ರಾಜಸ್ಥಾನ್ ರಾಯಲ್ಸ್‌ಗೆ ಮರಳಿದ ನ್ಯೂಜಿಲೆಂಡ್ ಸ್ಪಿನ್ ಮಾಂತ್ರಿಕ ಇಶ್ ಸೋಧಿ!

ಜೈಪುರ, ಜನವರಿ 2: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಆವೃತ್ತಿಗೆ ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ ನ್ಯೂಜಿಲೆಂಡ್ ಸ್ಪಿನ್ ಮಾಂತ್ರಿಕ ಇಶ್ ಸೋಧಿಯ ಬಲ ಲಭಿಸಿದೆ. ಸೋಧಿಯನ್ನು ಆರ್‌ಆರ್‌ ತನ್ನ ಸ್ಪಿನ್ ಸಲಹೆಗಾರನಾಗಿ ಗುರುವಾರ (ಜನವರಿ 2) ನೇಮಿಸಿಕೊಂಡಿದೆ.

ಈ ವರ್ಷ ನಿವೃತ್ತಿಯಾಗಲಿರುವ ಕ್ರಿಕೆಟ್‌ ದಂತಕತೆಗಳು ಇವರು!

27ರ ಹರೆಯದ ಇಶ್ ಸೋಧಿ 2018 ಮತ್ತು 2019ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು. 2019ರ ಕೊನೆ ಗಳಿಗೆಯಲ್ಲಿ ಅಂದರೆ ಐಪಿಎಲ್ ಹರಾಜಿಗೂ ಮುನ್ನ ಆರ್‌ಆರ್ ಸೋಧಿಯನ್ನು ತಂಡದಿಂದ ಬಿಟ್ಟುಕೊಟ್ಟಿತ್ತು. ಆದರೆ ಮತ್ತೆ ಆರ್‌ಆರ್‌ಗೆ ಮರಳಿರುವ ಸೋಧಿ, ರಾಜಸ್ಥಾನ್ ಬೌಲಿಂಗ್ ಕೋಚ್‌ ಸಾಯ್‌ರಾಜ್ ಬಹುತಲೆ ಮತ್ತು ಮುಖ್ಯ ಕಾರ್ಯಾಚರಣಾಧಿಕಾರಿ ಜೇಕ್ ಲಶ್ ಮೆಕ್ರಮ್ ಜೊತೆಗಿದ್ದು ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಟ್ವಿಟರ್‌ನಲ್ಲಿ ಮನಮುಟ್ಟುವ ವೀಡಿಯೋ ಹಂಚಿಕೊಂಡ ಸಚಿನ್ ತೆಂಡೂಲ್ಕರ್

ಇಶ್ ಸೋಧಿ ಒಟ್ಟಿಗೆ 8 ಐಪಿಎಲ್ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಪ್ರತಿನಿಧಿಸಿದ್ದರು. ಈ ವೇಳೆ 6.69ರ ಎಕಾನಮಿಯಂತೆ ಒಟ್ಟು 9 ವಿಕೆಟ್‌ಗಳನ್ನು ಪಡೆದಿದ್ದರು. ನ್ಯೂಜಿಲೆಂಡ್ ಪರ ಒಟ್ಟು 39 ಟಿ20ಐ ಇನ್ನಿಂಗ್ಸ್‌ಗಳನ್ನು ಆಡಿರುವ 47 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟೀಮ್ ಇಂಡಿಯಾ ವಿರುದ್ಧದ ಟಿ20ಐ ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ

'ಸಣ್ಣ ವಯಸ್ಸಿನಲ್ಲೇ ರಾಜಸ್ಥಾನ್ ತರಬೇತಿ ಸಿಬ್ಬಂದಿಯೊಂದಿಗೆ ಕೆಲಸ ಮಾಡುವ ಅಪೂರ್ವ ಅವಕಾಶ ನನ್ನದು. ಹಾಗೆಯೇ ವ್ಯವಹಾರದ ಕಾರ್ಯಾಚರಣೆಗಳ ಬಗ್ಗೆ ಸಹಕರಿಸುವುದು ಮತ್ತು ಕಲಿಯುವುದಕ್ಕೂ ನನಗಿದು ಸಹಾಯಕವಾಗಿದೆ,' ಎಂದು ಇಶ್ ಸೋಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, January 2, 2020, 15:44 [IST]
Other articles published on Jan 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X