ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಸರಣಿಗೂ ಕುಲದೀಪ್ ಯಾದವ್‌ಗೆ ಅವಕಾಶ: ಕೊಹ್ಲಿ ಬಯಕೆ

kuldeep yadav england test series kohli hints

ನಾಟಿಂಗ್‌ಹ್ಯಾಮ್, ಜುಲೈ 13: ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಬೇರೆ ಬೇರೆ ತಂಡಗಳನ್ನು ಆಡಿಸುತ್ತಿರುವ ಭಾರತಕ್ಕೆ ಈಗ ಇಂಗ್ಲೆಂಡ್ ಸರಣಿಯಲ್ಲಿನ ಸ್ಪಿನ್ನರ್‌ಗಳ ಪ್ರದರ್ಶನ ಆಯ್ಕೆಯ ತಲೆನೋವು ಮೂಡಿಸಿದೆ.

ಸೀಮಿತ ಓವರ್‌ಗಳ ಪಂದ್ಯಗಳಿಗೆ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರ ಸ್ಪಿನ್ ಅಸ್ತ್ರವನ್ನು ಬಳಸುತ್ತಿರುವ ಭಾರತ, ಟೆಸ್ಟ್‌ಗೆ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರನ್ನು ಆಡಿಸುತ್ತಿದೆ.

ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಟ್ವಿಟ್ಟರಿಗರ ಗುಣಗಾನಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಟ್ವಿಟ್ಟರಿಗರ ಗುಣಗಾನ

ಅಶ್ವಿನ್ ಹಾಗೂ ಜಡೇಜಾ ಬ್ಯಾಟಿಂಗ್‌ನಲ್ಲಿಯೂ ಕಾಣಿಕೆ ನೀಡಬಲ್ಲವರಾಗಿರುವುದರಿಂದ ಟೆಸ್ಟ್ ಪಂದ್ಯಗಳಿಗೆ ಹೆಚ್ಚು ಉಪಯುಕ್ತವಾಗಲಿದೆ.

ಆದರೆ, ಇಂಗ್ಲೆಂಡ್ ನೆಲದಲ್ಲಿ ಅಲ್ಲಿನ ಬ್ಯಾಟ್ಸ್‌ಮನ್‌ಗಳು ಕುಲದೀಪ್ ಹಾಗೂ ಚಾಹಲ್ ಬೌಲಿಂಗ್ ದಾಳಿಗೆ ಬೆದರುತ್ತಿರುವುದನ್ನು ನೋಡಿದಾಗ ಇಬ್ಬರನ್ನೂ ಟೆಸ್ಟ್‌ನಲ್ಲಿಯೂ ಆಡಿಸಬೇಕು ಎಂದೆನಿಸುತ್ತಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

kuldeep yadav england test series kohli hints

'ಟೆಸ್ಟ್‌ ಆಯ್ಕೆಯಲ್ಲಿ ಎಲ್ಲಾ ಸಾಧ್ಯತೆಗಳೂ ಇವೆ. ಮತ್ತು ಅದರಲ್ಲಿ ಕೆಲವು ಅಚ್ಚರಿಗಳು ಇರಬಹುದು. ಕುಲದೀಪ್ ತಮ್ಮನ್ನು ಪ್ರಬಲ ಸ್ಪರ್ಧಿಯಾಗಿ ಸಿದ್ಧಪಡಿಸಿಕೊಂಡಿದ್ದಾರೆ. ಜತೆಗೆ ಚಾಹಲ್ ಕೂಡ.

ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಅವರ ಎದುರು ತಡಬಡಾಯಿಸಿರುವುದನ್ನು ನೋಡಿದಾಗ ಅವರನ್ನು ಆಡಿಸಲೇಬೇಕು ಎನಿಸುತ್ತದೆ' ಎಂದು ಕೊಹ್ಲಿ ಹೇಳಿದ್ದಾರೆ.

ಆದರೆ, ಸದ್ಯ ನಡೆಯುತ್ತಿರುವ ಏಕದಿನ ಸರಣಿ ಮೇಲೆ ಮಾತ್ರ ಗಮನ ಹರಿಸಿರುವುದಾಗಿ ಕೊಹ್ಲಿ ಹೇಳಿದ್ದಾರೆ.

ಯೋ ಯೋ ಟೆಸ್ಟ್ ನಲ್ಲಿ ಭರ್ಜರಿ ಫಿಟ್ನೆಸ್ ತೋರಿಸಿದ ಸಂಜು ಸ್ಯಾಮ್ಸನ್!ಯೋ ಯೋ ಟೆಸ್ಟ್ ನಲ್ಲಿ ಭರ್ಜರಿ ಫಿಟ್ನೆಸ್ ತೋರಿಸಿದ ಸಂಜು ಸ್ಯಾಮ್ಸನ್!

'ನಮ್ಮ ಗಮನ ಮುಂದಿನ ಎರಡು ಪಂದ್ಯಗಳ ಮೇಲಿದೆ. ಮುಖ್ಯವಾಗಿ ಸರಣಿಯ ದೃಷ್ಟಿಯಿಂದ ಮುಂದಿನ ಪಂದ್ಯ ಮುಖ್ಯವಾಗಿದೆ' ಎಂದು ಕೊಹ್ಲಿ ಹೇಳಿದ್ದಾರೆ.

ಇಂಗ್ಲೆಂಡ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 11 ವಿಕೆಟ್ ಪಡೆದಿರುವ ಕುಲದೀಪ್, ಟೆಸ್ಟ್ ತಂಡದಲ್ಲಿನ ಇಬ್ಬರು ಸ್ಪಿನ್ನರ್‌ಗಳ ಆಯ್ಕೆಗೆ ಪ್ರಮುಖ ಸ್ಪರ್ಧಾಳುವಾಗಿದ್ದಾರೆ.

ಇದವರೆಗೆ ಎರಡು ಟೆಸ್ಟ್ ಆಡಿರುವ ಕುಲದೀಪ್, ಒಟ್ಟು 9 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ರವೀಂದ್ರ ಜಡೇಜಾ ಅವರ ಬದಲು ಕುಲದೀಪ್ ಯಾದವ್‌ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.

Story first published: Friday, July 13, 2018, 16:26 [IST]
Other articles published on Jul 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X