ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕನಾಗಿ ಶತಕದ ವಿಶ್ವದಾಖಲೆ ಬರೆಯಲು ಕೊಹ್ಲಿಗೆ ಬೇಕು ಒಂದೇ ಸೆಂಚುರಿ

India vs England: Virat Kohli just a century away to break Ricky Pontings Most Centuries as a captain

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿಯ ಬಹು ನಿರೀಕ್ಷಿತ ದಾಖಲೆಯೊಂದು ಪೂರ್ಣವಾಗುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.

ನಾಯಕನಾಗಿ ಅತಿ ಹೆಚ್ಚು ಶತಕ ದಾಖಲಿಸಿದ ಆಟಗಾರ ಎಂಬ ದಾಖಲೆಗೆ ವಿರಾಟ್ ಕೊಹ್ಲಿಗೆ ಕೇವಲ ಒಂದು ಶತಕ ಮಾತ್ರವೇ ಅಗತ್ಯವಿದೆ. ಸದ್ಯ ವಿರಾಅಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ದಾಖಲೆಯ ಪಟ್ಟಿಯಲ್ಲಿ ಸಮಾನ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಇನ್ನೊಂದು ಶತಕವನ್ನು ದಾಖಲಿಸಿದರೆ ಆ ದಾಖಲೆ ಸಂಪೂರ್ಣವಾಗಿ ಟೀಮ್ ಇಂಡಿಯಾ ನಾಯಕನ ಪಾಲಾಗಲಿದೆ.

 ಭಾರತ vs ಇಂಗ್ಲೆಂಡ್: ಬೃಹತ್ ದಾಖಲೆಯತ್ತ ಚಿತ್ತ ನೆಟ್ಟ ಅಶ್ವಿನ್, ಬೂಮ್ರಾ, ರೂಟ್, ಆಂಡರ್ಸನ್ ಭಾರತ vs ಇಂಗ್ಲೆಂಡ್: ಬೃಹತ್ ದಾಖಲೆಯತ್ತ ಚಿತ್ತ ನೆಟ್ಟ ಅಶ್ವಿನ್, ಬೂಮ್ರಾ, ರೂಟ್, ಆಂಡರ್ಸನ್

ಕೊಹ್ಲಿ ಶತಕದ ದಾಖಲೆ

ಕೊಹ್ಲಿ ಶತಕದ ದಾಖಲೆ

ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ನಾಯಕರಾಗಿ 41 ಅಂತಾರಾಷ್ಟ್ರೀಯ ಶತಕಗಳನ್ನು ದಾಖಲಿಸಿದ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ 191 ಇನ್ನಿಂಗ್ಸ್‌ಗಳನ್ನು ಬಳಸಿ ಈ ಸಾಧನೆಯನ್ನು ಮಾಡಿದ್ದರೆ ರಿಕಿ ಪಾಂಟಿಂಗ್ ಇಷ್ಟು ಶತಕಗಳಿಗಾಗಿ 376 ಇನ್ನಿಂಗ್ಸ್‌ ಬಳಸಿದ್ದಾರೆ.

ಟೆಸ್ಟ್ ಹಾಗೂ ಏಕದಿನದಲ್ಲಿ ಶತಕಗಳ ಸಂಖ್ಯೆ

ಟೆಸ್ಟ್ ಹಾಗೂ ಏಕದಿನದಲ್ಲಿ ಶತಕಗಳ ಸಂಖ್ಯೆ

ವಿರಾಟ್ ಕೊಹ್ಲಿ ನಾಯಕನಾಗಿ ಬಾರಿಸಿದ 41 ಶತಕಗಳ ಪೈಕಿ 20 ಶತಕಗಳು ಟೆಸ್ಟ್ ಮಾದರಿಯಲ್ಲಿ ಬಂದಿದ್ದರೆ ಉಳಿದ 21 ಶತಕಗಳು ಏಕದಿನ ಕ್ರಿಕೆಟ್‌ನಲ್ಲಿ ದಾಖಲಾಗಿದೆ. ಈ ಮೂಲಕ ನಾಯಕನಾಗಿ ಅತ್ಯುನ್ನತ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಲು ಕೊಹ್ಲಿ ಸಜ್ಜಾಗಿದ್ದಾರೆ.

ಮೂರು ನಾಲ್ಕನೇ ಸ್ಥಾನದಲ್ಲಿ 'ಸ್ಮಿತ್' ದ್ವಯರು

ಮೂರು ನಾಲ್ಕನೇ ಸ್ಥಾನದಲ್ಲಿ 'ಸ್ಮಿತ್' ದ್ವಯರು

ನಾಯಕನಾಗಿ ಶತಕ ದಾಖಲಿಸಿದ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಇದ್ದಾರೆ. ಗ್ರೇಮ್ ಸ್ಮಿತ್ 33 ಶತಕಗಳನ್ನು ನಾಯಕನಾಗಿ ಬಾರಿಸಿದ್ದಾರೆ. ಅದಾದ ಬಳಿಕ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಇದ್ದು ಸ್ಮಿತ್ ನಾಯಕನಾಗಿ 20 ಶತಕಗಳನ್ನು ಬಾರಿಸಿದ್ದಾರೆ.

ವಿರಾಟ್ ಒಟ್ಟಾರೆ ಶತಕದ ಸಾಧನೆ

ವಿರಾಟ್ ಒಟ್ಟಾರೆ ಶತಕದ ಸಾಧನೆ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಟ್ಟಾರೆ ಶತಕಗಳ ಸಂಖ್ಯೆಯಲ್ಲಿ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು 70 ಶತಕಗಳನ್ನು ತಮ್ಮ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 43 ಶತಕ ಬಾರಿಸಿದ್ದು ಟೆಸ್ಟ್‌ನಲ್ಲಿ 27 ಶತಕ ಸಿಡಿಸಿದ್ದಾರೆ. 100 ಶತಕಗಳನ್ನು ಸಿಡಿಸಿರುವ ಸಚಿನ್ ತೆಂಡೂಲ್ಕರ್ ಶತಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು 71 ಶತಕ ಸಿಡಿಸಿರುವ ರಿಕಿ ಪಾಂಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.

Story first published: Friday, February 5, 2021, 10:15 [IST]
Other articles published on Feb 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X