ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಭಾರತಕ್ಕೆ ಮರಳಿದ ಹೆಟ್ಮೆಯರ್: ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಲಭ್ಯ ಸಾಧ್ಯತೆ

IPL 2022: Shimron Hetmyer is expected to return for RRs match against CSK: report

ರಾಜಸ್ಥಾನ್ ರಾಯಲ್ಸ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಶಿಮ್ರಾನ್ ಹೇಟ್ಮೇಯರ್ ತಮ್ಮ ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ತವರಿಗೆ ಮರಳಿದ್ದರು. ತವರು ಗಯಾನಾಗೆ ತೆರಳಿ ಕುಟುಂಬದೊಂದಿಗೆ ಕಾಲ ಕಳೆದ ಶಿಮ್ರಾನ್ ಹೇಟ್ಮೇಯರ್ ಈಗ ಭಾರತಕ್ಕೆ ವಾಪಾಸಾಗಿದ್ದಾರೆ. ಮತ್ತೆ ತಂಡವನ್ನು ಸೇರಿಕೊಂಡಿರುವ ಶಿಮ್ರಾನ್ ಹೆಟ್ಮೆಯರ್ ಶುಕ್ರವಾರ ನಡೆಯಲಿರುವ ಲೀಗ್ ಹಂತದ ಅಂತಿಮ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಯಿದೆ.

ಶಿಮ್ರಾನ್ ಹೆಟ್ಮೆಯರ್ ತವರಿಗೆ ವಾಪಾಸಾಗಿದ್ದ ಹಿನ್ನೆಲೆಯಲ್ಲಿ ಎರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. ದಿಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಗಳಲ್ಲಿ ಶಿಮ್ರಾನ್ ಹೆಟ್ಮೆಯರ್ ಇಲ್ಲದೆ ರಾಜಸ್ಥಾನ್ ರಾಯಲ್ಸ್ ಆಡಿತ್ತು. ಇದೀಗ ಕೆರೀಬಿಯನ್ ನಾಡಿನ ಬಲಾಢ್ಯ ಆಟಗಾರನ ಸೇರ್ಪಡೆಯಿಂದ ಆರ್‌ಆರ್ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ.

ಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ

ಈ ವಿಚಾರವಾಗಿ ಪಿಟಿಐಗೆ ಐಪಿಎಲ್ ಮೂಲಗಳು ಮಾಹಿತಿ ನೀಡಿದೆ. ಶಿಮ್ರಾನ್ ಹೇಟ್ಮೇಯರ್ ಮುಂಬೈಗೆ ಆಗಮಿಸಿದ್ದು ಪ್ರಸ್ತುತ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಕೊರೊನಾವೈರಸ್‌ನ ನಿಯಮದ ಪ್ರಕಾರ ಬಯೋಬಬಲ್ ತೊರೆದ ಬಳಿಕ ಮತ್ತೆ ಐಪಿಎಲ್ ಬಯೋಬಬಲ್ ಸೇರ್ಪಡೆಯಾಗಬೇಕಾದರೆ ಕ್ವಾರಂಟೈನ್ ಕಡ್ಡಾಯವಾಗಿದೆ.

ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 24 ರನ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಲೀಗ್ ಹಂತವನ್ನು 2ನೇ ಸ್ಥಾನಿಯಾಗಿ ಅಂತ್ಯಗೊಳಿಸುವ ವಿಶ್ವಾಸದಲ್ಲಿದೆ. ಶುಕ್ರವಾರ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ಶಿಮ್ರಾನ್ ಹೇಟ್ಮೇಯರ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದ್ದಾರೆ.

ಸ್ಪೋಟಕ ಬ್ಯಾಟಿಂಗ್‌ಗೆ ಖ್ಯಾತವಾಗಿರುವ ಶಿಮ್ರಾನ್ ಹೇಟ್ಮೇಯರ್ ಅವರನ್ನು ಈ ಬಾರಿಯ ಆವೃತ್ತಿಗೆ ಮುನ್ನ ನಡೆದ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹರಾಜಿನಲ್ಲಿ ರಾಯಲ್ಸ್ 8.5 ಕೋಟಿ ರೂಪಾಯಿಗೆ ಶಿಮ್ರಾನ್ ಹೇಟ್ಮೇಯರ್ ಅವರನ್ನು ಆರ್‌ಆರ್ ತಂಡ ಖರೀದಿಸಿತ್ತು. ಆರ್‌ಆರ್ ತಂಡಕ್ಕೆ ಸೇರ್ಪಡೆಯಾಗಿರುವ ಹೇಟ್ಮೇಯರ್ ತನ್ನ ತಂಡದ ಪರವಾಗಿ ಕೆಲ ಅದ್ಭುತ ಇನ್ನಿಂಗ್ಸ್‌ಗಳನ್ನು ನೀಡಿದ್ದಾರೆ.

ಈ ಬಾರಿಯ ಆವೃತ್ತಿಯಲ್ಲಿ ಅವರು ಹನ್ನೊಂದು ಪಂದ್ಯಗನ್ನು ಆಡಿರುವ ಶಿಮ್ರಾನ್ ಹೇಟ್ಮೇಯರ್ 166.29ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು 72.75 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಒಟ್ಟು 291 ರನ್‌ಗಳನ್ನು ಗಳಿಸಿರುವ ಶಿಮ್ರಾನ್ ಹೆಟ್ಮೇಯರ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

Avesh Khan ಬೆಂಕಿ ಬೌಲಿಂಗ್ ಗೆ ಕಳಪೆ ಮಟ್ಟದಲ್ಲಿ ಔಟಾದ ಜೋಸ್ ಬಟ್ಲರ್:ವೈರಲ್ ವಿಡಿಯೋ | Oneindia Kannada

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೇದ್ ಮೆಕಾಯ್, ಅನುನಯ್ ಸಿಂಗ್, ಕುಲದೀಪ್ ಸೇನ್, ಕರುಣ್ ನಾಯರ್, ಧ್ರುವ್ ಜುರೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಶುಭಂ ಗರ್ವಾಲ್, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇರಿಲ್ ಮಿಚೆಲ್

Story first published: Monday, May 16, 2022, 16:18 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X