ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ನೀವು ತಿಳಿದಿರಲೇ ಬೇಕಾದ 5 ಪ್ರಮುಖ ನಿಯಮಗಳು

ipl auction 2021: 5 rules of IPL auction for all 8 franchises

ಐಪಿಎಲ್‌ನ 13ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಈ ಹರಾಜಿನಲ್ಲಿ ಪಾಲ್ಗೊಳ್ಳಲು ಎಲ್ಲಾ ತಂಡಗಳ ಪ್ರತಿನಿಧಿಗಳು ನಗರವನ್ನು ತಲುಪಿದ್ದಾರೆ. ಇಂದು ಮಧ್ಯಾಹ್ನ(ಫೆಬ್ರವರಿ 18) ಈ ಹರಾಜು ಪ್ರಕ್ರಿಯೆ ನಡೆಯಲಿದ್ದು ಸುಮಾರು 5 ರಿಂದ 6 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.

ಅಂತಿಮ ಹಂತದಲ್ಲಿ ಐಪಿಎಲ್ ಹರಾಜು ಪಟ್ಟಿಯಲ್ಲಿ ಎರಡು ಬದಲಾವಣೆಗಳು ಆಗಿದೆ. ಇಂಗ್ಲೆಂಡ್ ತಂಡದ ವೇಗಿ ಮಾರ್ಕ್ ವುಡ್ ಹರಾಜಿನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರೆ ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಮ್ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಹೀಗಾಗಿ ಮತ್ತೆ 292 ಆಟಗಾರರು ಈ ಹರಾಜು ಪಟ್ಟಿಯಲ್ಲಿ ಉಳಿದುಕೊಂಡಂತಾಗಿದೆ.

ಆದರೆ ಈ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ನಿಯಮಗಳು ಇದೆ. ಆ ನಿಯಮದ ಪ್ರಕಾರವೇ ಈ ಹರಾಜು ನಡೆಯಲಿದೆ. ಹಾಗಾದರೆ ಐಪಿಎಲ್ ಅಭಿಮಾನಿಗಳಾಗಿ ನೀವು ತಿಳಿದುಕೊಳ್ಳಬೇಕಾದ ಐದು ಪ್ರಮುಖ ನಿಯಮಗಳ ವಿವರಗಳು ಇಲ್ಲಿದೆ. ಮುಂದೆ ಓದಿ.

ಐಪಿಎಲ್: ನ್ಯೂಜಿಲೆಂಡ್ ಆಟಗಾರರಿಗೆ ಬೋರ್ಡ್‌ನಿಂದ ನಿರಾಕ್ಷೇಪಣಾ ಪತ್ರಐಪಿಎಲ್: ನ್ಯೂಜಿಲೆಂಡ್ ಆಟಗಾರರಿಗೆ ಬೋರ್ಡ್‌ನಿಂದ ನಿರಾಕ್ಷೇಪಣಾ ಪತ್ರ

ಹರಾಜು ನಿಯಮ 1

ಹರಾಜು ನಿಯಮ 1

ಯಾವುದೇ ಕಾರಣಕ್ಕೂ ಐಪಿಎಲ್ ಫ್ರಾಂಚೈಸಿಗಳಿಗೆ ಪರ್ಸ್ ವಿಸ್ತರಿಸಲು ಅನುಮತಿ ನೀಡಲಾಗುವುದಿಲ್ಲ. ಅಂದರೆ ಪ್ರತಿ ತಂಡಕ್ಕೂ 85 ಕೋಟಿ ರೂಪಾಯಿಯನ್ನು ಹರಾಜಿಗಾಗಿ ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ ಆಟಗಾರರನ್ನು ಸೇರ್ಪಡೆಗೊಳಿಸಬೇಕಿದೆ. ಈ ಬಾರಿಯ ಹರಾಜಿಗೆ ಪಂಜಾಬ್ ಕಿಂಗ್ಸ್ ಅತಿ ಹೆಚ್ಚಿನ ಮೊತ್ತ 53.2 ಕೋಟಿ ರೂಪಾಯಿಯನ್ನು ಹೊಂದಿದೆ. ಬಳಿಕ ಆರ್‌ಸಿಬಿ 35.9 ಕೋಟಿ ಹೊಂದಿದ್ದರೆ ಆರ್‌ಆರ್ 34.85 ಕೋಟಿ, ಸಿಎಸ್‌ಕೆ 19.9 ಕೋಟಿ, ಎಂಐ 15.35 ಕೋಟಿ, ಡಿಸಿ 12.9 ಕೋಟಿ, ಎಸ್‌ಆರ್‌ಹೆಚ್ 10.75 ಕೋಟಿ ಹಾಗೂ ಕೆಕೆಆರ್ 10.75 ಕೋಟಿ ಮೊತ್ತವನ್ನು ಹರಾಜಿಗಾಗಿ ಪರ್ಸ್‌ನಲ್ಲಿ ಹೊಂದಿದೆ.

ಹರಾಜು ನಿಯಮ 2

ಹರಾಜು ನಿಯಮ 2

ಪ್ರತಿ ಫ್ರಾಂಚೈಸಿಯೂ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ನಿಗದಿಪಡಿಸಿದ ಮೊತ್ತವಾದ 85 ಕೋಟಿ ರೂಪಾಯಿಯಲ್ಲಿ ಕನಿಷ್ಠ 75 ಶೇಕಡಾ ಮೊತ್ತವನ್ನು ಆಟಗಾರರ ಖರೀದಿಗೆ ವ್ಯಯಿಸಲೇಬೇಕು. ಉದಾಹರಣೆಗೆ ಹರಿಷ್ಠ ಹಣದ 70 ಶೇಕಡಾ ಮೊತ್ತದಲ್ಲಿ ಎಲ್ಲಾ ಆಟಗಾರರನ್ನು ಖರೀದಿಸಿದರೆ ಉಳಿದ 5 ಶೇಕಡಾ ಮೊತ್ತ ಬಿಸಿಸಿಐ ಪಾಲಾಗುತ್ತದೆ.

ಹರಾಜು ನಿಯಮ 3

ಹರಾಜು ನಿಯಮ 3

ಇದು ಮಿನಿ ಹರಾಜು ಪ್ರಕ್ರಿಯೆ ಆದ ಕಾರಣ ಫ್ರಾಂಚೈಸಿಗಳಿಗೆ ರೈಟ್‌ ಟು ಮ್ಯಾಚ್(RTM) ಕಾರ್ಡ್ ಬಳಸುವ ಅವಕಾಶವಿಲ್ಲ. ಹೀಗಾಗಿ ತಮ್ಮ ತಂಡದಿಂದ ಬಿಡುಗಡೆಗೊಳಿಸಿದ ಆಟಗಾರನನ್ನು ಬಿಡ್ ಮಾಡದೆಯೇ ಬೇರೆ ಫ್ರಾಂಚೈಸಿಗಳು ಬಿಡ್ ಗೆದ್ದ ನಂತರ ಆ ಆಟಗಾರನನ್ನು ಮತ್ತೆ ತಮ್ಮ ತಂಡಕ್ಕೆ ಸೇರ್ಪಡೆಗಿಳಿಸುವ ಅವಕಾಶ ದೊರೆಯುವುದಿಲ್ಲ.

ಹರಾಜು ನಿಯಮ 4

ಹರಾಜು ನಿಯಮ 4

ಐಪಿಎಲ್‌ನ ಪ್ರತಿ ತಂಡವೂ ಗರಿಷ್ಠ ಹಾಗೂ ಕನಿಷ್ಠ ಇಷ್ಟು ಆಟಗಾರರನ್ನು ಹೊಂದಿರಬೇಕು ಎಂಬ ನಿಯಮವನ್ನು ರೂಪಿಸಿದೆ. ಒಂದು ತಂಡ 25 ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಿದ್ದು ಕನಿಷ್ಠ 18 ಆಟಗಾರರನ್ನು ಹೊಂದಿರಲೇಬೇಕಾಗುತ್ತದೆ.

ಹರಾಜು ನಿಯಮ 5

ಹರಾಜು ನಿಯಮ 5

ಪ್ರತಿ ತಂಡವೂ ಗರಿಷ್ಠ 25 ಭಾರತೀಯ ಆಟಗಾರರನ್ನು ಹೊಂದಲು ಅವಕಾಶವಿದೆ. ಕನಿಷ್ಠ 17 ಭಾರತೀಯ ಆಟಗಾರರನ್ನು ಫ್ರಾಂಚೈಸಿ ಹೊಂದಿರಬೇಕು. ವಿದೇಶಿ ಆಟಗಾರರ ಸಂಖ್ಯೆ ತಂಡದಲ್ಲಿ 8ಕ್ಕಿಂತ ಹೆಚ್ಚು ಇರಬಾರದು.

Story first published: Thursday, February 18, 2021, 14:10 [IST]
Other articles published on Feb 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X