ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೋ ರೂಟ್ ರೀತಿಯಲ್ಲಿ ಬ್ಯಾಟ್ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿದ ಕೊಹ್ಲಿ: ನಡೆಯಲಿಲ್ಲ ವಿರಾಟ್ ಮ್ಯಾಜಿಕ್

Virat kohli and Joe root
ಜೋ ರೂಟ್ ನ Copy ಮಾಡೋಕೆ ಹೋಗಿ Troll ಆದ ವಿರಾಟ್ !! | *Cricket | OneIndia Kannada

ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕೈಕ ಟೆಸ್ಟ್ ಪಂದ್ಯಕ್ಕೂ ಮುನ್ನ ಲೀಸೆಸ್ಟರ್‌ಶೈರ್ ವಿರುದ್ದ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಒಂದೆಡೆಯಾದ್ರೆ, ಟೀಂ ಇಂಡಿಯಾ ನಾಲ್ವರು ಪ್ರಮುಖ ಆಟಗಾರರು ಲೀಸೆಸ್ಟರ್‌ಶೈರ್ ಪರ ಆಡುತ್ತಿದ್ದಾರೆ.

ಈ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರೋಹಿತ್ ನಾಯಕತ್ವದ ಭಾರತ 8 ವಿಕೆಟ್ ನಷ್ಟಕ್ಕೆ 246ರನ್ ಕಲೆಹಾಕಿದೆ. ರೋಹಿತ್ ಶರ್ಮಾ 25, ಶುಭ್ಮನ್ ಗಿಲ್ 21, ಕೊಹ್ಲಿ 33 ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಶ್ರೀಕರ್ ಭರತ್ ಅಜೇಯ 70 ರನ್‌ಗಳಿಸಿರುವುದು ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.

ಜೋ ರೂಟ್ ರೀತಿಯಲ್ಲಿ ಬ್ಯಾಟ್ ಬ್ಯಾಲೆನ್ಸ್ ಮಾಡಲು ವಿರಾಟ್ ಪ್ರಯತ್ನ

ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಕಳೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ ಬ್ಯಾಲೆನ್ಸ್ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ರು. ಇದನ್ನೇ ಫಾಲೋ ಮಾಡಿದ ವಿರಾಟ್ ಕೊಹ್ಲಿ ಲೀಸೆಸ್ಟರ್‌ಶೈರ್ ವಿರುದ್ದ ಅಭ್ಯಾಸ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್ ವೇಳೆಯಲ್ಲಿ ನಾನ್ ಸ್ಟ್ರೈಕ್‌ನಲ್ಲಿದ್ದಾಗ ಬ್ಯಾಟ್ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿದ್ರು.

ವಿರಾಟ್ ಕೊಹ್ಲಿ ಎಷ್ಟೇ ಪ್ರಯತ್ನಿಸಿದ್ರು ಬ್ಯಾಟ್ ನಿಲ್ಲಲಿಲ್ಲ

ವಿರಾಟ್ ಕೊಹ್ಲಿ ಎಷ್ಟೇ ಪ್ರಯತ್ನಿಸಿದ್ರು ಬ್ಯಾಟ್ ನಿಲ್ಲಲಿಲ್ಲ

33 ರನ್‌ ಕಲೆಹಾಕಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೇಳೆಯಲ್ಲಿ ಪದೇ ಪದೇ ನಾನ್‌ಸ್ಟ್ರೈಕ್‌ನಲ್ಲಿ ಬ್ಯಾಟ್‌ ಅನ್ನು ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿದ್ರು. ಆದ್ರೆ ಕೊಹ್ಲಿ ಪ್ರಯತ್ನ ಮಾಡಿದಾಗಲೆಲ್ಲಾ ಬ್ಯಾಟ್ ಬೀಳುವುದನ್ನ ಕಾಣಬಹುದು. ವಿರಾಟ್ ಕೊಹ್ಲಿ ಎಷ್ಟೇ ಪ್ರಯತ್ನಿಸಿದ್ರೂ ಸಹ ಜೋ ರೂಟ್ ರೀತಿಯಲ್ಲಿ ಬ್ಯಾಟ್‌ ಅನ್ನು ಕೆಲವು ಸೆಕೆಂಡ್‌ಗಳ ಕಾಲ ನಿಲ್ಲಿಸಲು ಸಾಧ್ಯವಾಗಲಿಲ್ಲ.

ಫ್ಯಾಬ್ ಫೋರ್ ಬ್ಯಾಟರ್‌ಗಳಲ್ಲಿ ಒಬ್ಬರಾದ ಜೋ ರೂಟ್‌ ಈಗಾಗಲೇ 10 ಸಾವಿರಕ್ಕೂ ಹೆಚ್ಚು ರನ್ ಕಲೆಹಾಕಿದ್ದು, ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ವೀವನ್ ಸ್ಮಿತ್‌ಗಿಂತ ಮುಂದಿದ್ದಾರೆ.

ಶ್ರೀಲಂಕಾ vs ಆಸ್ಟ್ರೇಲಿಯಾ: 5 ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಲಿದ್ದಾರೆ ಮ್ಯಾಕ್ಸ್‌ವೆಲ್!

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮ್ಯಾಜಿಕ್ ಮಾಡಿದ್ದ ರೂಟ್

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮ್ಯಾಜಿಕ್ ಮಾಡಿದ್ದ ರೂಟ್

ವಿರಾಟ್ ಕೊಹ್ಲಿ ಜೋ ರೂಟ್‌ ಅನ್ನು ಅನುಸರಿಸಲು ಕಾರಣ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ನಾನ್‌ ಸ್ಟ್ರೈಕ್‌ನಲ್ಲಿದ್ದ ರೂಟ್ ಬ್ಯಾಟ್ ಅನ್ನು ನೇರವಾಗಿ ನಿಲ್ಲಿಸಿ ಸುಮ್ಮನೆ ನಿಂತಿದ್ದರು. ಬೌಲರ್ ರನ್ನಪ್ ಮಾಡಿ ಚೆಂಡನ್ನು ಬೌಲ್ ಮಾಡುವ ವೇಳೆಯಲ್ಲಿ ಬ್ಯಾಟನ್ನು ತೆಗೆದುಕೊಂಡು ರನ್‌ ಓಡಲು ಸಿದ್ಧವಾಗಿದ್ದರು. ಈ ಕುರಿತಾದ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ಪಂದ್ಯದಲ್ಲಿ ಅಜೇಯ 115 ರನ್ ಕಲೆಹಾಕಿದ ರೂಟ್‌ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಭಾರತ vs ಲೀಸೆಸ್ಟರ್‌ಶೈರ್: ಕೆಎಸ್ ಭರತ್ ಅಜೇಯ 70, ಭಾರತದ ಅಗ್ರ ಕ್ರಮಾಂಕ ವಿಫಲ

ವಿರಾಟ್ ಕೊಹ್ಲಿ ಮುಂದಿದೆ ಬಿಗ್ ಚಾಲೆಂಜ್

ವಿರಾಟ್ ಕೊಹ್ಲಿ ಮುಂದಿದೆ ಬಿಗ್ ಚಾಲೆಂಜ್

ವಿರಾಟ್ ಕೊಹ್ಲಿ ಐಪಿಎಲ್ 2022ರ ಸೀಸನ್‌ನಲ್ಲಿ ರನ್‌ಗಳಿಸಲು ವಿಫಲರಾದರು. 16 ಇನ್ನಿಂಗ್ಸ್‌ಗಳಲ್ಲಿ 22.73 ರ ಕಳಪೆ ಸರಾಸರಿಯಲ್ಲಿ 341 ರನ್ ಗಳಿಸಿದರು. ಇದಕ್ಕೂ ಮೊದಲು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕ ಸಿಡಿಸಿದ ಬಳಿಕ ವಿರಾಟ್ ಶತಕದ ಬರ ಎದುರಿಸುತ್ತಿದ್ದಾರೆ.

ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ರಲ್ಲೂ ಇಂಗ್ಲೆಂಡ್‌ ಪಿಚ್‌ನಲ್ಲಿ ಆ್ಯಂಡರ್ಸನ್ ಹಲವು ಬಾರಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಈ ಬಾರಿ ಆ್ಯಂಡರ್ಸನ್‌ಗೆ ವಿಕೆಟ್ ನೀಡದೇ ಇರುವುದು ಸಹ ದೊಡ್ಡ ಚಾಲೆಂಜ್ ಆಗಿದೆ. 2014 ರಲ್ಲಿ ಇಂಗ್ಲೆಂಡ್ ಪಿಚ್‌ಗಳಲ್ಲಿ 4 ಬಾರಿ ವಿರಾಟ್‌ನನ್ನು ಆ್ಯಂಡರ್ಸನ್ ಔಟ್ ಮಾಡಿದ್ದರು.

Story first published: Friday, June 24, 2022, 16:31 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X