ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ: ಗುಜರಾತ್ ಮಣಿಸಿ ಸತತ 2ನೇ ಫೈನಲ್‌ಗೆ ಪ್ರವೇಶಿಸಿದ ಸೌರಾಷ್ಟ್ರ

Jaydev Unadkat leads Saurashtra to second successive Ranji Trophy final

ರಾಜ್‌ಕೋಟ್, ಮಾರ್ಚ್ 4: ರಾಜ್‌ಕೋಟ್‌ನಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ರಣಜಿ ಟ್ರೋಫಿ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೌರಾಷ್ಟ್ರ ತಂಡ 92 ರನ್‌ಗಳ ಜಯ ಗಳಿಸಿದೆ. ಈ ಗೆಲುವಿನ ಮೂಲಕ ಜಯದೇವ್ ಉನಾದ್ಕತ್ ನಾಯಕತ್ವದ ಸೌರಾಷ್ಟ್ರ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದಂತಾಗಿದೆ.

ಟಿ20 ಕ್ರಿಕೆಟ್‌ ಇತಿಹಾಸಲ್ಲಿ ಯಾರೂ ಮಾಡದ ಸಾಧನೆ ಮಾಡಿದ ಕಿರಾನ್ ಪೊಲಾರ್ಡ್!ಟಿ20 ಕ್ರಿಕೆಟ್‌ ಇತಿಹಾಸಲ್ಲಿ ಯಾರೂ ಮಾಡದ ಸಾಧನೆ ಮಾಡಿದ ಕಿರಾನ್ ಪೊಲಾರ್ಡ್!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೌರಾಷ್ಟ್ರ ತಂಡ, ಶೆಲ್ಡನ್ ಜಾಕ್ಸನ್ ಶತಕ (103 ರನ್)ದೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 304, ದ್ವಿತೀಯ ಇನ್ನಿಂಗ್ಸ್ ಅರ್ಪಿತ್ ವಸಾವಡ (139 ರನ್) ಶತಕ, ಚಿರಾಗ್‌ ಜಾನಿ ಅರ್ಧ ಶತಕ (51 ರನ್)ದೊಂದಿಗೆ 274 ರನ್ ಕಲೆ ಹಾಕಿತು.

ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ

ಗುರಿ ಬೆನ್ನತ್ತಿದ ಗುಜರಾತ್ ತಂಡ, ಮೊದಲ ಇನ್ನಿಂಗ್ಸ್‌ನಲ್ಲಿ ರುಜುಲ್ ಭಟ್ 71, ಚಿಂತನ್ ಗಜ 61, ಧೃವ್ ರಾವಲ್ 35 ರನ್‌ನೊಂದಿಗೆ 252 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಾರ್ಥೀವ್ ಪಟೇಲ್ 93, ಚಿರಾಜ್ ಗಾಂಧಿ 96 ರನ್‌ ಕೊಡುಗೆಯೊಂದಿಗೆ 234 ರನ್ ಪೇರಿಸಿ ಶರಣಾಯಿತು.

ಮಹಿಳಾ ವರ್ಲ್ಡ್‌ಕಪ್ ಸೆಮಿಫೈನಲ್: ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜುಮಹಿಳಾ ವರ್ಲ್ಡ್‌ಕಪ್ ಸೆಮಿಫೈನಲ್: ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜು

ಸೌರಾಷ್ಟ್ರ ಇನ್ನಿಂಗ್ಸ್‌ನಲ್ಲಿ ಗುಜರಾತ್‌ನ ರೂಶ್ ಕಲಾರಿಯಾ 2, ಚಿಂತನ್ ಗಜಾ 7, ಅರ್ಜುನ್ ನಾಗ್ವಾಸ್ವಲ್ಲ 5+2, ಅಕ್ಸರ್ ಪಟೇಲ್ 3 ವಿಕೆಟ್ ಪಡೆದರೆ, ಗಿಜರಾತ್ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರದ ನಾಯಕ ಜಯದೇವ್ ಉನಾದ್ಕತ್ 3+10, ಚೇತನ್ ಸಕಾರಿಯಾ 2, ಪ್ರೇರಕ್ ಮಂಕದ್ 1+1, ಚಿರಾಗ್ ಜಾನಿ 2+1, ಧರ್ಮೇಂದ್ರ ಸಿಂಹ ಜಡೇಜಾ 2+1 ವಿಕೆಟ್ ಪಡೆದರು.

ಐಪಿಎಲ್‌ನಲ್ಲಿ ಕಾಸ್ಟ್‌ಕಟ್ಟಿಂಗ್: ಪ್ರೈಸ್‌ಮನಿಯಲ್ಲಿ ಭಾರೀ ಕಡಿತ!ಐಪಿಎಲ್‌ನಲ್ಲಿ ಕಾಸ್ಟ್‌ಕಟ್ಟಿಂಗ್: ಪ್ರೈಸ್‌ಮನಿಯಲ್ಲಿ ಭಾರೀ ಕಡಿತ!

ಅರ್ಪಿತ್ ವಸಾವಡ ಪಂದ್ಯಶ್ರೇಷ್ಠರೆನಿಸಿದರು. ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ-ಬೆಂಗಾಲ್ ತಂಡಗಳು ಸೆಣಸಾಡಿದ್ದವು. ಇದರಲ್ಲಿ ಬೆಂಗಾಲ್ ಗೆದ್ದಿತ್ತು. ಬೆಂಗಾಲ್-ಸೌರಾಷ್ಟ್ರ ನಡುವಿನ ಫೈನಲ್ ಪಂದ್ಯ ಮಾರ್ಚ್ 9ರಂದು 9.30 amಗೆ ಆರಂಭಗೊಳ್ಳಲಿದೆ. ಈ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ.

Story first published: Wednesday, March 4, 2020, 22:38 [IST]
Other articles published on Mar 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X