ಐಪಿಎಲ್ 2018 : ಮುಂಬೈ ವಿರುದ್ಧ ಚೆನ್ನೈಗೆ ರೋಚಕ ಜಯ

Posted By:
IPL 2018 : Match 01 Report Mumbai Indians vs Chennai Super kings

ಮುಂಬೈ, ಏಪ್ರಿಲ್ 07: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2018) ನ 11ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ಎದುರಿಸುತ್ತಿದೆ. ಪಂದ್ಯದ ವರದಿ ಇಲ್ಲಿದೆ. ಮುಂಬೈ ನೀಡಿದ್ದ 166ರನ್ ಗಳ ಗುರಿಯನ್ನು ರೋಚಕವಾಗಿ ಚೇಸ್ ಮಾಡಿ ಚೆನ್ನೈ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಐಪಿಎಲ್ ವಿಶೇಷ ಪುಟ | ಪೂರ್ಣವೇಳಾಪಟ್ಟಿ | ಸಿಎಸ್‌ಕೆ ವೇಳಾಪಟ್ಟಿ

ಚೆನ್ನೈ ರನ್ ಚೇಸ್ :
* ಶೇನ್ ವಾಟ್ಸನ್ 16, ಅಂಬಟಿ ರಾಯುಡು 22 ರನ್ ಗಳಿಸಿ ಔಟಾದರು.
* ಸುರೇಶ್ ರೈನಾ 4, ಎಂಎಸ್ ಧೋನಿ 5 ರನ್ ಕಳಪೆ ಪ್ರದರ್ಶನ ನೀಡಿದರು.
* ಡ್ವಾಯ್ನೆ ಬ್ರಾವೋ 30 ಎಸೆತಗಳಲ್ಲಿ 68ರನ್ (3 ಬೌಂಡರಿ, 7 ಸಿಕ್ಸರ್) ಸಿಡಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದರು.
* ಕೇದಾರ್ ಜಾಧವ್ 20ರನ್ ಗಳಿಸಿ ಅಜೇಯರಾಗಿ ಉಳಿದು, 19.5ಓವರ್ ಗಳಲ್ಲಿ 169ರನ್ ಗಳಿಸುವಂತೆ ಮಾಡಿ ಜಯ ತಂದಿತ್ತರು.
* ಮುಂಬೈ ಪರ ಹಾರ್ದಿಕ್ ಪಾಂಡ್ಯ 24ಕ್ಕೆ 3, ಮಾಯಾಂಕ್ ಮಾರ್ಕಂಡೆ 23ಕ್ಕೆ 3 ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

D Bravo

ಮುಂಬೈ ಇನ್ನಿಂಗ್ಸ್ : ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 165/4 ಸ್ಕೋರ್ ಮಾಡಿದೆ.

* ಸೂರ್ಯಕುಮಾರ್ ಯಾದವ್ 43ರನ್ (29 ಎಸೆತ, 6 ಬೌಂಡರಿ, 1ಸಿಕ್ಸರ್)
* ಇಶಾನ್ ಕಿಶಾನ್ 40ರನ್ (29 ಎಸೆತ, 4 ಬೌಂಡರಿ, 1ಸಿಕ್ಸರ್)
*ಕೃನಾಲ್ ಪಾಂಡ್ಯ 41ರನ್ ಅಜೇಯ(22 ಎಸೆತ, 5 ಬೌಂಡರಿ, 2 ಸಿಕ್ಸರ್)
* ಶೇನ್ ವಾಟ್ಸನ್ 4ಓವರ್ 29ಕ್ಕೆ2, ಇಮ್ರನ್ ತಾಹೀರ್, ದೀಪಕ್ ಚಾಹರ್ ತಲಾ 1 ವಿಕೆಟ್.

ಟಾಸ್ ವರದಿ : ಹೆಡ್ಸ್ ಹೇಳಿದ ಮುಂಬೈ ನಾಯಕ ರೋಹಿತ್, ಟೈಲ್ಸ್ ಬಿದ್ದಿದ್ದರಿಂದ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಭ್ರಷ್ಟಾಚಾರದ ಆರೋಪ ಹೊತ್ತು ಎರಡು ವರ್ಷಗಳ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಕಣಕ್ಕಿಳಿಯುತ್ತಿದೆ. ಎಂಎಸ್ ಧೋನಿ ಅವರು ಮತ್ತೊಮ್ಮೆ ಹಳದಿ ಜರ್ಸಿ ತೊಟ್ಟು ಚೆನ್ನೈ ನಾಯಕರಾಗಿದ್ದಾರೆ. ರೋಹಿತ್ ಶರ್ಮ ಅವರು ಮುಂಬೈನ ನಾಯಕರಾಗಿದ್ದಾರೆ.

ಆಡುವ ಹನ್ನೊಂದು :
ಚೆನೈ ಸೂಪರ್ ಕಿಂಗ್ಸ್ : ಅಂಬಟಿ ರಾಯುಡು, ಶೇನ್ ವಾಟ್ಸನ್, ಸುರೇಶ್ ರೈನಾ, ಕೇದಾರ್ ಜಾಧವ್, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್),ಡ್ವಾಯ್ನೆ ಬ್ರಾವೋ, ರವೀಂದ್ರ ಜಡೇಜ, ಹರ್ಭಜನ್ ಸಿಂಗ್, ದೀಪಕ್ ಚಾಹರ್, ಇಮ್ರಾನ್ ತಾಹೀರ್, ಮಾರ್ಕ್ ವುಡ್

ಮುಂಬೈ ಇಂಡಿಯನ್ಸ್ : ಇಶಾನ್ ಕಿಶಾನ್, ಲೆವಿಸ್, ರೋಹಿತ್ ಶರ್ಮ, ಕಿರಾನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜಸ್ ಪ್ರೀತ್ ಬೂಮ್ರಾ, ಮುಸ್ತಫಿಜುರ್ ರಹಮಾನ್, ಮಿಚೆಲ್ ಮೆಕ್ಲೆನಾರ್ಗನ್, ಮಾರ್ಕಂಡೆ, ಸೂರ್ಯಕುಮಾರ್ ಯಾದವ್.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, April 7, 2018, 19:39 [IST]
Other articles published on Apr 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ