ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಎಸ್‌ಆರ್‌ಹೆಚ್ ಬ್ಯಾಟಿಂಗ್ ಯಶಸ್ಸಿಗೆ ಇವರೇ ಕಾರಣ ಎಂದ ನಿಕೋಲಸ್ ಪೂರನ್

IPl 2022: Nicholas Pooran said Brian lara the man Behind SRH Batters success

ಇಂಡಿಯನ್ ಪ್ರೀಮಿಯರ್ ಲೀಗ್‌ 15ನೇ ಆವೃತ್ತಿ ಆರಂಭಿಕ ಎರಡು ಪಂದ್ಯಗಳಲ್ಲಿ ಆರೆಂಜ್ ಆರ್ಮಿ ಖ್ಯಾತಿಯ ಸನ್‌ರೈಸರ್ಸ್ ಹೈದರಾಬಾದ್ ಸೋಲು ಅನುಭವಿಸಿತ್ತು. ಆದರೆ ಸೋಲುಗಳ ಬಳಿಕ ಪುಟಿದೆದ್ದಿರುವ ಕೇನ್ ವಿಲಿಯಮ್ಸನ್ ಪಡೆ ಗೆಲುವಿನ ಹಾದಿಗೆ ಮರಳಿದೆ. ಸತತ ಎರಡು ಗೆಲುವು ಸಾಧಿಸಿರುವ ಎಸ್‌ಆರ್‌ಹೆಚ್ ತಂಡ ಈಗ ಹ್ಯಾಟ್ರಿಕ್ ಗೆಲುವಿನತ್ತ ಮುಖಮಾಡಿದೆ. ತಂಡದಲ್ಲಿರುವ ಆರಂಭಿಕ ಆಟಗಾರರು ಉತ್ತಮ ಲಯ ಕಂಡುಕೊಂಡಿದ್ದು ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಯಶಸ್ಸು ಸಾಧಿಸುತ್ತಿದೆ. ತಂಡದ ಈ ಯಶಸ್ಸಿನ ಹಿಂದೆ ದಿಗ್ಗಜ ಕ್ರಿಕೆಟಿಗರೊಬ್ಬರ ಪರಿಶ್ರಮ ಎದ್ದು ಕಾಣಿಸುತ್ತಿದೆ.

SRH vs GT: ಸೋಲನ್ನೇ ಕಾಣದಿದ್ದ ಗುಜರಾತ್‌ಗೆ ಮಣ್ಣು ಮುಕ್ಕಿಸಿ ಸತತ ಎರಡನೇ ಗೆಲುವು ಕಂಡ ಸನ್ ರೈಸರ್ಸ್SRH vs GT: ಸೋಲನ್ನೇ ಕಾಣದಿದ್ದ ಗುಜರಾತ್‌ಗೆ ಮಣ್ಣು ಮುಕ್ಕಿಸಿ ಸತತ ಎರಡನೇ ಗೆಲುವು ಕಂಡ ಸನ್ ರೈಸರ್ಸ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕ್ರಿಕೆಟ್‌ ದಂತಕಥೆ ವೆಸ್ಟ್‌ ಇಂಡಿಸ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾರಾ ಅವರ ಕ್ರಿಕೆಟ್ ಅನುಭವ ಎಸ್‌ಆರ್‌ಹೆಚ್ ಪಡೆಗೆ ಸರಿಯಾದ ಸಮಯದಲ್ಲಿ ನೆರವಿಗೆ ಬರುತ್ತಿದೆ.

IPl 2022: Nicholas Pooran said Brian lara the man Behind SRH Batters success

ಸನ್‌ರೈಸರ್ಸ್ ಹೈದರಾಬಾದ್ ತಂಡ ಕಳೆದ ಎರಡು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ದ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ 46 ಎಸೆತಗಳಲ್ಲಿ 57 ರನ್ ಗಳಿಸಿದರೆ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 32 ಎಸೆತಗಳಲ್ಲಿ 42 ರನ್ ಗಳಿಸಿದ್ದಾರೆ. ವಿಕೆಟ್ ಕೀಪರ್ ನಿಕೋಲಸ್ ಪೂರನ್ 18 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ವಿಜಯದ ಮಾರ್ಗವನ್ನು ಸುಲಭಗೊಳಿಸಿದರು.

CSK vs RCB: ಈ ಮೈಲಿಗಲ್ಲುಗಳ ಮೇಲೆ ಕೊಹ್ಲಿ, ದಿನೇಶ್ ಕಾರ್ತಿಕ್ ಮತ್ತು ಧೋನಿ ಕಣ್ಣುCSK vs RCB: ಈ ಮೈಲಿಗಲ್ಲುಗಳ ಮೇಲೆ ಕೊಹ್ಲಿ, ದಿನೇಶ್ ಕಾರ್ತಿಕ್ ಮತ್ತು ಧೋನಿ ಕಣ್ಣು

ಈ ಪಂದ್ಯದ ಬಳಿಕ ಮಾತನಾಡಿದ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಕೋಚಿಂಗ್ ವಿಭಾಗದ ಕೊಡುಗೆಯನ್ನು ಸ್ಮರಿಸಿದ್ದಾರೆ. "ತಂಡದಲ್ಲಿ ಉತ್ತಮ ಕೊಚ್‌ಗಳಿದ್ದು ಎಲ್ಲಾ ಆಟಗಾರರೊಂದಿಗೆ ಚರ್ಚಿಸಿ ಸಲಹೆಗಳನ್ನು ನೀಡುತ್ತಾರೆ. ಬ್ರಿಯಾನ್ ಲಾರಾ ಅದ್ಭುತವಾಗಿ ಸಹಾಯ ಮಾಡುತ್ತಿದ್ದು ಎಲ್ಲಾ ಯುವ ಆಟಗಾರರು ಕೂಡ ಅವರ ಸಹಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಅಂಗಳದಲ್ಲಿ ಮೊದಲ ಓವರ್‌ನಲ್ಲಿ ನಮ್ಮಿಂದ ತಪ್ಪುಗಳಾದವು. ಕೆಲ ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದು, ಮತ್ತು ಹೆಚ್ಚು ಇತರ ರನ್‌ಗಳನ್ನು ಬಿಟ್ಟುಕೊಟ್ಟುದ್ದರೂ 160 ರನ್‌ಗಳಿಗೆ ಎದುರಾಳಿ ತಂಡವನ್ನು ನಿಯಂತ್ರಿಸಿದ್ದು ಬೌಲರ್‌ಗಳ ಅಸಾಧಾರಣ ಸಾಧನೆಯಾಗಿದೆ" ಎಂದಿದ್ದಾರೆ ನಿಕೋಲಸ್ ಪೂರನ್

ಯಾರಿದು Suyash Prabhudessai | Virat Kohli Reaction | Oneindia Kannada

ಮಿಂಚುತ್ತಿದ್ದಾರೆ ಆರೇಂಜ್ ಆರ್ಮಿಯ ಆರಂಭಿಕರು: ಎಸ್ಆರ್‌ಹೆಚ್ ತಂಡದ ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಈವರೆಗೂ ನಾಲ್ಕು ಪಂದ್ಯಗಳನ್ನಾಡಿರುವ ಅಭಿಷೇಕ ಶರ್ಮಾ 139 ರನ್ ಗಳಿಸಿ ಆರೇಂಜ್ ಕ್ಯಾಪ್ ರೇಸ್್ನಲ್ಲಿ ಟಾಪ್ 10ನಲ್ಲಿದ್ದಾರೆ. ನಾಯಕ ವಿಲಿಯಮ್ಸನ್ ಒಂದು ಅರ್ಧ ಶತಕದೊಂದಿಗೆ 107 ರನ್ ಗಳಿಸಿದ್ದಾರೆ. ರಾಹುಲ್ ತ್ರಿಪಾಠಿ ನಾಲ್ಕು ಮ್ಯಾಚ್‌ಗಳಲ್ಲಿ 100 ಗಳಿಸಿದ್ದಾರೆ.

Story first published: Tuesday, April 12, 2022, 17:20 [IST]
Other articles published on Apr 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X