IND vs NZ: ಫಾರ್ಮ್ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಉರಿದು ಬಿದ್ದ ರಿಷಬ್ ಪಂತ್!

ರಿಷಬ್ ಪಂತ್ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲೂ ರನ್ ಗಳಿಸುವಲ್ಲಿ ವಿಫಲವಾಗಿದ್ದಾರೆ. 16 ಎಸೆತಗಳಲ್ಲಿ 10 ರನ್ ಗಳಿಸಿ ಔಟ್ ಆಗುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದಾರೆ.

ಪದೇ ಪದೇ ರನ್ ಗಳಿಸಲು ವಿಫಲವಾಗುತ್ತಿದ್ದರು ರಿಷಬ್‌ ಪಂತ್‌ಗೆ ಅವಕಾಶ ನೀಡುವ ಅಗತ್ಯವೇನಿದೆ, ಸಂಜು ಸ್ಯಾಮ್ಸನ್‌ರಂತಹ ಆಟಗಾರರಿಗೆ ಇದು ಅನ್ಯಾಯ ಮಾಡಿದಂತಾಗುತ್ತದೆ ಎಂದು ಹಲವು ಮಾಜಿ ಕ್ರಿಕೆಟಿಗರು ಕೂಡ ತಂಡದ ಮ್ಯಾನೇಜ್‌ಮೆಂಟ್‌ ವಿರುದ್ಧ ಕಿಡಿಕಾರಿದ್ದಾರೆ.

ಭಾರತ-ನ್ಯೂಜಿಲೆಂಡ್ ಸರಣಿಯ ಕೊನೆಯ ಏಕದಿನ ಪಂದ್ಯದ ಆರಂಭಕ್ಕೆ ಮುನ್ನ ರಿಷಬ್ ಪಂತ್ ತಮ್ಮ ಕಳಪೆ ಫಾರ್ಮ್ ಕುರಿತಂತೆ ಮಾತನಾಡಿದ್ದಾರೆ. ಟಿ20 ಮಾದರಿ ಕ್ರಿಕೆಟ್‌ನಲ್ಲಿ ನಾನು ಆರಂಭಿಕನಾಗಿ ಬ್ಯಾಟಿಂಗ್ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

ENG Vs PAK: ಪಾಕಿಸ್ತಾನದಲ್ಲಿ ಅನಾರೋಗ್ಯಕ್ಕೆ ತುತ್ತಾದ ಇಂಗ್ಲೆಂಡ್‌ ತಂಡದ ಆಟಗಾರರುENG Vs PAK: ಪಾಕಿಸ್ತಾನದಲ್ಲಿ ಅನಾರೋಗ್ಯಕ್ಕೆ ತುತ್ತಾದ ಇಂಗ್ಲೆಂಡ್‌ ತಂಡದ ಆಟಗಾರರು

ಏಕದಿನ ಮಾದರಿಯಲ್ಲಿ 4 ಅಥವಾ 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಯಸುತ್ತೇನೆ ಎಂದಿರುವ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ಕ್ರಮಾಂಕದಲ್ಲಿ ಆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸೀಮಿತ ಓವರ್ ಗಳ ಕ್ರಿಕೆಟ್‌ನಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡುವಲ್ಲಿ ಅವರು ವಿಫಲರಾಗಿದ್ದಾರೆ. ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ಹೋಲಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಪಂತ್ ಉತ್ತಮ ದಾಖಲೆ ಹೊಂದಿದ್ದಾರೆ.

ಉತ್ತಮವಾಗಿ ಆಡಲು ಯತ್ನಿಸುತ್ತೇನೆ

ಉತ್ತಮವಾಗಿ ಆಡಲು ಯತ್ನಿಸುತ್ತೇನೆ

ಬ್ಯಾಟಿಂಗ್ ಮಾಡುವಾಗ ಆಟದ ಯೋಜನೆ ಬದಲಾಗುತ್ತದೆ. ವಿಭಿನ್ನ ಕ್ರಮಾಂಕಗಳಲ್ಲಿ ಆಡಬೇಕಾಗುತ್ತದೆ. ತಂಡದ ಕೋಚ್ ಮತ್ತು ನಾಯಕ ತಂಡಕ್ಕೆ ಯಾವುದು ಉತ್ತಮ, ಯಾರು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ನಿರ್ಧರಿಸುತ್ತಾರೆ. ನನಗೆ ಯಾವ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕರೂ, ಉತ್ತಮವಾಗಿ ಆಡಲು ನಾನು ನನ್ನ ಕೈಲಾದಷ್ಟು ಪ್ರಯತ್ನ ಪಡುತ್ತೇನೆ ಎಂದು ಹೇಳಿದರು.

ಹರ್ಷ ಭೋಗ್ಲೆ, ಟಿ20 ಮತ್ತು ಏಕದಿನ ಮಾದರಿಗೆ ಹೋಲಿಸಿದಾಗ ಉತ್ತಮವಾದ ಟೆಸ್ಟ್ ದಾಖಲೆಯನ್ನು ಹೊಂದಿರುವ ಬಗ್ಗೆ ಕೇಳಿದಾಗ ರಿಷಬ್ ಪಂತ್ ಬೇಸರದಲ್ಲಿ ಉತ್ತರ ನೀಡಿದರು. "ದಾಖಲೆ ಕೇವಲ ಒಂದು ಸಂಖ್ಯೆ, ಸೀಮಿತ ಓವರ್ ಗಳಲ್ಲಿ ನನ್ನ ದಾಖಲೆ ಉತ್ತಮವಾಗಿಲ್ಲವಾದರೂ, ಕೆಟ್ಟದಾಗಿ ಇಲ್ಲ" ಎಂದು ಹೇಳಿದರು.

ನನಗಿನ್ನೂ 24 ವರ್ಷ ಎಂದ ಪಂತ್

ಇದಕ್ಕೆ ಪ್ರತಿಯಾಗಿ ಹರ್ಷಾ ಭೋಗ್ಲೆ ನಿಮ್ಮ ಸೀಮಿತ ಓವರ್ ಗಳ ದಾಖಲೆ ಕೆಟ್ಟದಾಗಿ ಇದೆ ಎಂದು ಹೇಳುತ್ತಿಲ್ಲ ಎಂದು ಉತ್ತರ ನೀಡಿದಾಗ ಪಂತ್ ಪ್ರತಿಕ್ರಿಯೆ ನೀಡಿ, "ಇದೀಗ ಹೋಲಿಕೆ ಮಾಡುವುದರಲ್ಲಿ ಅರ್ಥವಿಲ್ಲ. ನನಗಿನ್ನೂ 24-25 ವರ್ಷ. ನೀವು ಹೋಲಿಕೆ ಮಾಡಬೇಕೆಂದರೆ ನಾನು 30-32 ವರ್ಷದವನಾದಾಗ ಮಾಡಬಹುದು. ಅದಕ್ಕೂ ಮೊದಲು ಹೋಲಿಕೆ ಮಾಡಿದರೆ ಅರ್ಥ ಇರುವುದಿಲ್ಲ" ಎಂದು ಹೇಳಿದರು.

ಪಂತ್ ಉತ್ತರ ನೀಡಿದ ಬಗ್ಗೆ ನೆಟ್ಟಿಗರು ತೀವ್ರ ಟೀಕೆ ಮಾಡುತ್ತಿದ್ದಾರೆ. ಹಿರಿಯರಾದ ಹರ್ಷಾ ಭೋಗ್ಲೆಯವರಿಗೆ ಈ ರೀತಿ ಉತ್ತರ ಕೊಡುವುದು ಸರಿಯಲ್ಲಿ ಎಂದು ಹೇಳಿದ್ದಾರೆ.

ಪಂತ್‌ಗೆ ಇನ್ನೆಷ್ಟು ಅವಕಾಶ ನೀಡುತ್ತೀರಿ?

ಪಂತ್‌ಗೆ ಇನ್ನೆಷ್ಟು ಅವಕಾಶ ನೀಡುತ್ತೀರಿ?

ಮೂರನೇ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ರನ್ ಗಳಿಸಲು ವಿಫಲವಾಗುತ್ತಿದ್ದಂತೆ ಟ್ವಿಟರ್ ನಲ್ಲಿ ನೆಟ್ಟಿಗರು ಟೀಕೆ ಮಾಡಲು ಆರಂಭಿಸಿದರು. ಪಂತ್‌ಗೆ ತಂಡದ ಮ್ಯಾನೇಜ್‌ಮೆಂಟ್ ಇನ್ನೆಷ್ಟು ಅವಕಾಶ ನೀಡುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ರಿಷಬ್ ಪಂತ್ ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯ ಆರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರೆ, ಸಂಜು ಸ್ಯಾಮ್ಸನ್ ಮಾತ್ರ ಕೇವಲ ಒಂದು ಪಂದ್ಯದಲ್ಲಿ ಆಡಲು ಅವಕಾಶ ಪಡೆದರು.

For Quick Alerts
ALLOW NOTIFICATIONS
For Daily Alerts
Story first published: Wednesday, November 30, 2022, 18:37 [IST]
Other articles published on Nov 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X