ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಸರಂಗ ಇಲ್ಲದಿದ್ದರೂ ನಮ್ಮದು ಬಲಿಷ್ಠ ತಂಡ: ಭಾರತದ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಲಂಕಾ ನಾಯಕ

India vs Sri Lanka: Our squad is strong enough; SL skipper Dasun Shanaka on Hasarangas absence

ಭಾರತ ಹಾಗೂ ಶ್ರಿಲಂಕಾ ತಂಡಗಳು ಟಿ20 ಸರಣಿಯಲ್ಲಿ ಆಡಲು ಸಜ್ಜಾಗಿದ್ದು ಗುರುವಾರ ಲಕ್ನೋದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಆಡಲು ಎರಡು ತಂಡಗಳು ಕೂಡ ಭರ್ಜರಿ ಸಿದ್ಧತೆ ನಡೆಸಿದೆ. ಆದರೆ ಎರಡು ಭಾರತ ಹಾಗೂ ಶ್ರೀಲಂಕಾ ಎರಡು ತಂಡಗಳಿಗೆ ಕೂಡ ಕೆಲ ಪ್ರಮುಖ ಆಟಗಾರರ ಅಲಭ್ಯತೆ ಕಾಡಲಿದೆ. ಅದರಲ್ಲೂ ಶ್ರೀಲಂಕಾ ತಂಡದ ಪ್ರಮುಖ ಆಲ್‌ರೌಂಡರ್ ವನಿಂದು ಹಸರಂಗ ಕೊರೊನಾವೈರಸ್‌ನಿಂದ ಸಂಪೂರ್ಣ ಚೇತರಿಕೆ ಕಾರಣ ಟಿ20 ಸರಣಿಗೆ ಸಂಪೂರ್ಣ ಅಲಭ್ಯವಾಗಲಿದ್ದಾರೆ.

ಆದರೆ ತಂಡದ ಪ್ರಮುಖ ಆಟಗಾರನ ಅಲಭ್ಯತೆಯ ಹೊರತಾಗಿಯೂ ನಮ್ಮ ತಂಡ ಬಲಿಷ್ಠವಾಗಿದೆ ಎಂದು ಶ್ರೀಲಂಕಾದ ನಾಯಕ ದಾಸುನ್ ಶನಕಾ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಕೊರೊನಾವೈರಸ್‌ಗೆ ತುತ್ತಾಗಿರುವ ಹಸರಂಗ ಮತ್ತೊಂದು ಕೋವಿಡ್ ವರದಿ ಕೂಡ ಪಾಸಿಟಿವ್ ಬಂದ ಕಾರಣ ಇನ್ನೂ ಆಸ್ಟ್ರೇಲಿಯಾದಲ್ಲಿಯೇ ಉಳಿದುಕೊಂಡಿದ್ದಾರೆ.

ಭಾರತ ವಿರುದ್ಧ ಕಣಕ್ಕಿಳಿಯುವ ಮೊದಲೇ ಲಂಕಾಗೆ ಹಿನ್ನಡೆ: ಶ್ರೀಲಂಕಾದ ಬೌಲಿಂಗ್ ಬ್ರಹ್ಮಾಸ್ತ್ರವೇ ಇಲ್ಲಭಾರತ ವಿರುದ್ಧ ಕಣಕ್ಕಿಳಿಯುವ ಮೊದಲೇ ಲಂಕಾಗೆ ಹಿನ್ನಡೆ: ಶ್ರೀಲಂಕಾದ ಬೌಲಿಂಗ್ ಬ್ರಹ್ಮಾಸ್ತ್ರವೇ ಇಲ್ಲ

ಆಸ್ಟ್ರೇಲಿಯಾ ವಿರುದ್ಧಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ 1-4 ಅಂತರದ ಸೋಲು ಅನುಭವಿಸಿತು. ಈ ಸರಣಿಯ ಅಂತಿಮ ಮೂರು ಪಂದ್ಯಗಳಲ್ಲಿ ಹಸರಂಗ ಆಡಿರಲಿಲ್ಲ. ಶ್ರೀಲಂಕಾ ಸ್ಕ್ವಾಡ್ ಕಳೆದ ಮಂಗಳವಾರ ಭಾರತಕ್ಕೆ ಆಗಮಿಸಿದ್ದರೂ ಹಸರಂಗ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಕ್ವಾರಂಟೈನ್‌ನಲ್ಲಿ ಪೂರೈಸುತ್ತಿದ್ದಾರೆ. ನೆಗೆಟಿವ್ ವರದಿ ಬರುವವರೆಗೆ ಹಸರಂಗ ಕ್ಯಾನ್‌ಬೆರಾದಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಾಹಿತಿ ನೀಡಿದೆ.

"ಯುವ ಆಟಗಾರರು ಶ್ರೀಲಂಕಾ ಕ್ರಿಕೆಟ್‌ನಲ್ಲಿ ಸಾಕಷ್ಟು ಸಮಯಗಳಿಮದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅವರಿಮದ ಅದ್ಭುತ ಆಟಗಳು ಬಂದಿದೆ. ಕೊರೊನಾ ಕಾಲದಲ್ಲಿ ಇಂತಾ ಸನ್ನಿವೇಶಗಳು ಎದುರಾಗುವುದು ಸಾಮಾನ್ಯ. ಎಲ್ಲಾ ತಂಡಗಳು ಕೂಡ ಇಂತಾ ಸನ್ನಿವೇಶಗಳನ್ನು ಎದುರಿಸುತ್ತಿವೆ. ವನಿಂದು ಅಲಭ್ಯತೆ ನಮಗೆ ಕಾಡಲಿದೆ ನಿಜ. ಆದರೆ ಅವರು ಶೀಘ್ರದಲ್ಲಿಯೇ ಮರಳಲಿದ್ದಾರೆ. ನಮ್ಮ ಬಳಗ ಇನ್ನು ಕೂಡ ಸಾಕಷ್ಟು ಬಲಿಷ್ಠವಾಗಿದೆ" ಎಂದು ದಾಸುನ್ ಶನಕಾ ಮೊದಲ ಪಂದ್ಯದ ಹಿಂದಿ ದಿನ ಪ್ರತಿಕ್ರಿಯೆ ನೀಡಿದ್ದಾರೆ.

"ಅವರು ಐಪಿಎಲ್ ಅನುಭವ ಹೊಂದಿರುವ ಸಾಕಷ್ಟು ಆಟಗಾರರನ್ನು ಹೊಂದಿದ್ದಾರೆ. ಅವರ ತಮಡ ಬಲಿಷ್ಠವಾಗಿದೆ. ಆದರೆ ನಾವು ಕೂಡ ಅತ್ಯುತ್ತಮ ಆಟಗಾರರ ಬಳಗವನ್ನು ಹೊಂದಿದ್ದೇವೆ" ಎಂದು ಶ್ರೀಲಂಕಾ ತಮಡದ ನಾಯಕ ದಾಸುನ್ ಶನಕಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಂದುವರಿದು ಮಾತನಾಡಿದ ಅವರು ನಾವು ನಮ್ಮ ಅಗ್ರ ಕ್ರಮಾಂಕದಿಂದ ಅದ್ಭುತ ಪ್ರದರ್ಶನವನ್ನು ನಿರೀಕ್ಷಿಸುತ್ತೇವೆ. ಅಗ್ರ ಕ್ರಮಾಂಕದಿಂದ ಉತ್ತಮ ರನ್ ಕೊಡುಗೆ ಬಂದರೆ ಪಂದ್ಯವನ್ನು ಗೆಲ್ಲಲು ಅತ್ಯುತ್ತಮ ಅವಕಾಶವನ್ನು ಹೊಂದಿರುತ್ತೇವೆ. ಭಾರತ ಸಾಕಷ್ಟು ಬಲಿಷ್ಠವಾದ ಬೌಲಿಂಗ್ ವಿಭಾಗವನ್ನು ಹೊಂದಿದೆ. ನಮ್ಮ ಅಗ್ರ ಕ್ರಮಾಂಕ ಈ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾದರೆ ನಮ್ಮ ತಂಡದ ಬೌಲರ್‌ಗಳಿಗೆ ರನ್ ನಿಯಂತ್ರಿಸಲು ಅವಕಾಶವನ್ನು ನೀಡಿದಂತಾಗುತ್ತದೆ" ಎಂದು ಶನಕಾ ಅಭಿಪ್ರಾಯಪಟ್ಟಿದ್ದಾರೆ.

ಭಾರತ vs ಶ್ರೀಲಂಕಾ ಪ್ರಥಮ ಟಿ20: ಪಂದ್ಯದ ಆರಂಭ, ನೇರಪ್ರಸಾರ ಹಾಗೂ ಸಂಭಾವ್ಯ ಪ್ಲೇಯಿಂಗ್ XIಭಾರತ vs ಶ್ರೀಲಂಕಾ ಪ್ರಥಮ ಟಿ20: ಪಂದ್ಯದ ಆರಂಭ, ನೇರಪ್ರಸಾರ ಹಾಗೂ ಸಂಭಾವ್ಯ ಪ್ಲೇಯಿಂಗ್ XI

ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಗುರುವಾರ ಲಕ್ನೋದಲ್ಲಿ ನಡೆಯಲಿದೆ. ಎರಡು ಹಾಗೂ ಮೂರನೇ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದ್ದು ಪೆಬ್ರವರಿ 26 ಹಾಗೂ 27ರಂದು ನಡೆಯಲಿದೆ.

ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್
ಶ್ರೀಲಂಕಾ ಸ್ಕ್ವಾಡ್: ದಸುನ್ ಶನಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ (ಉಪನಾಯಕ), ದಿನೇಶ್ ಚಾಂಡಿಮಾಲ್, ದನುಷ್ಕ ಗುಣತಿಲಕ, ಕಮಿಲ್ ಮಿಶ್ರಾ, ಜನಿತ್ ಲಿಯಾನಗೆ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಲಹಿರು ಎಫ್ ಕುಮಾರ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಆಶಿಯನ್ ಡೇನಿಯಲ್

Story first published: Thursday, February 24, 2022, 9:43 [IST]
Other articles published on Feb 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X