Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿಯ ವಿವಾದಾತ್ಮಕ ರನ್‌ ಔಟ್: ಟ್ವೀಟ್‌ ಡಿಲೀಟ್‌ಗೆ ಕಾರಣ ಕೊಟ್ಟ ನೀಶಮ್

ಧೋನಿ ಅಭಿಮಾನಿಗಳ ಕಾಟಕ್ಕೆ ಈ ಕ್ರಿಕೆಟಿಗ ಗಪ್ ಚುಪ್..!
Jimmy Neesham deletes Tweet on MS Dhoni’s controversial run-out in IPL final

ನವದೆಹಲಿ, ಮೇ 16: ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ರನ್ ಔಟ್ ಆಗಿದ್ದು ವಿವಾದಕ್ಕೀಡಾಗಿತ್ತು. ನ್ಯೂಜಿಲ್ಯಾಂಡ್ ಕ್ರಿಕೆಟಿಗ ಜಿಮ್ಮಿ ನೀಶಮ್ (ಜೇಮ್ಸ್ ಡೌಗ್ಲಾಸ್ ಶಹೀನ್ ನೀಶಮ್) ಇದೇ ವಿಚಾರವನ್ನು ಮುಂದಿಟ್ಟು ಟ್ವೀಟ್ ಮಾಡಿದ್ದರು. ಮತ್ತಾಟ್ವೀಟನ್ನು ಡಿಲೀಟ್ ಮಾಡಿದ್ದರು. ಹಾಗೆ ಟ್ವೀಟ್ ಡಿಲೀಟ್ ಮಾಡಿದ್ದಕ್ಕೆ ಜೀಶಮ್ ಕಾರಣ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 1 ರನ್‌ಗಳಿಂದ ಸೋತಿತ್ತು. ಹೀಗಾಗಿ ಸಿಎಸ್‌ಕೆ ನಾಯಕ ಧೋನಿ ರನ್ ಔಟ್ ಚರ್ಚೆಗೆ ಕಾರಣವಾಗಿತ್ತು. ಧೋನಿ ರನ್‌ ಔಟ್ ಡಿಆರ್‌ಎಸ್‌ನಲ್ಲೂ ಗೊಂದಲ ರೀತಿಯಲ್ಲಿ ಕಾಣಿಸಿದ್ದು ವಿವಾದ ಸೃಷ್ಠಿಗೆ ದಾರಿಯಾಗಿತ್ತು.

ಈ ಘಟನೆ ಮುಂದಿಟ್ಟುಕೊಂಡು ಟ್ವೀಟ್ ಮಾಡಿದ್ದ ನೀಶಮ್, 'ಧೋನಿ ಮೇಲೆ ನನಗೆ ತುಂಬಾ ಗೌರವವಿದೆ. ಆದರೆ ಇದನ್ನು ಯಾರಾದರೂ ನಾಟ್ ಔಟ್ ಎನ್ನುವಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವೀಟ್ ಸುರಿಮಳೆಗೈದ ಸಿಎಸ್‌ಕೆ ಅಭಿಮಾನಿಗಳು, ಅದು ನಾಟೌಟ್ ಎಂದೇ ನೀಶಮ್ ಜೊತೆ ವಾದಿಸಿದ್ದರು. ಆಗ ನೀಶಮ್ ಟ್ವೀಟ್ ಡಿಲೀಟ್ ಮಾಡಿದ್ದರು.

ತಾನು ಟ್ವೀಟ್ ಡಿಲೀಟ್ ಮಾಡಿದ್ದಕ್ಕೆ ಕಾರಣ ತಿಳಿಸುತ್ತ ನೀಶಮ್, 'ಧೋನಿಯ ರನೌಟ್‌ಗೆ ಸಂಬಂಧಿಸಿದ ಟ್ವೀಟನ್ನು ನಾನು ಡಿಲೀಟ್ ಮಾಡಿದ್ದೇನೆ. ಅದರರ್ಥ ನೀವು (ಸಿಎಸ್‌ಕೆ ಅಭಿಮಾನಿಗಳು) ವಾದಿಸಿದ್ದು ಸರಿ ಅಂತಲ್ಲ. ಬದಲಿಗೆ, ದಿನಕ್ಕೆ ನೂರಿನ್ನೂರು ರಿಪ್ಲೆಗಳು ಬರುತ್ತಿದ್ದರಿಂದ ತಲೆ ಕೆಟ್ಟು ಹೋಯಿತು. ಇಲ್ಲದಿದ್ದರೆ, ನಾನು ಇಂಥವುಗಳಿಗೆಲ್ಲ ಕೇರೇ ಮಾಡೋನಲ್ಲ' ಎಂದು ಮತ್ತೊಂದು ಟ್ವೀಮ್ ಮಾಡಿದ್ದಾರೆ (ಮೇಲಿನ ಟ್ವೀಟನ್‌ನಲ್ಲಿ ನೀಶಮ್).

Story first published: Thursday, May 16, 2019, 15:17 [IST]
Other articles published on May 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+