ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ತಿರುಗಿಬಿದ್ದ ರಾಜಸ್ಥಾನ್, ವಿರಾಟ್ ಪಡೆಗೆ 178 ರನ್‌ಗಳ ಸವಾಲು

IPL 2021: Royal challengers Bangalore need 178 runs to win against Rajasthan

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ಉತ್ತಮ ಮೊತ್ತವನ್ನು ಪೇರಿಸಿದೆ. ಆರಂಭದಲ್ಲಿ ಉಂಟಾದ ದೊಡ್ಡ ಕುಸಿತದ ಬಳಿಕ ಅದ್ಭುತ ರೀತಿಯಲ್ಲಿ ತಿರುಗಿ ಬೀಳುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ 177 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು

ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ಅದ್ಭುತ ಆರಂಭವನ್ನು ಪಡೆಯಿತು. ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಅಗ್ಗಕ್ಕೆ ಪಡಿಯಿತು. 45 ರನ್‌ಗಳಾಗುವಷ್ಟರಲ್ಲಿ ರಾಜಸ್ಥಾನ್ ರಾಯಲ್ಸ್‌ನ ಪ್ರಮುಖ ನಾಲ್ಕು ವಿಕೆಟ್‌ಗಳು ಉದುರಿತ್ತು. ಆದರೆ ನಂತರ ಬಂದ ರಿಯಾನ್ ಪರಾಗ್ ಹಾಗೂ ಶಿವಂ ದುಬೆ ತಂಡಕ್ಕೆ ಅಗತ್ಯ ಚೇತರಿಕೆಯನ್ನು ನೀಡುವಲ್ಲಿ ಯಶಸ್ವಿಯಾದರು.

ಐಪಿಎಲ್ 2021: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್, ಪ್ಲೇಯಿಂಗ್ ‍XI, ಅಪ್‌ಡೇಟ್ಸ್ಐಪಿಎಲ್ 2021: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್, ಪ್ಲೇಯಿಂಗ್ ‍XI, ಅಪ್‌ಡೇಟ್ಸ್

ಆದರೆ ನಂತರ ಬಂದ ರಿಯಾನ್ ಪರಾಗ್ ಹಾಗೂ ಶಿವಂ ದುಬೆ ತಂಡಕ್ಕೆ ಅಗತ್ಯ ಚೇತರಿಕೆಯನ್ನು ನೀಡುವಲ್ಲಿ ಯಶಸ್ವಿಯಾದರು. ಶಿವಂ ದುಬೆ 32 ಎಸೆತಗಳಲ್ಲಿ 46 ರನ್‌ಗಳಿಸಿದರೆ ರಿಯಾನ್ 25 ರನ್‌ಗಳ ಕೊಡುಗೆ ನೀಡಿದರು. ನಂತರ ಬಂದ ರಾಹುಲ್ ತೆವಾಟಿಯಾ ರನ್‌ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಕೇವಲ 23 ಎಸೆತಗಳಲ್ಲಿ ತೆವಾಟಿಯಾ 40 ರನ್‌ ಬಾರಿಸಿ ಮಿಂಚಿದರು. ಇದರಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸೇರಿತ್ತು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 177 ರನ್ ಗಳಿಸಿ ಸವಾಲಿನ ಮೊತ್ತ ಪೇರಿಸಿದೆ.

ಆರ್‌ಸಿಬಿ ಪರವಾಗಿ ಮೊಹಮ್ಮದ್ ಸಿರಾಜ್ ಅದ್ಭುತ ದಾಳಿ ಸಂಘಟಿಸಿ 3 ವಿಕೆಟ್ ಪಡೆದರು. ಇನ್ನೋರ್ವ ವೇಗಿ ಹರ್ಶಲ್ ಪಟೇಲ್ ಕೂಡ ಮೂರು ವಿಕೆಟ್ ಪಡೆದು ಮಿಂಚಿದರಾದರೂ ದುಬಾರಿಯಾದರು. ಜ್ಯಾಮಿಸನ್, ರಿಚರ್ಡ್ಸನ್ ಹಾಗೂ ಸುಂದರ್ ತಲಾ 1 ವಿಕೆಟ್ ಕಬಳಿಸಿದರು.

Story first published: Thursday, April 22, 2021, 21:48 [IST]
Other articles published on Apr 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X