ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: GT vs PBKS; ಅತ್ಯುತ್ತಮ ಲಯದಲ್ಲಿರುವ ಗುಜರಾತ್ ಟೈಟನ್ಸ್ ತಂಡ ಸಂಯೋಜನೆ ಹೇಗಿರಲಿದೆ?

ಮುಂಬೈ, ಮೇ 3: ಮಂಗಳವಾರ ನವಿ ಮುಂಬೈನಲ್ಲಿರುವ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಋತುವಿನ 48ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (GT) ತಂಡ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಎದುರಿಸಲಿದೆ.

15ನೇ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಪ್ರಸ್ತುತ IPL 2022 ಪಾಯಿಂಟ್‌ಗಳ ಪಟ್ಟಿಯಲ್ಲಿ ಎಂಟು ಗೆಲುವು ಮತ್ತು ಒಂದು ಸೋಲು ಸೇರಿದಂತೆ ಒಂಬತ್ತು ಪಂದ್ಯಗಳಿಂದ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ತಮ್ಮ ಹಿಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡವು 43ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ರಾಹುಲ್ ತೆವಾಟಿಯಾ 25 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿ ಗುಜರಾತ್‌ನ ಸ್ಟಾರ್ ಪರ್ಫಾರ್ಮರ್ ಆಗಿದ್ದರು. ಈ ಆಲ್‌ರೌಂಡರ್ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ ಗುಜರಾತ್ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ 171 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿತ್ತು.

IPL 2022: Gujarat Titans Predicted XI Against PBKS

ಆಲ್-ರೌಂಡರ್ ಪ್ರದರ್ಶನವನ್ನು ಎದುರು ನೋಡುತ್ತಿದೆ
ಇನ್ನು ಈ ಮಧ್ಯೆ ಪಂಜಾಬ್ ಕಿಂಗ್ಸ್ ತಂಡ ಒಂಬತ್ತು ಪಂದ್ಯಗಳಿಂದ ಎಂಟು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ (ನಾಲ್ಕು ಗೆಲುವು ಮತ್ತು ಐದು ಸೋಲುಗಳು). ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್, ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ 20 ರನ್‌ಗಳ ಸೋಲಿಗೆ ಶರಣಾಯಿತು.

ಇಂದಿನ (ಮೇ 3) ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಉತ್ತಮ ಆಲ್-ರೌಂಡರ್ ಪ್ರದರ್ಶನವನ್ನು ಎದುರು ನೋಡುತ್ತಿದೆ ಮತ್ತು ಎಲ್ಲರ ಕಣ್ಣುಗಳು ಲಿಯಾಮ್ ಲಿವಿಂಗ್‌ಸ್ಟೋನ್ ಮೇಲೆ ಇರುತ್ತದೆ. ಇಂಗ್ಲೆಂಡ್‌ನ ಆಲ್‌ರೌಂಡರ್ ಈ ಋತುವಿನಲ್ಲಿ ಉತ್ತಮವಾಗಿಯೇ ಪ್ರಾರಂಭಿಸಿದರು. ಆದರೆ ಕಳೆದೆರಡು ಪಂದ್ಯಗಳಿಂದ ಅವರ ಫಾರ್ಮ್ ಕುಸಿದಿದೆ. ಅವರು ಗುಜರಾತ್ ಟೈಟನ್ಸ್ ವಿರುದ್ಧ ತಮ್ಮ ಫಾರ್ಮ್ ಅನ್ನು ಕಂಡುಕೊಂಡರೆ, ಆಂಗ್ಲ ಆಟಗಾರ ಪಂಜಾಬ್ ಕಿಂಗ್ಸ್ ಅನ್ನು ಏಕಾಂಗಿಯಾಗಿ ಗೆಲುವಿನತ್ತ ಕೊಂಡೊಯ್ಯಬಹುದು.

ಗುಜರಾತ್ ಟೈಟಾನ್ಸ್ ಅಂತಿಮ ಹನ್ನೊಂದರ ಬಳಗ ಹೀಗಿರಲಿದೆ
* ವೃದ್ಧಿಮಾನ್ ಸಹಾ: ಆರಂಭಿಕರಾಗಿ ಗುಜರಾತ್ ಟೈಟನ್ಸ್‌ಗೆ ವೃದ್ಧಿಮಾನ್ ಸಹಾ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಮ್ಯಾಥ್ಯೂ ವೇಡ್ ಅವರನ್ನು ಅಂತಿಮ ಹನ್ನೊಂದರ ಬಳಗದಿಂದ ಹೊರಗಿಡುವುದನ್ನು ಖಚಿತಪಡಿಸಿದ್ದಾರೆ. ಅವರು ಮಂಗಳವಾರ ಪಂಜಾಬ್ ವಿರುದ್ಧ ತಮ್ಮ ಬ್ಯಾಟಿಂಗ್‌ನ ಆವೇಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ.

* ಶುಭಮನ್ ಗಿಲ್: ಆರಂಭದಲ್ಲಿ ವಿಫಲರಾಗಿದ್ದ ಆರಂಭಿಕ ಆಟಗಾರ ಶುಭಮನ್ ಗಿಲ್ ಮತ್ತೊಮ್ಮೆ ತಮ್ಮ ಫಾರ್ಮ್ ಕಂಡುಕೊಳ್ಳಲು ಪ್ರಾರಂಭಿಸಿದ್ದಾರೆ ಮತ್ತು ಆರ್‌ಸಿಬಿ ವಿರುದ್ಧ 28 ಎಸೆತಗಳಲ್ಲಿ ನಾಲ್ಕು ಬೌಂಡರಿಗಳನ್ನು ಒಳಗೊಂಡಿರುವ 31 ರನ್‌ಗಳನ್ನು ದಾಖಲಿಸಿದ್ದರು.

IPL 2022: Gujarat Titans Predicted XI Against PBKS


ಟೈಟನ್ಸ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಹಾರ್ದಿಕ್ ಪಾಂಡ್ಯ
* ಬಿ. ಸಾಯಿ ಸುದರ್ಶನ್: ಮೆಗಾ ಹರಾಜಿನಲ್ಲಿ 20 ವರ್ಷದ ಸಾಯಿ ಸುದರ್ಶನ್ ಗುಜರಾತ್ ಟೈಟನ್ಸ್‌ನ ಉತ್ತಮ ಹುಡುಕಾಟವಾಗಿದೆ. ಐಪಿಎಲ್ 2022ರಲ್ಲಿ ಕಾಣಿಸಿಕೊಳ್ಳಲು ಹೆಚ್ಚಿನ ಅವಕಾಶಗಳನ್ನು ನೀಡಿದರೆ ಅವರು ತಮ್ಮ ಪರಿಣಾಮಾಕಾರಿ ಆಟ ತೋರಲು ಆಶಿಸುತ್ತಿದ್ದಾರೆ.

* ಹಾರ್ದಿಕ್ ಪಾಂಡ್ಯ: ಆರ್‌ಸಿಬಿ ವಿರುದ್ಧದ ಐದು ಎಸೆತಗಳಲ್ಲಿ ಕೇವಲ ಮೂರು ರನ್‌ಗಳಿಗೆ ಔಟಾದರೂ, ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಎಂಟು ಪಂದ್ಯಗಳಲ್ಲಿ ಅವರು ಮೂರು ಅರ್ಧಶತಕಗಳು ಸೇರಿದಂತೆ ಎಂಟು ಪಂದ್ಯಗಳಲ್ಲಿ 308 ರನ್‌ಗಳನ್ನು ದಾಖಲಿಸಿದ್ದಾರೆ.

* ಡೇವಿಡ್ ಮಿಲ್ಲರ್: ದಕ್ಷಿಣ ಆಫ್ರಿಕಾದ ಈ ಸ್ಫೋಟಕ ಆಟಗಾರ ಗುಜರಾತ್‌ ತಂಡದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ ಮತ್ತು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳನ್ನು ಎದುರಿಸಿ 39 ರನ್ ಗಳಿಸಿ ಗೆಲುವಿನ ಗಡಿ ದಾಟಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ಅವರ ಪಾತ್ರವು ಪಂದ್ಯದ ಫಲಿತಾಂಶದ ಮೇಲೆ ಭಾರಿ ಪರಿಣಾಮ ಬೀರಬಹುದು.

* ರಾಹುಲ್ ತೆವಾಟಿಯಾ: ರಾಹುಲ್ ತೆವಾಟಿಯಾ ಗುಜರಾತ್‌ ತಂಡಕ್ಕೆ ಮ್ಯಾಚ್ ವಿನ್ನರ್ ಎನಿಸಿಕೊಂಡಿದ್ದಾರೆ. ಅವರು ಸೋಲಿನ ಸಮಯದಲ್ಲಿ ಬ್ಯಾಟ್‌ನೊಂದಿಗೆ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದ್ದಾರೆ.

IPL 2022: Gujarat Titans Predicted XI Against PBKS

* ರಶೀದ್ ಖಾನ್: ಅಫ್ಘಾನಿಸ್ತಾನದ ಆಲ್‌ರೌಂಡರ್ ಐಪಿಎಲ್ 2022ರಲ್ಲಿ ಬಾಲ್‌ನೊಂದಿಗೆ ಉತ್ತಮ ಫಾರ್ಮ್‌ನಲ್ಲಿಲ್ಲದಿದ್ದರೂ, ಬ್ಯಾಟ್‌ನೊಂದಿಗೆ ಕೆಲವು ನಿರ್ಣಾಯಕ ಕೊಡುಗೆಗಳನ್ನು ತಂಡಕ್ಕೆ ನೀಡಿದ್ದಾರೆ.

ಒಂಬತ್ತು ಪಂದ್ಯಗಳಲ್ಲಿ 14 ವಿಕೆಟ್‌ ಮೊಹಮ್ಮದ್ ಶಮಿ
* ಪ್ರದೀಪ್ ಸಾಂಗ್ವಾನ್: ಪ್ರದೀಪ್ ಸಾಂಗ್ವಾನ್ ಆರ್‌ಸಿಬಿ ವಿರುದ್ಧ ನಾಲ್ಕು ಓವರ್‌ಗಳಲ್ಲಿ ಕೇವಲ 19 ರನ್ ನೀಡಿ ಎರಡು ಪ್ರಮುಖ ವಿಕೆಟ್ ಪಡೆದರು. ಅವರು ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಾಟಿದಾರ್ ಅವರ ನಿರ್ಣಾಯಕ ಔಟ್‌ಗಳಿಗೆ ಕಾರಣರಾಗಿದ್ದಾರೆ ಮತ್ತು ಪಂಜಾಬ್ ವಿರುದ್ಧ ಅವರ ಫಾರ್ಮ್ ಅನ್ನು ವಿಸ್ತರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

* ಅಲ್ಜಾರಿ ಜೋಸೆಫ್: ವೆಸ್ಟ್ ಇಂಡೀಸ್ ವೇಗಿ ಗುಜರಾತ್ ಪರ ನಾಲ್ಕು ಪಂದ್ಯಗಳಲ್ಲಿ ಐದು ವಿಕೆಟ್ ಪಡೆದಿದ್ದಾರೆ ಮತ್ತು ಪಂಜಾಬ್ ವಿರುದ್ಧ ಆಡುವ ಹನ್ನೊಂದರ ಬಳಗದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

* ಲ್ಯುಕಿ ಫರ್ಗುಸನ್: ಈ ಐಪಿಎಲ್ ಋತುವಿನಲ್ಲಿ ಲ್ಯುಕಿ ಫರ್ಗುಸನ್ ತನ್ನ ಆಲ್‌ರೌಡರ್ ಪ್ರದರ್ಶನ ಸುಧಾರಿಸುವ ಗುರಿ ಹೊಂದಿದ್ದರೂ, ಈ ವೇಗಿ ಗುಜರಾತ್ ತಂಡಕ್ಕೆ ಪ್ರಭಾವಿಯಾಗಲು ವಿಫಲರಾಗುತ್ತಿದ್ದಾರೆ ಮತ್ತು ಒಂಬತ್ತು ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರಂಜಾನ್ ಸಡಗರ ಹೇಗಿದೆ ನೋಡಿ.. | Oneindia Kannada

* ಮೊಹಮ್ಮದ್ ಶಮಿ: ಭಾರತದ ಅಂತಾರಾಷ್ಟ್ರೀಯ ಆಟಗಾರ ಇದುವರೆಗಿನ ಒಂಬತ್ತು ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗುಜರಾತ್ ಟೈಟನ್ಸ್ ತಂಡದ ವೇಗದ ಬೌಲಿಂಗ್‌ನ ಮುಂಚೂಣಿಯಲ್ಲಿದ್ದಾರೆ.

Story first published: Tuesday, May 3, 2022, 15:16 [IST]
Other articles published on May 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X