ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾನ್‌ಕಾರ್ಡ್ ಕಳೆದುಕೊಂಡ ಕೆವಿನ್ ಪೀಟರ್ಸನ್: ನೆರವಿಗೆ ಬಂದ ಆದಾಯ ತೆರಿಗೆ ಇಲಾಖೆ!

Kevin Pietersen Tweets After Missing PAN Card, Income Tax Department Offers To Help

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಭಾರತದಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಐಪಿಎಲ್ ಕಾರಣದಿಂದಾಗಿ ಭಾರತದಲ್ಲಿಯೂ ಪೀಟರ್ಸನ್ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಭಾರತದಲ್ಲಿ ಐಪಿಎಲ್‌ನ ನೇರಪ್ರಸಾರದ ಹೊಣೆಹೊತ್ತಿರುವ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ವಿಶ್ಲೇಷಕರಾಗಿ ನಿರಂತರವಾಗಿ ಗುರುತಿಸಿಕೊಂಡು ಬಂದಿದ್ದಾರೆ ಪೀಟರ್ಸನ್.

ಆದರೆ ಇದೀಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಟ್ವಿಟ್ಟರ್‌ನಲ್ಲಿ ಭಾರತದ ನೆರವನ್ನು ಕೇಳಿದ್ದಾರೆ. ತಾನು ಪಾನ್ ಕಾರ್ಡ್‌ಅನ್ನು ಕಳೆದುಕೊಂಡಿದ್ದು ಹೊಸ ಪಾನ್‌ಕಾರ್ಡ್ ಮಾಡಿಸಲು ಯಾರಾದರೂ ಸಹಾಯ ಮಾಡಿ ಎಂದು ಪೀಟರ್ಸನ್ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ತಾನು ಕೆಲಸದ ನಿಮಿತ್ತ ಭಾರತಕ್ಕೆ ಪ್ರಯಾಣಿಸ ಬೇಕಿದ್ದು ಅದಕ್ಕೂ ಮುನ್ನ ಪಾನ್‌ಕಾರ್ಡ್‌ಗಾಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಪೀಟರ್ಸನ್.

ಭಾರತ vs ಶ್ರೀಲಂಕಾ: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಬೆಂಗಳೂರಿನಲ್ಲಿ ಡೇ-ನೈಟ್ ಟೆಸ್ಟ್ಭಾರತ vs ಶ್ರೀಲಂಕಾ: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಬೆಂಗಳೂರಿನಲ್ಲಿ ಡೇ-ನೈಟ್ ಟೆಸ್ಟ್

ಪೀಟರ್ಸನ್ ಮಾಡಿಕೊಂಡ ಮನವಿಯಲ್ಲೇನಿದೆ: "ಭಾರತ ದಯವಿಟ್ಟು ಸಹಾಯ ಮಾಡಿ. ನಾನು ನನ್ನ ಪಾನ್‌ಕಾರ್ಡ್‌ಅನ್ನು ಕಳೆದುಕೊಂಡಿದ್ದೇನೆ. ಮುಂದಿನ ಸೋಮವಾರ ನಾನು ಭಾರತಕ್ಕೆ ಪ್ರಯಾಣಿಸಬೇಕಿದೆ. ಆದರೆ ನನಗೆ ಕೆಲಸದ ಕಾರಣ ಪಾನ್‌ಕಾರ್ಡ್‌ನ ಅಗತ್ಯವಿದೆ. ಯಾರಾದರೂ ನನಗೆ ದಯವಿಟ್ಟು, ದಯವಿಟ್ಟು ಯಾರನ್ನು ಸಂಪರ್ಕಿಸಬೇಕೆಂದು ಸಾಧ್ಯವಾದಷ್ಟು ಶೀಘ್ರವಾಗಿ ಸಹಾಯಮಾಡಿ" ಎಂದು ಕೆವಿನ್ ಪೀಟರ್ಸನ್ ಟ್ವೀಟ್ ಮಾಡಿಕೊಂಡಿದ್ದಾರೆ.

ಇನ್ನು ಕೆವಿನ್ ಪೀಟರ್ಸನ್ ಟ್ವಿಟ್ಟರ್‌ನಲ್ಲಿ ಮಾಡಿಕೊಂಡ ಈ ಮನವಿಗೆ ಭಾರತದ ಆದಾಯ ತೆರಿಗೆ ಇಲಾಖೆ ತಕ್ಷಣವೇ ಸ್ಪಂದಿಸಿದೆ. ಅಲ್ಲದೆ ಹೊಸ ಪಾನ್ ಕಾರ್ಡ್ ಪಡೆಯಲು ಏನು ಮಾಡಬೇಕೆಂದು ಟ್ವೀಟ್‌ನಲ್ಲಿಯೇ ಮಾಹಿತಿ ನೀಡಿದೆ.

"ಆತ್ಮೀಯ ಕೆವಿನ್ ಪೀಟರ್ಸನ್ ಅವರೇ, ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ. ನಿಮ್ಮಲ್ಲಿ ಹಿಂದಿನ ಪಾನ್‌ಕಾರ್ಡ್‌ನ ವಿವರಗಳು ಇದ್ದರೆ ಈ ಕೆಳಗಿನ ಲಿಂಕ್‌ನ ಸಹಾಯದಿಂದ ಹೊಸ ಪಾನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ" ಎಂದಿದ್ದಾರೆ ಆದಾಯ ತೆರಿಗೆ ಇಲಾಖೆಯ ಈ ಪ್ರತಿಕ್ರಿಯೆಗೆ ಕೆವಿನ್ ಪೀಟರ್ಸನ್ ಹರ್ಷವನ್ನು ವ್ಯಕ್ತಪಡಿಸಿದ್ದು ಈ ವಿಧಾನಗಳ ಬಗ್ಗೆ ಮಾತನಾಡಲು ಯಾರೊಂದಿಗಾದರೂ ಮಾತನಾಡಲು ಸಾಧ್ಯವೇ?" ಎಂದು ಕೇಳಿಕೊಂಡಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್: ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ: ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ!ಭಾರತ vs ವೆಸ್ಟ್ ಇಂಡೀಸ್: ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ: ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ!

ಉಕ್ರೇನ್ ಮೇಲೆ ಸೈಬರ್ ದಾಳಿ ಮಾಡಿದ ರಷ್ಯಾ,ಮುಂದೇನು? | Oneindia Kannada

ಐಪಿಎಲ್‌ನಲ್ಲಿ ಆರಂಭಿಕ ಆವೃತ್ತಿಯಿಂದಲೇ ಆಟಗಾರನಾಗಿ ಸಂಬಂಧ ಹೊಂದಿದ್ದರು ಕೆವಿನ್ ಪೀಟರ್ಸನ್. ಡೆಲ್ಲಿ ಡೇರ್‌ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್, ಡೆಕ್ಕನ್ ಚಾರ್ಜಸ್ ಮತ್ತು ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ ಪೀಟರ್ಸನ್. ನಿವೃತ್ತಿಯ ಬಳಿಕವೂ ಐಪಿಎಲ್ ಜೊತೆಗೆ ಸಂಬಂಧವನ್ನು ಮುಂದುವರಿಸಿದ್ದಾರೆ. ಕಳೆದ ಕೆಲ ಆವೃತ್ತಿಗಳಲ್ಲಿ ಅವರು ಕಾಮೆಂಟೇಟರ್ ಆಗಿ ಕರ್ತವ್ಯವನ್ನು ಮುಂದುವರಿಸಿದ್ದಾರೆ.

Story first published: Wednesday, February 16, 2022, 15:57 [IST]
Other articles published on Feb 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X