ 18ಕ್ಕೂ ಹೆಚ್ಚು 50 ಪ್ಲಸ್ ರನ್ ಗಳಿಕೆಯಲ್ಲಿ ಕೊಹ್ಲಿ ಜತೆ ಸ್ಥಾನ ಹಂಚಿಕೊಂಡಿರುವ ರೋಹಿತ್.

ತಂಡದ ಸಾಧನೆ
* ಭಾರತ ವಿರುದ್ಧ ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಗಳಿಸಿದ 198ರನ್, 9 ವಿಕೆಟ್ ಕಳೆದುಕೊಂಡ ಬಳಿಕ ಗಳಿಸಿದ ತಂಡದ ದೊಡ್ಡ ಮೊತ್ತವಾಗಿದೆ.
* ಭಾರತ ಇಲ್ಲಿ ತನಕ ತಾನಾಡಿರುವ ಎಲ್ಲಾ 8 ಟಿ20ಐ ಸರಣಿ (ಕನಿಷ್ಟ 3 ಪಂದ್ಯಗಳು) ಯನ್ನು ಗೆದ್ದುಕೊಂಡಿದೆ.
* ಸತತವಾಗಿ 6 ಟಿ20 ಸರಣಿ ಅಥವಾ ಟೂರ್ನಮೆಂಟ್ ಕೂಡಾ ಜಯಿಸಿದೆ.
* ಭಾರತದ ಹಾರ್ದಿಕ್ ಪಾಂಡ್ಯ 30 ಪ್ಲಸ್ ರನ್ ಗಳಿಕೆ, 4 ವಿಕೆಟ್ ಪಡೆದ ಸಾಧನೆ ಮಾಡಿದ 7ನೇ ಆಟಗಾರ ಎನಿಸಿಕೊಂಡರು.

Story first published: Monday, July 9, 2018, 0:14 [IST]
Other articles published on Jul 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X