ಭಾರತಕ್ಕೆ ಆರಂಭಿಕ ಆಘಾತ, ರಾಹುಲ್ ಶೂನ್ಯ ಸುತ್ತಿ ಔಟ್

Posted By:

ಕೋಲ್ಕತಾ, ನವೆಂಬರ್ 16: ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಟಾಸ್ ವಿಳಂಬವಾಗಿತ್ತು. ನಂತರ ಟಾಸ್ ಗೆದ್ದ ಶ್ರೀಲಂಕಾ ನಾಯಕ ಚಂಡಿಮಾಲ್ ಅವರು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದರು.

ಸ್ಕೋರ್ ಕಾರ್ಡ್

ಸತತ 8 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ವಿಶ್ವದ ನಂ.1 ತಂಡ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೀಲಂಕಾ ಸಜ್ಜಾಗಿದೆ. ಯುಎಇನಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧ 2-0 ಅಂತರದ ಗೆಲುವು ಕಂಡ ಶ್ರೀಲಂಕಾ ಉತ್ತಮ ಲಯದಲ್ಲಿದೆ.

ಸಂಭಾವ್ಯ ತಂಡ
ಭಾರತ: ಕೆಎಲ್ ರಾಹುಲ್, ಶಿಖರ್ ಧವನ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಆರ್.ಅಶ್ವಿನ್/ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ಉಮೇಶ್ ಯಾದವ್.

ಶ್ರೀಲಂಕಾ: ದಿಮುತ್ ಕರುಣರತ್ನೆ, ಸಾದೀರಾ ಸಮರವಿಕ್ರಮ, ಧನಂಜಯ ಡಿ ಸಿಲ್ವ, ದಿನೇಶ್ ಚಾಂಡಿಮಲ್ (ನಾಯಕ), ಏಂಜೆಲೋ ಮ್ಯಾಥ್ಯೂಸ್, ನಿರೋಶನ್ ಡಿಕ್‌‌ವೆಲ್ಲಾ, ಲಹಿರು ತಿರಿಮನ್ನೆ/ದಾಸನ್ ಶನಕ, ದಿಲ್ರುವಾನ್ ಪೆರೇರಾ, ಸುರಂಗ ಲಕ್ಮಲ್, ರಂಗನಾ ಹೆರಾತ್, ಲಹಿರು ಗಮಗೆ/ವಿಶ್ವ ಫೆರ್ನಾಂಡೋ.

ಅಶ್ವಿನ್, ಹೆರಾತ್ ಸಾಧನೆ

ಅಶ್ವಿನ್, ಹೆರಾತ್ ಸಾಧನೆ

ಭಾರತದ ರವಿಚಂದ್ರನ್ ಅಶ್ವಿನ್ ಹಾಗೂ ಶ್ರೀಲಂಕಾದ ರಂಗಣ ಹೆರಾತ್ ಅವರು 2015ರ ನಂತರ ಕ್ರಮವಾಗಿ 178 ಹಾಗೂ 145 ವಿಕೆಟ್ ಗಳಿಸಿದ್ದು, ಉಳಿದವರಿಗೆ ಹೋಲಿಸಿದರೆ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಗಳಾಗಿದ್ದಾರೆ.

ಪೆರೆರಾಗೆ 100 ವಿಕೆಟ್ ಗುರಿ

ಪೆರೆರಾಗೆ 100 ವಿಕೆಟ್ ಗುರಿ

ಶ್ರೀಲಂಕಾದ ದಿಲ್ರುವನ್ ಪೆರೆರಾಗೆ ಟೆಸ್ಟ್ ಕ್ರಿಕೆಟ್ ನಲ್ಲಿ 100 ವಿಕೆಟ್ ಗಳಿಸಲು ಇನ್ನೂ 7 ವಿಕೆಟ್ ಮಾತ್ರ ಬೇಕಿದೆ. ಈ ಮೈಲಿಗಲ್ಲು ದಾಟಿದರೆ, ಈ ಸಾಧನೆ ಮಾಡಿದ ಶ್ರೀಲಂಕಾದ ಮೂರನೇ ಬೌಲರ್(ಮುರಳಿಧರನ್ ಹಾಗೂ ಹೆರಾತ್ ಇನ್ನಿಬ್ಬರು) ಎನಿಸಲಿದ್ದಾರೆ. 22 ಟೆಸ್ಟ್ ಪಂದ್ಯಗಳಲ್ಲೇ ಈ ಸಾಧನೆ ಮಾಡುವ ತವಕದಲ್ಲಿದ್ದಾರೆ.

ಈಡನ್ ಗಾರ್ಡನ್ಸ್ ಮೈದಾನದ ಹೆಗ್ಗುರುತು

ಈಡನ್ ಗಾರ್ಡನ್ಸ್ ಮೈದಾನದ ಹೆಗ್ಗುರುತು

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ 40 ಪಂದ್ಯಗಳನ್ನಾಡಿದೆ. ಆದರೆ,ಶೇ30ರಷ್ಟು ಮಾತ್ರ ಗೆಲುವು ಕಂಡಿದೆ. 12 ಗೆಲುವು, 19 ಡ್ರಾ, 9 ಸೋಲು ಕಂಡಿದೆ. ಮುಂಬೈನ ಬ್ರಬೋರ್ನ್ಸ್ ಮೈದಾನದಲ್ಲಿ ಶೇ28ರಷ್ಟು ಗೆಲುವು ಕಂಡಿದೆ.

ಲಂಕಾಕ್ಕೆ ಭಾರತದಲ್ಲಿ ಗೆಲುವಿನ ಗುರಿ

ಲಂಕಾಕ್ಕೆ ಭಾರತದಲ್ಲಿ ಗೆಲುವಿನ ಗುರಿ

ಇಲ್ಲಿ ಭಾರತ ವಿರುದ್ಧ ಟೆಸ್ಟ್ ಪಂದ್ಯ ಗೆಲ್ಲುವ ಶ್ರೀಲಂಕಾದ ಕನಸು ಇನ್ನೂ ನನಸಾಗಿಲ್ಲ. 10 ಪಂದ್ಯಗಳಲ್ಲಿ ಸೋಲು, 7ರಲ್ಲಿ ಡ್ರಾ ಸಾಧಿಸಿದೆ. ಕಳೆದ ಎರಡು ಪಂದ್ಯಗಳಲ್ಲಿ ಇನ್ನಿಂಗ್ಸ್ ಅಂತರದ ಸೋಲು ಕಂಡಿದೆ.

ಭಾರತ ಇನ್ನೂ ಒಂದು ಪಂದ್ಯ ಸೋತಿಲ್ಲ

ಭಾರತ ಇನ್ನೂ ಒಂದು ಪಂದ್ಯ ಸೋತಿಲ್ಲ

ಉಭಯ ದೇಶಗಳ ಸರಣಿಯಲ್ಲಿ ಭಾರತ ಇದುವರೆವಿಗೂ ಒಂದು ಟೆಸ್ಟ್ ಪಂದ್ಯ ಸೋತಿಲ್ಲ. 2ಕ್ಕೂ ಅಧಿಕ ಪಂದ್ಯಗಳ ಸರಣಿಯಲ್ಲಿ ಭಾರತ ನಾಲ್ಕು ಬಾರಿ ಜಯಶಾಲಿಯಾಗಿದೆ.

Story first published: Thursday, November 16, 2017, 11:16 [IST]
Other articles published on Nov 16, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ