ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ವಿಕೆಟ್ ಕೀಪರ್ ನಮನ್ ಓಜಾ ಕ್ರಿಕೆಟ್‌ನಿಂದ ನಿವೃತ್ತಿ

Indian Wicketkeeper Naman Ojha retired from All formats of the game

ನವದೆಹಲಿ: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ ಆಗಿದ್ದ ನಮನ್ ಓಜಾ ಅವರು ಸೋಮವಾರ (ಫೆಬ್ರವರಿ 15) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 37ರ ಹರೆಯದ ಓಜಾ ಮಧ್ಯಪ್ರದೇಶದ ಉಜ್ಜೈನಿಯವರು. 2010ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಓಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಪ್ರೇಮಿಗಳ ದಿನ: ಖ್ಯಾತ 10 ಕ್ರಿಕೆಟಿಗರ ಸುಂದರ ಪ್ರೇಮ ಕತೆಗಳುಪ್ರೇಮಿಗಳ ದಿನ: ಖ್ಯಾತ 10 ಕ್ರಿಕೆಟಿಗರ ಸುಂದರ ಪ್ರೇಮ ಕತೆಗಳು

ಭಾರತ ಕ್ರಿಕೆಟ್‌ ತಂಡದ ಪರ ನಮನ್ ಓಜಾ 1 ಟೆಸ್ಟ್ ಪಂದ್ಯ, 1 ಏಕದಿನ ಪಂದ್ಯ ಮತ್ತು 2 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ಓಜಾ ಟೆಸ್ಟ್‌ನಲ್ಲಿ 56 ರನ್, ಏಕದಿನದಲ್ಲಿ 1 ರನ್, ಟಿ20ಐನಲ್ಲಿ 12 ರನ್ ಬಾರಿಸಿದ್ದಾರೆ.

'ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 20 ವರ್ಷಗಳ ವೃತ್ತಿ ಬದುಕು ಮತ್ತು ಅದಕ್ಕಿಂತಲೂ ಹೆಚ್ಚಾಗಿ ಜೂನಿಯರ್ ಮಟ್ಟದ ಪಂದ್ಯಗಳಲ್ಲಿ ಖುಷಿ ಕಂಡಿರುವ ನನಗೆ ಕ್ರಿಕೆಟ್‌ ವೃತ್ತಿ ಬದುಕು ನಿಲ್ಲಿಸಿ ಮುನ್ನಡೆಯಲು ಇದು ಸಕಾಲ ಅನ್ನಿಸುತ್ತಿದೆ,' ಎಂದು ನಿವೃತ್ತಿ ವೇಳೆ ಓಜಾ ಹೇಳಿಕೊಂಡಿದ್ದಾರೆ.

ಭಾರತ vs ಇಂಗ್ಲೆಂಡ್: ಮೈದಾನದಲ್ಲಿ ಬೆನ್ ಸ್ಟೋಕ್ಸ್ ಸರ್ಕಸ್: ವಿಡಿಯೋಭಾರತ vs ಇಂಗ್ಲೆಂಡ್: ಮೈದಾನದಲ್ಲಿ ಬೆನ್ ಸ್ಟೋಕ್ಸ್ ಸರ್ಕಸ್: ವಿಡಿಯೋ

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಯುಗದವರಾದ ಓಜಾ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ. ದೇಸಿ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಆಡಿರುವ ಓಜಾ, ಭಾರತ 'ಎ', ರೆಸ್ಟ್ ಆಫ್ ಇಂಡಿಯಾ ಪರವಾಗಿ ಕೂಡ ಆಡಿದ್ದರು.

Story first published: Tuesday, February 16, 2021, 8:01 [IST]
Other articles published on Feb 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X