ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಿಕ್ಸಿಂಗ್ ವಿಚಾರಣೆ: ವಿಶೇಷ ತನಿಖಾದಳದ ಮುಂದೆ ಹಾಜರಾದ ಸಂಗಕ್ಕರ

Jayawardene, Sangakkara Called Up For 2011 World Cup Final Investigation

2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದೆ. ಇಂದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ ಮತ್ತು ಮಹೇಲ ಜಯವರ್ಧನೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ದಳ ಸೂಚಿಸಿದೆ.

ಈ ಸಮನ್ಸ್ ಹಿನ್ನೆಲೆಯಲ್ಲಿ ಕುಮಾರ ಸಂಗಕ್ಕರ ವಿಶೇಷ ತನಿಖಾ ದಳದ ಮುಂದೆ ಹಾಜರಾಗಿದ್ದು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಸುದೀರ್ಘ 5 ಗಂಟೆಗೂ ಹೆಚ್ಚು ಕಾಲ ಕುಮಾರ ಸಂಗಕ್ಕರ ಕ್ರೀಡಾ ಸಚಿವಾಲಯದ ಪೊಲೀಸ್ ವಿಭಾಗದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ.

ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ

ಸಂಗಕ್ಕರಗೆ ಗುರುವಾರ ಬೆಳಗ್ಗೆ 9 ಗಂಟೆಗೆ ವಿಚಾರಣೆ ಎದುರಿಸಲು ಕೇಳಿಕೊಳ್ಳಲಾಗಿತ್ತು. ಹೀಗಾಗಿ ಇಂದೇ ಅವರು ಹಾಜರಾಗಿದ್ದಾರೆ. ಇನ್ನು 2011ರ ಫೈನಲ್ ಪಂದ್ಯದ ಶತಕವೀರನಾಗಿದ್ದ ಜಯವರ್ಧನೆ ಅವರಿಗೂ ಸಮನ್ಸ್ ಜಾರಿಗೊಳಿಸಲಾಗಿದೆ ಅವರ ಹೇಳಿಕೆಯನ್ನು ಇನ್ನಷ್ಟೇ ದಾಖಲಿಸಿಕೊಳ್ಳಬೇಕಿದೆ. ಸಂಗಕ್ಕರ ಮತ್ತು ಜಯವರ್ಧನೆ ಈ ಆರೋಪಕ್ಕೆ ಸಂಬಂಧಿಸಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿ ಇದೊಂದು ಪ್ರಚಾರದ ತಂತ್ರ ಎಂದು ಕುಟುಕಿದ್ದರು.

ಇನ್ನು ಇದಕ್ಕೂ ಮುನ್ನ 2011ರಲ್ಲಿ ಶ್ರೀಲಂಕಾ ಕ್ರಿಕೆಟ್‌ನ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಅರವಿಂದ ಡಿಸಿಲ್ವಾ ಮತ್ತು ಆರಂಭಿಕ ಬ್ಯಾಟ್ಸ್​ಮನ್ ಉಫುಲ್ ತರಂಗ​ ವಿಚಾರಣೆಗೆ ಹಾಜರಾಗಿದ್ದರು. ಉಫುಲ್ ತರಂಗ ಫಿಕ್ಸಿಂಗ್ ಆರೋಪ ಬಂದಿರುವ ಫೈನಲ್ ಪಂದ್ಯದಲ್ಲಿ 18 ಎಸೆತಗಳಲ್ಲಿ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ವೆಸ್ಟ್ ಇಂಡೀಸ್ ಕೋಚ್ ಫಿಲ್ ಸಿಮನ್ಸ್ ತೆಗೆದುಹಾಕಿ ಎಂದ ಬೋರ್ಡ್ ಸದಸ್ಯವೆಸ್ಟ್ ಇಂಡೀಸ್ ಕೋಚ್ ಫಿಲ್ ಸಿಮನ್ಸ್ ತೆಗೆದುಹಾಕಿ ಎಂದ ಬೋರ್ಡ್ ಸದಸ್ಯ

ವಿಶ್ವಕಪ್​ ಫೈನಲ್​ ಪಂದ್ಯವನ್ನು ಕೆಲವರು ಸೇರಿ ಫಿಕ್ಸ್​ ಮಾಡಿದ್ದರು ಎಂದು ಮಾಜಿ ಸಚಿವ ಮಹಿಂದಾನಂದ ಅಲುತಗಮಗೆ ಕಳೆದ ತಿಂಗಳು ಆರೋಪಿಸಿದ್ದರು. ಬಳಿಕ ವಿಚಾರಣೆಯ ವೇಳೆ ಅವರು, ತಮ್ಮ ಬಳಿಕ ಯಾವುದೇ ಸಾಕ್ಷ್ಯ ಇಲ್ಲ. ಇದು ತಮ್ಮ ಅನುಮಾನವಷ್ಟೇ ಎಂದು ಹೇಳಿದ್ದರು. ಶ್ರೀಲಂಕಾ ಸರ್ಕಾರದ ಆದೇಶದಂತೆ ಪ್ರಕರಣದ ತನಿಖೆ ನಡೆಯುತ್ತಿದೆ.

Story first published: Thursday, July 2, 2020, 17:42 [IST]
Other articles published on Jul 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X