ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹತ್ವದ ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಸೋಲಲು ಕಾರಣವೇನು?

 IPL 2020: Why Delhi Capitals Loose To Mumbai Indians In Final Match

ಐಪಿಎಲ್ 2020 ಸಮಾಪ್ತಿಯಾಗಿದೆ. ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ ಮಂಡಿಯೂರಿದೆ ಡೆಲ್ಲಿ ಕ್ಯಾಪಿಟಲ್ಸ್.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಬಾರಿಗೆ ಐಪಿಎಲ್ ಫೈನಲ್ ಪಂದ್ಯಕ್ಕೆ ಅರ್ಹತೆ ಗಳಿಸಿಕೊಂಡಿತ್ತು. ಆದರೆ ನಾಲ್ಕು ಬಾರಿ ಚಾಂಪಿಯನ್ ಮುಂಬೈ ಎದುರು ಅದರ ಆಟ ಕಿಂಚಿತ್ತೂ ನಡೆಯಲಿಲ್ಲ. ಪಂದ್ಯದ ಯಾವ ಹಂತದಲ್ಲಿಯೂ ಮುಂಬೈ ಇಂಡಿಯನ್ಸ್ ತನ್ನ ಹಿಡಿತ ಬಿಟ್ಟುಕೊಡಲಿಲ್ಲ.

ಫೈನಲ್ ಪಂದ್ಯವನ್ನು ಹಿಂತಿರುಗಿ ನೋಡಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ್ದು ಹಲವು ತಪ್ಪುಗಳು ಕಾಣಸಿಗುತ್ತವೆ. ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡವಾಗಿದ್ದರೂ ಸಹ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಟ್ಟಾರೆಯಾಗಿ ಹಲವು ತಪ್ಪು ನಿರ್ಧಾರಗಳನ್ನು, ತಪ್ಪು ಗೇಮ್‌ ಪ್ಲ್ಯಾನ್‌ಗಳನ್ನು ಮಾಡಿದ್ದು ಕಾಣಸಿಗುತ್ತದೆ.

ಸ್ಟೋಯ್ನಿಸ್‌ ಇನ್ನಿಂಗ್ಸ್ ಆರಂಭಿಸಿದ್ದು ಯಡವಟ್ಟಾಯಿತೇ?

ಸ್ಟೋಯ್ನಿಸ್‌ ಇನ್ನಿಂಗ್ಸ್ ಆರಂಭಿಸಿದ್ದು ಯಡವಟ್ಟಾಯಿತೇ?

ಹೊಡಿ-ಬಡಿ ಬ್ಯಾಟ್ಸ್‌ಮನ್ ಸ್ಟೋಯ್ನಿಸ್ ಗೆ ಆರಂಭಿಕ ಬ್ಯಾಟ್ಸ್‌ಮನ್ ದರ್ಜೆ ನೀಡಲಾಯಿತು. ಕೆಕೆಆರ್ ತಂಡ ನರೇನ್‌ಗೆ ಇದೇ ರೀತಿಯ ಅವಕಾಶ ನೀಡಿ ಹಿನ್ನಡೆ ಅನುಭವಿಸಿತು. ಸ್ಟೋಯ್ನಿಸ್ ಮಧ್ಯಮ ಕ್ರಮಾಂಕದಲ್ಲಿಯೇ ಉಳಿಸಿದ್ದಿದ್ದರೆ, 15 ಓವರ್‌ಗಳ ನಂತರ ಡೆಲ್ಲಿ ಇಂದಿನ ಪಂದ್ಯದಲ್ಲಿ ಅನುಭವಿಸಿದ ಹಿನ್ನಡೆಯಿಂದ ಕಾಪಾಡುತ್ತಿದ್ದರೋ ಏನೋ?

ಬೌಲರ್‌ಗಳನ್ನು ಅದ್ಭುತವಾಗಿ ಬಳಸಿತು ಮುಂಬೈ

ಬೌಲರ್‌ಗಳನ್ನು ಅದ್ಭುತವಾಗಿ ಬಳಸಿತು ಮುಂಬೈ

ಮುಂಬೈ ತನ್ನ ಟಾಪ್ ಬೌಲರ್‌ಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡಿತು. ಪವರ್‌ ಪ್ಲೇ ನಲ್ಲಿ ಬುಮ್ರಾ ಒಂದೇ ಓವರ್‌ ಬೌಲಿಂಗ್ ಮಾಡಿದ್ದರು. ನಂತರ 10 ನೇ ಓವರ್‌ ಮುಗಿದ ನಂತರ ಹಾಗೂ ಪ್ರಥಮ ಇನ್ನಿಂಗ್ಸ್‌ನ ಕೊನೆಯಲ್ಲಿ ಬುಮ್ರಾ ದಾಳಿಗಿಳಿದು, ರನ್‌ ಹರಿವನ್ನು ತಡೆದರು. ಆದರೆ ಡೆಲ್ಲಿ ತನ್ನ ಎಲ್ಲಾ ಮುಖ್ಯ ಬೌಲರ್‌ಗಳನ್ನು ಆರಂಭದಲ್ಲಿಯೇ ದಾಳಿಗಿಳಿಸಿತು, ಆದರೆ ಅವರು ಯಶಸ್ವಿಯೂ ಆಗಲಿಲ್ಲ.

ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯ

ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯ

ಡೆಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ಮುಂಬೈ ನ ಸಂಘಟಿತ ದಾಳಿಯನ್ನು ಎದುರಿಸಲಾಗಲಿಲ್ಲ. ಮೊದಲ ಆರು ಓವರ್‌ನಲ್ಲಿ ಹೆಚ್ಚಿನ ರನ್ ಗಳಿಸುವ ಧಾವಂತದಲ್ಲಿ ಬೋಲ್ಟ್, ಬುಮ್ರಾ, ಫಾರ್ಮ್‌ನಲ್ಲಿರುವ ಜಯಂತ್ ಜಾದವ್‌ ಬಾಲ್‌ಗಳಿಗೆ ಗೌರವ ಕೊಟ್ಟು ಆಡುವ ಬದಲಿಗೆ ಆರಂಭದಲ್ಲಿಯೇ ಹೊಡಿ-ಬಡಿ ಆಟಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಒಳ್ಳೆಯ ಬೌಲರ್‌ಗಳಿಗೆ ಗೌರವ ಕೊಟ್ಟು ಸಂಯಮದಿಂದ ಆಡುವ ತಾಳ್ಮೆ ಡೆಲ್ಲಿ ಓಪನರ್‌ಗಳಲ್ಲಿ ಕಾಣಲಿಲ್ಲ.

ಕೆಲವು ದಿನಗಳ ಹಿಂದಿನ ತಪ್ಪನ್ನು ತಿದ್ದಿಕೊಳ್ಳಲಿಲ್ಲ ಡೆಲ್ಲಿ

ಕೆಲವು ದಿನಗಳ ಹಿಂದಿನ ತಪ್ಪನ್ನು ತಿದ್ದಿಕೊಳ್ಳಲಿಲ್ಲ ಡೆಲ್ಲಿ

ಟಾಸ್ ಗೆದ್ದಿದ್ದ ಡೆಲ್ಲಿ ಮುಂಬೈ ಅನ್ನು ಬ್ಯಾಟಿಂಗ್ ಗೆ ಇಳಿಸುವ ಬದಲಿಗೆ ತಾನೇ ಬ್ಯಾಟಿಂಗ್ ಆಯ್ದುಕೊಂಡಿತು. ಫಾರ್ಮ್‌ನಲ್ಲಿರುವ ತಂಡಕ್ಕೆ ಚೇಸಿಂಗ್ ಗೆ ಅವಕಾಶ ನೀಡಬಾರದು ಎಂಬ ಅಲಿಖಿತ ನಿಯಮವೊಂದು ಕ್ರಿಕೆಟ್‌ನಲ್ಲಿದೆ. ಮುಂಬೈ ಮೊದಲು ಬ್ಯಾಟ್‌ ಮಾಡಿದಿದ್ದಿರೆ ಫಲಿತಾಂಶ ಬೇರೆಯದ್ದೇ ಇರಬಹುದಿತ್ತೋ ಏನೋ?

Story first published: Tuesday, November 10, 2020, 23:59 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X