ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ ODI Series : ಭಾರತ vs ನ್ಯೂಜಿಲೆಂಡ್: ಟಿ20 ಆಯ್ತು ಇನ್ನು ಏಕದಿನ ಸರಣಿ ಮೇಲೆ ಕಣ್ಣು: ಯಾವಾಗ ಆರಂಭ?

India vs New Zealand ODI series: full Squads, Schedule, Venues, Live Streaming details

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ20 ಸರಣಿ ಅಂತ್ಯವಾಗಿದ್ದು ಇದೀಗ ಏಕದಿನ ಸರಣಿ ಮೇಲೆ ಚಿತ್ತ ನೆಟ್ಟಿದೆ. ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 1-0 ಅಂತರದಿಂದ ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾದರೆ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭಾರೀ ಗೆಲುವು ಸಾಧಿಸಿತು. ಬಳಿಕ ಮಂಗಳವಾರ ನಡೆದ ಅಂತಿಮ ಪಂದ್ಯಕ್ಕೂ ಮಳೆ ಅಡ್ಡಿಯಾಗಿದ್ದು ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಪಂದ್ಯ ಟೈ ಆಗಿದೆ.

ಈ ಸರಣಿಗೆ ಟೀಮ್ ಇಂಡಿಯಾ ಶಿಖರ್ ಧವನ್ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾ ಯುವ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದ್ದರೂ ತಂಡ ಸಾಕಷ್ಟು ಬಲಿಷ್ಠವಾಗಿಯೇ ಇದೆ. ಇತ್ತ ನ್ಯೂಜಿಲೆಂಡ್ ತಂಡವನ್ನು ಕೇನ್ ವಿಲಿಯಮ್ಸನ್ ಮುನ್ನಡೆಸಲಿದ್ದು ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ.

Vijay Hajare Trophy: ಜಾರ್ಖಂಡ್ ವಿರುದ್ಧ ಸೋತು ನಾಕೌಟ್ ರೇಸ್‌ನಿಂದ ಹೊರಬಿದ್ದ ದೆಹಲಿVijay Hajare Trophy: ಜಾರ್ಖಂಡ್ ವಿರುದ್ಧ ಸೋತು ನಾಕೌಟ್ ರೇಸ್‌ನಿಂದ ಹೊರಬಿದ್ದ ದೆಹಲಿ

ಸರಣಿಯ ವೇಳಾಪಟ್ಟಿ: ನವೆಂಬರ್ 25ರಂದು ಮೊದಲ ಪಂದ್ಯ ನಡೆಯಲಿದ್ದು ಆಕ್ಲಂಡ್‌ನ ಈಡನ್ ಪಾರ್ಕ್‌ನಲ್ಲಿ ಈ ಪಂದ್ಯ ನಡೆಯಲಿದೆ. ನವೆಂಬರ್ 27ರಂದು 2ನೇ ಪಂದ್ಯ ನಡೆಯಲಿದ್ದು ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್‌ನಲ್ಲಿ ಈ ಪಂದ್ಯ ನಡೆಯಲಿದೆ. ಇನ್ನು ಮೂರನೇ ಪಂದ್ಯ ನವೆಂಬರ್ 30ರಂದು ನಡೆಯಲಿದ್ದು ಕ್ರೈಸ್ಟ್‌ಚರ್ಚ್‌ನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಇನ್ನು ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆಗೆ ಆರಂಭವಾಗಲಿದೆ.

ನೇರಪ್ರಸಾರದ ಮಾಹಿತಿ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳ ನೇರಪ್ರಸಾರ ಭಾರತದಲ್ಲಿ ಅಮೆಜಾನ್ ಪ್ರೈಮ್‌ ವಿಡಿಯೋದಲ್ಲಿ ನೇರಪ್ರಸಾರವಾಗಲಿದೆ. ಇನ್ನು ಡಿಡಿ ಸ್ಪೋರ್ಟ್ಸ್ 1.0 ವಾಹಿನಿಯಲ್ಲಿಯೂ ಈ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

IPL 2023: ಈ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದ ಸನ್‌ರೈಸರ್ಸ್ ಹೈದರಾಬಾದ್IPL 2023: ಈ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದ ಸನ್‌ರೈಸರ್ಸ್ ಹೈದರಾಬಾದ್

ಭಾರತ: ಶಿಖರ್ ಧವನ್ (ನಾಯಕ), ರಿಷಬ್ ಪಂತ್ (ಉಪ ನಾಯಕ & ವಿಕೆಟ್ ಕೀಪರ್), ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಮ್ಯಾಟ್ ಹೆನ್ರಿ.

Story first published: Tuesday, November 22, 2022, 19:04 [IST]
Other articles published on Nov 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X