ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಿನ್ ಎದುರಿಸಲು ಪೀಟರ್‌ಸನ್‌ಗೆ ಇ ಮೇಲ್ ಮೂಲಕ ಸಲಹೆ ನೀಡಿದ್ದ ದ್ರಾವಿಡ್

Kevin pieterson shares special messege from Rahul Dravid

ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ ಪೀಟರ್‌ಸನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚಟುವಟಿಕೆಯಿಂದ ಇರುವ ವ್ಯಕ್ತಿ. ಶನಿವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರು ವಿಶೇಷ ಈಮೇಲ್ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಕಳುಹಿಸಿರುವ ಈ ಸಂದೇಶದಿಂದಾಗಿ ನನ್ನ ಆಟ ಬದಲಾಯಿತು ಎಂದು ಪೀಟರ್‌ಸನ್‌ ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೆವಿನ್ ಪೀಟರ್‌ಸನ್‌ಗೆ ಸ್ಪಿನ್ ವಿರುದ್ಧ ಯಾವ ರೀತಿಯ ಕೌಶಲ್ಯವನ್ನು ಹೊಂದಬೇಕು ಎಂದು ವಿವರಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೆವಿನ್ ಪೀಟರ್‌ಸನ್‌ಗೆ ಲಂಕಾ ಸ್ಪಿನ್ ಬೌಲಿಂಗ್ ವಿರುದ್ಧ ಸೆಣೆಸಾಡಲು ಪ್ರಮುಖ ಪಾತ್ರವಹಿಸಿತು ಎಂದಿದ್ದಾರೆ.

ಅಜಿಂಕ್ಯ ರಹಾನೆ ಇಷ್ಟವಾಗೋದು ಇಂಥ ಒಳ್ಳೆಯತನಗಳಿಗಾಗಿಯೇ!ಅಜಿಂಕ್ಯ ರಹಾನೆ ಇಷ್ಟವಾಗೋದು ಇಂಥ ಒಳ್ಳೆಯತನಗಳಿಗಾಗಿಯೇ!

ಪ್ರಸಕ್ತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸ್ಪಿನ್ ದಾಳಿ ಎದುರಿಸಲು ಇಂಗ್ಲೆಂಡ್ ಆಟಗಾರರಾದ ಡಾಮಿನಿಕ್ ಸಿಬ್ಲಿ ಹಾಗೂ ಜಾಖ್ ಕ್ರಾವ್ಲಿ ಪರದಾಡುತ್ತಿದ್ದಾರೆ. ಅವರೊಂದಿಗೆ ದ್ರಾವಿಡ್ ಕಳುಹಿಸಿರುವ ಈ ಸಂದೇಶವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಂಚಿಕೊಳ್ಳಬೇಕೆಂದು ಪೀಟರ್‌ಸನ್ ಅಭಿಪ್ರಾಯಪಟ್ಟಿದ್ದಾರೆ.

2010ರಲ್ಲಿ ಕೆವಿನ್ ಪೀಟರ್‌ಸನ್ ಬಾಂಗ್ಲಾದೇಶದ ಸ್ಪಿನ್ನರ್‌ಗಳನ್ನು ಎದುರಿಸಲು ಸಾಕಷ್ಟು ಪರದಾಡಿದ್ದರು. ಹೀಗಾಗಿ ಪೀಟರ್‌ಸನ್ ಸ್ಪಿನ್ನರ್‌ಗಳನ್ನು ಎದುರಿಸಲು ರಾಹುಲ್ ದ್ರಾವಿಡ್ ಅವರ ಸಲಹೆ ಪಡೆಯಲು ನಿರ್ಧರಿಸಿದ್ದರು. ಇದಕ್ಕೆ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿ ಕಠಿಣ ಸಂದರ್ಭಗಳಲ್ಲಿ ಯಾವ ರೀತಿಯಾಗಿ ಸ್ಪಿನ್ ಬೌಲಿಂಗ್ ವಿರುದ್ಧ ಸೆಣೆಸಾಡಬೇಕು ಎಂದು ವಿವರಿಸಿದ್ದರು.

ಈ ಈ ಮೇಲ್‌ನಲ್ಲಿ ರಾಹುಲ್ ದ್ರಾವಿಡ್ ಸ್ಪಿನ್ ಬೌಲಿಂಗ್‌ಅನ್ನು ನಿರ್ವಹಿಸಲು ವಿವಿಧ ಮಾರ್ಗಗಳನ್ನು ಸೂಚಿಸಿದ್ದರು. ಇದೆಲ್ಲಿ ಅವರು ಫ್ರಂಟ್ ಫೂಟ್‌ಅನ್ನು ಉಪಯೋಗಿಸದಿರುವ ಪ್ರಾಮುಖ್ಯತೆ ಹಾಗೂ ಬೀಟನ್ ಎಸೆತಗಳ ಬಗೆಗೆ ತಲೆಕೆಡಿಸಿಕೊಳ್ಳದಂತೆ ವಿವರಿಸಿದ್ದರು.

Story first published: Sunday, January 24, 2021, 10:56 [IST]
Other articles published on Jan 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X