ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಡ್ರಾ

Posted By:

ಕೋಲ್ಕತಾ, ನವೆಂಬರ್ 20: ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಐದನೇ -ದಿನವಾದ ಇಂದು ಪ್ರವಾಸಿ ಶ್ರೀಲಂಕಾ ತಂಡದ ವಿರುದ್ಧ ಟೀಂ ಇಂಡಿಯಾ ನಾಯಕ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಶ್ರೀಲಂಕಾಕ್ಕೆ ಗೆಲ್ಲಲು 231ರನ್ ಟಾರ್ಗೆಟ್ ನೀಡಲಾಗಿತ್ತು. ಶ್ರೀಲಂಕಾ ತಂಡ ವಿಕೆಟ್ ಕಾಯ್ದುಕೊಂಡು 75/7 ಸ್ಕೋರ್ ಮಾಡಿದ್ದಾಗ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.

ಸ್ಕೋರ್ ಕಾರ್ಡ್

ಶ್ರೀಲಂಕಾ ಚೇಸ್ : 231ರನ್ ಗುರಿ ಬೆನ್ನು ಹತ್ತಿದ ಶ್ರೀಲಂಕಾದ ಆರಂಭ್ ಉತ್ತಮವಾಗಿರಲಿಲ್ಲ. ಸಮರವಿಕ್ರಮ 0, ಕರುಣಾರತ್ನೆ 1ರನ್ ಗಳಿಸಿ ಔಟ್ ಆದರು.

ಏಂಜೆಲೋ ಮ್ಯಾಥ್ಯೂಸ್ 12, ದಿನೇಶ್ ಚಂಡಿಮಾಲ್ 20, ನಿರೋಶನ್ ಡಿಕ್ವೆಲಾ 27 ಬಿಟ್ಟರೆ ಉಳಿದವರು ಎರಡಂಕಿ ಸ್ಕೋರ್ ಮಾಡಲಿಲ್ಲ. 26.3 ಓವರ್ ಗಳಲ್ಲಿ 75/7 ಸ್ಕೋರ್ ಮಾಡಿ ಸೋಲಿನಿಂದ ಬಚಾವಾಯಿತು. ಭುವನೇಶ್ವರ್ ಕುಮಾರ್ 4, ಮೊಹಮ್ಮದ್ ಶಮಿ 2, ಉಮೇಶ್ ಯಾದವ್ 1 ವಿಕೆಟ್ ಗಳಿಸಿದರು.

ನಾಯಕ ಕೊಹ್ಲಿ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 352/8 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿದೆ. ಆರಂಭಿಕ ಆಟಗಾರರಾದ ಶಿಖರ್ ಧವನ್ 94 ಹಾಗೂ ಕೆಎಲ್ ರಾಹುಲ್ 79ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು.

Kolkata Test, Day 5: Live: Kohli slams sensational ton, India declare innings at 352/8

ನಾಯಕ ಕೊಹ್ಲಿ ಅವರು 119 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಇದ್ದ 104ರನ್ ಗಳಿಸಿ ಅಜೇಯರಾಗಿ ಉಳಿದರು. 88.4 ಓವರ್ ಗಳಲ್ಲಿ 352/8 ಸ್ಕೋರ್ ಆಗಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಭಾರತ, ಲಂಕಾಕ್ಕೆ 231ರನ್ ಗಳ ಟಾರ್ಗೆಟ್ ನೀಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಮಿಂಚಿದ್ದ ಲಂಕಾದ ಬೌಲರ್ ಸುರಂಗ ಲಕ್ಮಲ್ ಅವರು ಎರಡನೇ ಇನ್ನಿಂಗ್ಸ್ ನಲ್ಲೂ ಉತ್ತಮ ಬೌಲಿಂಗ್ ಮಾಡಿ 3 ವಿಕೆಟ್ ಕಿತ್ತರು. ಶನಕ ಕೂಡಾ 3 ವಿಕೆಟ್ ಪಡೆದರು.

Story first published: Monday, November 20, 2017, 14:12 [IST]
Other articles published on Nov 20, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ