ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL vs PSL: ಒಂದು ಪಂದ್ಯದಲ್ಲಿ ಬರುವ ಹಣ, ಚಾಂಪಿಯನ್ಸ್‌ಗೆ ಸಿಗುವ ಹಣದಲ್ಲಿ ಅಜಗಜಾಂತರ ವ್ಯತ್ಯಾಸ!

IPL vs PSL: Comparison between IPL and PSL media rights and prize money values

ಇತ್ತೀಚೆಗಷ್ಟೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೀಡಿಯಾ ಹಕ್ಕು ಹರಾಜು ಇಡೀ ಕ್ರೀಡಾ ಜಗತ್ತನ್ನೇ ದಂಗಾಗುವತೆ ಮಾಡಿದೆ. ಹೌದು, ಮುಂಬೈ ನಗರದಲ್ಲಿ ನಡೆದ ಈ ಹರಾಜು ಮುಕ್ತಾಯವಾದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಒಂದು ಪಂದ್ಯದ ಮಾರಾಟದ ಹಕ್ಕು ಬರೋಬ್ಬರಿ 115.4 ಕೋಟಿ ರೂಪಾಯಿಗಳು ಎಂಬುದು ಬಹಿರಂಗಗೊಂಡಿದೆ.

ಹಾರ್ದಿಕ್ ಪಾಂಡ್ಯಗೆ ಏನು ಮಾಡಬೇಕೆಂಬುದು ತಿಳಿದಿದೆ, ಕೋಚ್‌ಗಳ ಸಲಹೆ ಬೇಕಿಲ್ಲ ಎಂದ ಮೆಗ್ರಾತ್!ಹಾರ್ದಿಕ್ ಪಾಂಡ್ಯಗೆ ಏನು ಮಾಡಬೇಕೆಂಬುದು ತಿಳಿದಿದೆ, ಕೋಚ್‌ಗಳ ಸಲಹೆ ಬೇಕಿಲ್ಲ ಎಂದ ಮೆಗ್ರಾತ್!

2023 - 2007ರವರೆಗೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳ ಹಕ್ಕು ಹರಾಜು ನಡೆದಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ದೂರದರ್ಶನದ ನೇರಪ್ರಸಾರದ ಹಕ್ಕನ್ನು ಪಡೆದುಕೊಂಡರೆ, ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪಂದ್ಯಗಳ ನೇರಪ್ರಸಾರ ಮಾಡುವ ಹಕ್ಕನ್ನು ವಯಾಕಾಮ್ 18 ಸಂಸ್ಥೆ ತನ್ನ ತೆಕ್ಕೆಗೆ ಹಾಕಿಕೊಂಡಿತು.

IND vs SA: ಸರಣಿಯಿಂದ ಹೊರಬಿದ್ದು ತವರಿಗೆ ಪಯಣ ಬೆಳೆಸಿದ ದ. ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌IND vs SA: ಸರಣಿಯಿಂದ ಹೊರಬಿದ್ದು ತವರಿಗೆ ಪಯಣ ಬೆಳೆಸಿದ ದ. ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌

ಹೀಗೆ ಆರಂಭದ ಕೆಲ ವರ್ಷಗಳಲ್ಲಿ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಒಂದು ಪಂದ್ಯದ ಪ್ರಸಾರದ ಹಕ್ಕು ನೂರಾರು ಕೋಟಿಗೆ ಮಾರಾಟವಾಗುವ ಮಟ್ಟಕ್ಕೆ ಐಪಿಎಲ್ ಬೆಳೆದಿದ್ದು, ಇದು ವಿಶ್ವದ ಅತಿ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂಬುದನ್ನು ಸಾಬೀತುಪಡಿಸಿಕೊಂಡಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಇಂಡಿಯನ್ ಪ್ರೀಮಿಯರ್ ಲೀಗ್ ಜತೆ ಕೆಲ ನೆಟ್ಟಿಗರು ಪಾಕಿಸ್ತಾನ ಸೂಪರ್ ಲೀಗ್‌ನ್ನು ಹೋಲಿಕೆ ಮಾಡಿ ಮಾತನಾಡುತ್ತಿರುತ್ತಾರೆ. ಐಪಿಎಲ್‌ಗಿಂತ ಪಿಎಸ್‌ಎಲ್ ದೊಡ್ಡ ಲೀಗ್ ಎಂಬ ವಾದವನ್ನೂ ಸಹ ಕೆಲ ಕ್ರಿಕೆಟ್ ಪ್ರೇಮಿಗಳು ಹಾಗೂ ಕೆಲ ಕ್ರಿಕೆಟಿಗರೂ ಸಹ ಹೇಳಿದ್ದಾರೆ. ಆದರೆ, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನ ಒಂದು ಪಂದ್ಯದಿಂದ ಬರುವ ಮೀಡಿಯಾ ಹಕ್ಕಿನ ಮೊತ್ತವನ್ನೂ ಪಾಕಿಸ್ತಾನ ಸೂಪರ್ ಲೀಗ್‌ನ ಒಂದು ಪಂದ್ಯದಿಂದ ಬರುವ ಮೀಡಿಯಾ ಹಕ್ಕಿನ ಮೊತ್ತವನ್ನು ಗಮನಿಸಿದರೆ ಎರಡಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಕಾಣಸಿಗುತ್ತದೆ. ಕೆಲ ನೆಟ್ಟಿಗರು ಈ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದು, ಪಾಕಿಸ್ತಾನ್ ಸೂಪರ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಸನಿಹಕ್ಕೆ ಬರುವುದಿರಲಿ, ಅದರ 5% ಕೂಡ ಇಲ್ಲ ಎಂದು ಟೀಕಿಸುತ್ತಿದ್ದಾರೆ. ಹಾಗಿದ್ದರೆ, ಐಪಿಎಲ್ ಮತ್ತು ಪಿಎಲ್‌ಎಲ್ ನಡುವೆ ಇರುವ ಮೀಡಿಯಾ ಹಕ್ಕಿನ ಹಣದ ವ್ಯತ್ಯಾಸವೆಷ್ಟು ಹಾಗೂ ಬಹುಮಾನ ಧನದಲ್ಲಿ ಇರುವ ವ್ಯತ್ಯಾಸಗಳೇನು ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಒಂದು ಪಂದ್ಯದ ಪ್ರಸಾರದ ಹಕ್ಕು

ಒಂದು ಪಂದ್ಯದ ಪ್ರಸಾರದ ಹಕ್ಕು

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಒಂದು ಪಂದ್ಯದ ಪ್ರಸಾರದ ಹಕ್ಕಿನ ಮೊತ್ತ: 115.4 ಕೋಟಿ ರೂಪಾಯಿಗಳು

ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯ ಒಂದು ಪಂದ್ಯದ ಪ್ರಸಾರದ ಹಕ್ಕಿನ ಮೊತ್ತ: 2.76 ಕೋಟಿ ರೂಪಾಯಿಗಳು

ಗೆದ್ದವರಿಗೆ ಸಿಗುವ ಮೊತ್ತ

ಗೆದ್ದವರಿಗೆ ಸಿಗುವ ಮೊತ್ತ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬರೋಬ್ಬರಿ 15 ವರ್ಷಗಳ ಇತಿಹಾಸವಿದ್ದರೆ, ಪಾಕಿಸ್ತಾನ್ ಸೂಪರ್ ಲೀಗ್‌ 7 ವರ್ಷದ ಹಿಂದೆ ಆರಂಭಗೊಂಡ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯಾಗಿದೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡಕ್ಕೆ ಸಿಕ್ಕ ಮೊತ್ತ 20 ಕೋಟಿಯಾದರೆ, ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡಕ್ಕೆ ಸಿಕ್ಕಿದ ಮೊತ್ತ 3.5 ಕೋಟಿ ಅಗಿದೆ.

ಇತರೆ ಬಹುಮಾನ ಧನಗಳ ವಿವರ

ಇತರೆ ಬಹುಮಾನ ಧನಗಳ ವಿವರ

ಇನ್ನು ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ತಂಡಕ್ಕೆ ನೀಡುವ ಮೊತ್ತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಗಿಂತ ದೊಡ್ಡ ಮಟ್ಟದ ಅಂತರ ಹೊಂದಿರುವುದು ಮಾತ್ರವಲ್ಲದೇ ಇತರೆ ಬಹುಮಾನ ಧನಗಳ ಮೊತ್ತದಲ್ಲಿಯೂ ಪಿಎಲ್ಎಲ್ ಹಿಂದೆ ಬಿದ್ದಿದೆ. ಈ ಕುರಿತಾದ ಪಟ್ಟಿ ಕೆಳಕಂಡಂತಿದೆ.

ರನ್ನರ್ ಅಪ್ ತಂಡಗಳಿಗೆ ಸಿಗುವ ಮೊತ್ತ:
ಇಂಡಿಯನ್ ಪ್ರೀಮಿಯರ್ ಲೀಗ್ - 12.5 ಕೋಟಿ
ಪಾಕಿಸ್ತಾನ್ ಸೂಪರ್ ಲೀಗ್ - 1.5 ಕೋಟಿ

ಪ್ಲೇಯರ್ ಆಫ್ ದಿ ಟೂರ್ನಮೆಂಟ್:
ಐಪಿಎಲ್ - 10 ಲಕ್ಷ
ಪಿಎಸ್ಎಲ್ - 14.1 ಲಕ್ಷ

ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸದವರು:

ಐಪಿಎಲ್ - 10 ಲಕ್ಷ
ಪಿಎಸ್ಎಲ್ - 3.75 ಲಕ್ಷ

ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದವರು:
ಐಪಿಎಲ್ - 10 ಲಕ್ಷ
ಪಿಎಸ್ಎಲ್ - 3.75 ಲಕ್ಷ

Story first published: Thursday, June 16, 2022, 15:40 [IST]
Other articles published on Jun 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X