ಇಂಗ್ಲೆಂಡ್ ವುಮೆನ್ vs ಇಂಡಿಯಾ ವುಮೆನ್: 2ನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಮಿಥಾಲಿ ಆಸರೆ

ಇಂಗ್ಲೆಂಡ್ ಮಹಿಳೆಯರ ವಿರುದ್ಧ ಭಾರತೀಯ ವನಿತಾ ತಂಡ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸೆಣೆಸಾಟವನ್ನು ನಡೆಸುತ್ತಿದೆ. ಎರಡನೇ ಪಂದ್ಯದಲ್ಲಿ ಭಾರತ ಉತ್ತಮ ಆರಂಭವನ್ನು ಪಡೆಯಿತಾದರೂ ಮಧ್ಯಮ ಕ್ರಮಾಂಕದ ಆಟಗಾರ್ತಿಯರಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಆದರೆ ನಾಯಕಿ ಮಿಥಾಲಿ ರಾಜ್ ಈ ಪಂದ್ಯದಲ್ಲೂ ಅರ್ಧ ಶತಕವನ್ನು ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಎರಡನೇ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಭಾರತವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಭಾರತದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮ ಅದ್ಭುತ ಆಟವನ್ನು ಪ್ರದರ್ಶಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 56 ರನ್‌ಗಳ ಕೊಡುಗೆಯನ್ನು ನೀಡಿತು. ಆದರೆ ಕೇಟ್ ಕ್ರಾಸ್ ಈ ಜೋಡಿಯನ್ನು ಬೇರ್ಪಡಿಸುವ ಮೂಲಕ ಇಂಗ್ಲೆಂಡ್‌ಗೆ ಮೊದಲ ಯಶಸ್ಸನ್ನು ನೀಡಿದರು.

22 ರನ್‌ಗಳಿಸಿದ ಸ್ಮೃತಿ ಮಂಧಾನ ಕೇಟ್‌ಗೆ ಬೌಲ್ಡ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರು. ನಂತರ ಬಂದ ಜಮಿಮಾ ರೋಡ್ರಿಗಸ್ ಕೂಡ ಕೇಟ್‌ಗೆ ಬಲಿಯಾದರು. ಈ ಸಂದರ್ಭದಲ್ಲಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಯುವ ಆಟಗಾರ್ತಿ ಶಫಾಲಿ ವರ್ಮಾ ಕೂಡ ವಿಕೆಟ್ ಕಳೆದುಕೊಳ್ಳುವ ಮೂಲಕ ಟೀಮ್ ಇಂಡಿಯಾ ಆಘಾತ ಅನುಭವಿಸಿತು.

ಬಯೋಬಬಲ್ ಉಲ್ಲಂಘಿಸಿದ ಶ್ರೀಲಂಕಾ ಆಟಗಾರರಿಗೆ ಒಂದು ವರ್ಷಗಳ ನಿಷೇಧಬಯೋಬಬಲ್ ಉಲ್ಲಂಘಿಸಿದ ಶ್ರೀಲಂಕಾ ಆಟಗಾರರಿಗೆ ಒಂದು ವರ್ಷಗಳ ನಿಷೇಧ

ನಂತರ ನಾಯಕಿ ಮಿಥಾಲಿ ರಾಜ್ ಹಾಗೂ ಹರ್ಮನ್‌ಪ್ರೀತ್ ಕೌರ್ ತಂಡಕ್ಕೆ ಚೇತರಿಕೆಯನ್ನು ನೀಡಿದರು. ಈ ಜೋಡಿಗೂ ಕೂಡ ಕೇಟ್ ಕಂಟಕವಾದರು. 19 ರನ್‌ಗಳಿಸಿದ್ದ ಕೌರ್‌ಅವರನ್ನು ಕಾಟ್ ಆಂಡ್ ಬೌಲ್ಡ್ ಮಾಡುವ ಮೂಲಕ ಮತ್ತೊಮ್ಮೆ ಮೇಲುಗೈ ಒದಗಿಸಿದರು.

ಈ ಮಧ್ಯೆ ಮತ್ತೊಂದು ತುದಿಯಲ್ಲಿ ನಾಯಕಿ ಮಿಥಾಲಿ ರಾಜ್ ಏಕಾಂಗಿ ಹೋರಾಟವನ್ನು ಮುಂದುವರಿಸಿದರು. ಎಚ್ಚರಿಕೆಯ ಪ್ರದರ್ಶನವನ್ನು ನೀಡುತ್ತಾ ತಂಡದ ಸ್ಕೋರ್ ಹೆಚ್ಚಿಸುವ ಪ್ರಯತ್ನ ನಡೆಸಿದರು. 59 ರನ್‌ಗಳಿಸಿದ್ದ ವೇಳೆ ಮಿಥಾಲಿ ರನ್‌ಔಟ್ ಆಗುವ ಮೂಲಕ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. ಅಂತಿಮ ಹಂತದಲ್ಲಿ ಜೂಲನ್ ಗೋಸ್ವಾಮಿ ನೀಡಿದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಭಾರತ ಇಂಗ್ಲೆಂಡ್ ಮಹಿಳೆಯರ ತಂಡಕ್ಕೆ 222 ರನ್‌ಗಳ ಗುರಿಯನ್ನು ನೀಡಲು ಸಾಧ್ಯವಾಯಿತು.

ಪಂತ್ ಕ್ಯಾಚ್ ಬಿಟ್ಟು ತಲೆಕೆಡಿಸಿಕೊಂಡಿದ್ದ ಟಿಮ್ ಸೌಥಿ | Oneindia Kannada

ಇಂಗ್ಲೆಂಡ್ ತಂಡದ ಪರವಾಗಿ ಕೇಟ್ ಕ್ರಾಸ್ 5 ವಿಕೆಟ್ ಕಬಳಿಸುವ ಮೂಲಕ ಭಾರತ ತಂಡಕ್ಕೆ ಆಘಾತವನ್ನು ನೀಡಿದರು. ಸೋಫಿ ಎಕ್ಲೆಸ್ಟನ್ 3 ವಿಕೆಟ್ ಸಂಪಾದಿಸಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, June 30, 2021, 22:02 [IST]
Other articles published on Jun 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X