ರೋಹಿತ್ ಶರ್ಮಾ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ರಿಷಭ್ ಪಂತ್!

ಸದ್ಯ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತವಾಗಿದ್ದು ಮೊದಲನೇ ಟೆಸ್ಟ್ ಪಂದ್ಯ ಇಂಗ್ಲೆಂಡ್‌ನ ನಾಟಿಂಗ್ ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ನೆಲದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಸೋಲುಂಡಿದ್ದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದು ಯಶಸ್ಸಿನ ಹಾದಿಗೆ ಮರಳುವ ತವಕದಲ್ಲಿದೆ.

'ರೋಹಿತ್ ಶರ್ಮಾಗಿದೆ ಮೂವತ್ತರ ಸಮಸ್ಯೆ'; ಟ್ರೋಲ್‌ಗೆ ಒಳಗಾದ ಹಿಟ್‌ಮ್ಯಾನ್!'ರೋಹಿತ್ ಶರ್ಮಾಗಿದೆ ಮೂವತ್ತರ ಸಮಸ್ಯೆ'; ಟ್ರೋಲ್‌ಗೆ ಒಳಗಾದ ಹಿಟ್‌ಮ್ಯಾನ್!

ಸದ್ಯ ಮೊದಲನೇ ಪಂದ್ಯ ನಡೆಯುತ್ತಿದ್ದು ಟೀಮ್ ಇಂಡಿಯಾ ಬೌಲರ್‌ಗಳ ಅಮೋಘ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡವನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ 183 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇನ್ನು ಟೀಮ್ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದು ಕೆಎಲ್ ರಾಹುಲ್ ಜವಬ್ದಾರಿಯುತ ಪ್ರದರ್ಶನದಿಂದ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ ರೀತಿಯೇ ಬ್ಯಾಟ್ಸ್‌ಮನ್‌ಗಳು ಸಹ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನಿರೀಕ್ಷಿಸುತ್ತಿದ್ದ ಟೀಮ್ ಇಂಡಿಯಾ ಅಭಿಮಾನಿಗಳಿಗೆ ತುಸು ನಿರಾಸೆ ಉಂಟಾಯಿತು ಎಂದರೆ ತಪ್ಪಾಗಲಾರದು.

ಕೆ ಎಲ್ ರಾಹುಲ್ ನೋಡಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಲಿಯಲಿ ಎಂದ ಮಾಜಿ ಕ್ರಿಕೆಟಿಗ!ಕೆ ಎಲ್ ರಾಹುಲ್ ನೋಡಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಲಿಯಲಿ ಎಂದ ಮಾಜಿ ಕ್ರಿಕೆಟಿಗ!

ಏಕೆಂದರೆ ಕೆ ಎಲ್ ರಾಹುಲ್ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮನ್‌ ಕೂಡ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಗಲೇ ಇಲ್ಲ. ರೋಹಿತ್ ಶರ್ಮಾ 36, ಚೇತೇಶ್ವರ್ ಪೂಜಾರ 4, ವಿರಾಟ್ ಕೊಹ್ಲಿ 0, ಅಜಿಂಕ್ಯಾ ರಹಾನೆ 5 ಮತ್ತು ರಿಷಭ್ ಪಂತ್ 25 ರನ್ ಗಳಿಸಿದರು. ರಿಷಭ್ ಪಂತ್ ಕೇವಲ 20 ಎಸೆತಗಳಲ್ಲಿ 25 ರನ್ ಬಾರಿಸಿ ರಾಬಿನ್ಸನ್ ಎಸೆತದಲ್ಲಿ ಜಾನಿ ಬೈರ್‌ಸ್ಟೋಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಹೀಗೆ ಕಡಿಮೆ ಮೊತ್ತಕ್ಕೆ ರಿಷಭ್ ಪಂತ್ ಔಟ್ ಆದರೂ ಸಹ ಈ ವರ್ಷದ ಟೆಸ್ಟ್ ಕ್ರಿಕೆಟ್‍ನಲ್ಲಿ ವಿಶೇಷ ಸಾಧನೆಯೊಂದನ್ನು ಮಾಡುವುದರ ಮೂಲಕ ಸುದ್ದಿಯಾಗಿದ್ದಾರೆ. ರೋಹಿತ್ ಶರ್ಮಾರನ್ನೇ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿ ರಿಷಭ್ ಪಂತ್ ಮಾಡಿರುವ ಸಾಧನೆಯ ವಿವರ ಮುಂದೆ ಇದೆ ಓದಿ..

2021ರಲ್ಲಿ ಅತಿಹೆಚ್ಚು ಟೆಸ್ಟ್ ರನ್ ಗಳಿಸಿರುವ ಭಾರತೀಯ ಪಂತ್!

2021ರಲ್ಲಿ ಅತಿಹೆಚ್ಚು ಟೆಸ್ಟ್ ರನ್ ಗಳಿಸಿರುವ ಭಾರತೀಯ ಪಂತ್!

ಈ ವರ್ಷ ನಡೆದಿರುವ ಟೆಸ್ಟ್ ಸರಣಿಗಳ ಪೈಕಿ ಭಾರತದ ಪರ ಅತಿಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಿಷಭ್ ಪಂತ್ ಅಗ್ರಸ್ಥಾನಕ್ಕೇರಿದ್ದಾರೆ. ಹೌದು 2021ರಲ್ಲಿ ಒಟ್ಟು 13 ಟೆಸ್ಟ್ ಇನ್ನಿಂಗ್ಸ್ ಆಡಿರುವ ರಿಷಭ್ ಪಂತ್ 576 ರನ್ ಗಳಿಸಿದ್ದಾರೆ. ಇದು ಈ ವರ್ಷ ನಡೆದಿರುವ ಟೆಸ್ಟ್ ಪಂದ್ಯಗಳ ಪೈಕಿ ಭಾರತೀಯ ಬ್ಯಾಟ್ಸ್‌ಮನ್‌ ಗಳಿಸಿರುವ ಅತಿಹೆಚ್ಚು ರನ್ ಆಗಿದೆ. ರಿಷಭ್ ಪಂತ್ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮುನ್ನ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರು. ಈ ವರ್ಷ ನಡೆದಿರುವ ಟೆಸ್ಟ್ ಪಂದ್ಯಗಳಲ್ಲಿ 14 ಇನ್ನಿಂಗ್ಸ್ ಆಡಿರುವ ರೋಹಿತ್ ಶರ್ಮಾ 574 ರನ್ ಬಾರಿಸಿದ್ದು 2021ರ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸದ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

2021ರಲ್ಲಿ ಅತಿಹೆಚ್ಚು ಟೆಸ್ಟ್ ರನ್ ಬಾರಿಸಿರುವ ಟಾಪ್ 5 ಭಾರತೀಯ ಬ್ಯಾಟ್ಸ್‌ಮನ್‌ಗಳು

2021ರಲ್ಲಿ ಅತಿಹೆಚ್ಚು ಟೆಸ್ಟ್ ರನ್ ಬಾರಿಸಿರುವ ಟಾಪ್ 5 ಭಾರತೀಯ ಬ್ಯಾಟ್ಸ್‌ಮನ್‌ಗಳು

ಈ ವರ್ಷ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಟಾಪ್ 5 ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿ ಹೀಗಿದೆ:

1. ರಿಷಭ್ ಪಂತ್ 576 ( 13 ಇನ್ನಿಂಗ್ಸ್ )

2. ರೋಹಿತ್ ಶರ್ಮಾ 574 ( 14 ಇನ್ನಿಂಗ್ಸ್ )

3. ಚೇತೇಶ್ವರ್ ಪೂಜಾರ 368 (13 ಇನ್ನಿಂಗ್ಸ್‌)

4. ಶುಬ್ಮನ್ ಗಿಲ್ 334 (13 ಇನ್ನಿಂಗ್ಸ್)

5. ಅಜಿಂಕ್ಯಾ ರಹಾನೆ 268 ( 13 ಇನ್ನಿಂಗ್ಸ್‌)

ಖೇಲ್ ರತ್ನ ಮರುನಾಮಕರಣ ಬೆನ್ನಲ್ಲೇ ಮೋದಿಗೆ ತಿರುಗೇಟು ಕೊಟ್ಟ ಇರ್ಫಾನ್ ಪಠಾಣ್ | Oneindia Kannada
ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಸ್ಥಾನ!

ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಸ್ಥಾನ!

ಈ ಮೇಲ್ಕಂಡ ಪಟ್ಟಿ ನೋಡಿದರೆ ವಿರಾಟ್ ಕೊಹ್ಲಿ ಹೆಸರು ಇಲ್ಲದೇ ಇರುವುದು ಎಲ್ಲರಲ್ಲಿಯೂ ಆಶ್ಚರ್ಯ ಉಂಟು ಮಾಡುವುದಂತೂ ಖಚಿತ. ರನ್ ಮೆಷಿನ್ ಎಂದೇ ಖ್ಯಾತಿಯನ್ನು ಪಡೆದಿರುವ ಕೊಹ್ಲಿ ಈ ರನ್ ದಾಖಲೆಯಲ್ಲಿ ಸ್ಥಾನ ಪಡೆಯದೆ ಇರುವಷ್ಟು ಕಳಪೆ ಫಾರ್ಮ್‌ಗೆ ಜಾರಿದ್ದು ಕೊಹ್ಲಿ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 18 - October 26 2021, 03:30 PM
ದಕ್ಷಿಣ ಆಫ್ರಿಕಾ
ವೆಸ್ಟ್ ಇಂಡೀಸ್
Predict Now

For Quick Alerts
ALLOW NOTIFICATIONS
For Daily Alerts
Story first published: Friday, August 6, 2021, 18:52 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X