ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ 'ಮ್ಯಾನ್‌ ಆಫ್‌ ದಿ ಟೂರ್ನಮೆಂಟ್' ಪ್ರಶಸ್ತಿ ಪಡೆದವರು ಇವರೆ : ಕೊಹ್ಲಿ ದಾಖಲೆ ಅಮೋಘ

ಟಿ20 ವಿಶ್ವಕಪ್ ಕ್ರಿಕೆಟ್ ಆಟದ ಪ್ರಮುಖ ಟೂರ್ನಿಗಳಲ್ಲಿ ಒಂದಾಗಿದೆ. ಐಸಿಸಿ ಟೂರ್ನಿಯಲ್ಲಿ ತನ್ನ ದೇಶವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬ ಆಟಗಾರನ ಕನಸು. ಆದರೆ ಎಲ್ಲರಿಗೂ ಆ ಅವಕಾಶ ಸಿಗುವುದಿಲ್ಲ. ಇನ್ನೂ, ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ದಾಖಲೆ ಬರೆದ ಹಲವು ಆಟಗಾರರು ಇದ್ದಾರೆ.

ಒಂದು ಆವೃತ್ತಿಯಲ್ಲಿ ಒಟ್ಟು 200 ಆಟಗಾರರು ಭಾಗವಹಿಸುತ್ತಾರೆ, ಆದರೆ ಒಬ್ಬ ಆಟಗಾರ ಮಾತ್ರ ನಂಬರ್ 1 ಆಗಲು ಸಾಧ್ಯ, ಆ ಆಟಗಾರ ತನ್ನ ತಂಡವು ಪ್ರತಿಯೊಂದು ಪಂದ್ಯದಲ್ಲೂ ಪ್ರದರ್ಶನ ನೀಡಲು ಸಹಾಯ ಮಾಡುತ್ತಾನೆ. ಇದುವರೆಗೂ 7 ವಿಶ್ವಕಪ್ ಟೂರ್ನಿ ನಡೆದಿವೆ. ಪ್ರತಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮ್ಯಾನ್‌ ಆಫ್‌ ದಿ ಟೂರ್ನಮೆಂಟ್ ಪ್ರದರ್ಶನ ನೀಡಿದವರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

T20 World Cup 2022: 15 ಸದಸ್ಯರ ತಂಡವನ್ನು ಪ್ರಕಟಿಸಿದ ಏಷ್ಯಾಕಪ್‌ ವಿಜೇತ ಶ್ರೀಲಂಕಾ ತಂಡT20 World Cup 2022: 15 ಸದಸ್ಯರ ತಂಡವನ್ನು ಪ್ರಕಟಿಸಿದ ಏಷ್ಯಾಕಪ್‌ ವಿಜೇತ ಶ್ರೀಲಂಕಾ ತಂಡ

2007ರಲ್ಲಿ ಮೊದಲನೇ ಟಿ20 ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು. ಚೊಚ್ಚಲ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತು. ಮೊದಲನೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಶ್ರೇಷ್ಠ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮ್ಯಾನ್‌ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದರು.

 ಮೊದಲನೇ ವಿಶ್ವಕಪ್‌ನಲ್ಲಿ ಆಲ್‌ರೌಂಡರ್ ಅಫ್ರಿದಿ ಮ್ಯಾಜಿಕ್

ಮೊದಲನೇ ವಿಶ್ವಕಪ್‌ನಲ್ಲಿ ಆಲ್‌ರೌಂಡರ್ ಅಫ್ರಿದಿ ಮ್ಯಾಜಿಕ್

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟಿ20 ವಿಶ್ವಕಪ್‌ನ ಮೊದಲ ಆವೃತ್ತಿ ನಡೆದಿತ್ತು. ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಡಿದವು ಮತ್ತು ರೋಚಕ ಪಂದ್ಯದಲ್ಲಿ ಭಾರತವು ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಟೂರ್ನಿಯಲ್ಲಿ ಉದ್ದಕ್ಕೂ ತಮ್ಮ ಅಸಾಧಾರಣ ಪ್ರದರ್ಶನಕ್ಕಾಗಿ "ಮ್ಯಾನ್ ಆಫ್ ದಿ ಟೂರ್ನಮೆಂಟ್" ಪ್ರಶಸ್ತಿಯನ್ನು ಗೆದ್ದರು. ಅವರು 15.66 ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಪಡೆದರು ಮತ್ತು ಟಿ20 ವಿಶ್ವಕಪ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿದ್ದರು. ಅವರು ಬ್ಯಾಟ್‌ನೊಂದಿಗೆ 91 ರನ್ ಗಳಿಸಿದರು.

ಆಸ್ಟ್ರೇಲಿಯಾ ಆಟಗಾರರು ಸಚಿನ್‌ರನ್ನು ಕೆಣಕಲು ಹೆದರುತ್ತಿದ್ದರು: ಬ್ರೆಟ್‌ ಲೀ

 ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ದಿಲ್ಶಾನ್

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ದಿಲ್ಶಾನ್

ಮೊದಲನೇ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ನಲ್ಲಿ ಸೋತು ರನ್ನರ್ ಅಪ್‌ ಆಗಿದ್ದ ಪಾಕಿಸ್ತಾನ, 2009 ರ ಎರಡನೇ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಲ್ಲದೆ, ಚಾಂಪಿಯನ್ ಆಗಿ ಮೆರೆಯಿತು. ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆದಿತ್ತು.

ಶ್ರೀಲಂಕಾದ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶಾನ್ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ಪಂದ್ಯಾವಳಿಯ ಅತ್ಯುತ್ತಮ ಬ್ಯಾಟರ್ ಆಗಿದ್ದ ದಿಲ್ಶಾನ್ ಏಳು ಪಂದ್ಯಗಳಲ್ಲಿ ಮೂರು ಅರ್ಧಶತಕ ಸೇರಿದಂತೆ 317 ರನ್ ಗಳಿಸಿದರು. ಶ್ರೀಲಂಕಾ ಫೈನಲ್ ಪ್ರವೇಶಿಸಲು ದಿಲ್ಶಾನ್ ಸಹಾಯ ಮಾಡಿದ್ದರು.

 ಇಂಗ್ಲೆಂಡ್ ಕಪ್ ಗೆಲ್ಲಲು ಕೊಡುಗೆ ನೀಡಿದ ಕೆವಿನ್ ಪೀಟರ್ಸನ್

ಇಂಗ್ಲೆಂಡ್ ಕಪ್ ಗೆಲ್ಲಲು ಕೊಡುಗೆ ನೀಡಿದ ಕೆವಿನ್ ಪೀಟರ್ಸನ್

2010 ರಲ್ಲಿ ಇಂಗ್ಲೆಂಡ್ ತನ್ನ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಅದು ಕೂಡ ಟಿ20 ವಿಶ್ವ ಚಾಂಪಿಯನ್‌ಶಿಪ್. ಒಬ್ಬ ವ್ಯಕ್ತಿ ಇಂಗ್ಲಿಷ್ ತಂಡವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರು, ಅವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರು.

ಕೆವಿನ್ ಪೀಟರ್ಸನ್ ಪಂದ್ಯಾವಳಿಲ್ಲಿ ಅತಿ ಹೆಚ್ಚು ರನ್-ಸ್ಕೋರರ್ ಆಗಿ ಕೊನೆಗೊಳಿಸಿದರು ಮತ್ತು ಕ್ರಮವಾಗಿ 62 ರನ್ ಸರಾಸರಿ ಮತ್ತು 137.77 ಸ್ಟ್ರೈಕ್ ರೇಟ್‌ನಲ್ಲಿ 248 ರನ್‌ ಗಳಿಸಿ "ಮ್ಯಾನ್ ಆಫ್ ದಿ ಟೂರ್ನಮೆಂಟ್" ಪ್ರಶಸ್ತಿಯನ್ನು ಗೆದ್ದರು.

 ಶೇನ್‌ ವ್ಯಾಟ್ಸನ್ ಆಲ್‌ರೌಂಡರ್ ಆಟ

ಶೇನ್‌ ವ್ಯಾಟ್ಸನ್ ಆಲ್‌ರೌಂಡರ್ ಆಟ

2012ರಲ್ಲಿ ಶ್ರೀಲಂಕಾದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಆಯಿತು. ಆದರೆ ತನ್ನ ಪ್ರದರ್ಶನದಿಂದ ಆಟವನ್ನು ಸಂಪೂರ್ಣವಾಗಿ ಬದಲಾಯಿಸಿದ ವ್ಯಕ್ತಿ ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವ್ಯಾಟ್ಸನ್.

2012ರ ವಿಶ್ವಕಪ್‌ನ ಅತ್ಯಂತ ಪ್ರಭಾವಶಾಲಿ ಆಟಗಾರರಾಗಿದ್ದರು. ವ್ಯಾಟ್ಸನ್ 49.80 ರ ಸರಾಸರಿಯಲ್ಲಿ 249 ರನ್ ಗಳಿಸಿದರು ಮತ್ತು ಆರು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಅವರು 7.33 ರ ಎಕಾನಮಿಯಲ್ಲಿ 11 ವಿಕೆಟ್‌ಗಳನ್ನು ಪಡೆದರು. ತಮ್ಮ ಉತ್ತಮ ಪ್ರದರ್ಶನಕ್ಕಾಗಿ "ಮ್ಯಾನ್ ಆಫ್ ದಿ ಟೂರ್ನಮೆಂಟ್" ಪ್ರಶಸ್ತಿಯನ್ನು ಗೆದ್ದರು.

 ವಿಶ್ವಕಪ್‌ನಲ್ಲಿ ಕಿಂಗ್‌ ಕೊಹ್ಲಿ ಅಬ್ಬರ

ವಿಶ್ವಕಪ್‌ನಲ್ಲಿ ಕಿಂಗ್‌ ಕೊಹ್ಲಿ ಅಬ್ಬರ

ಭಾರತದ ಮಾಜಿ ನಾಯಕ, ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿ ಉತ್ತಮ ದಾಖಲೆ ಮಾಡಿದ್ದಾರೆ, 2016 ರ ಋತುವಿನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದರು ಮತ್ತು 2014 ರಲ್ಲಿ "ಮ್ಯಾನ್ ಆಫ್ ದಿ ಟೂರ್ನಮೆಂಟ್" ಪ್ರಶಸ್ತಿಯನ್ನು ಗೆದ್ದರು. ಕೊಹ್ಲಿ ಆರು ಪಂದ್ಯಗಳಲ್ಲಿ 106.33 ಸರಾಸರಿ ಮತ್ತು 129.14 ಸ್ಟ್ರೈಕ್ ರೇಟ್‌ನಲ್ಲಿ 4 ಅರ್ಧಶತಕ ಸಹಿತ 319 ರನ್ ಗಳಿಸಿದರು.

2014ರ ನಂತರ 2016ರ ವಿಶ್ವಕಪ್‌ ಪಂದ್ಯಾವಳಿಯಲ್ಲು ಕೊಹ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಸತತ ಆವೃತ್ತಿಗಳಲ್ಲಿ ಇರಲಿ, ಎರಡು ಬಾರಿ "ಮ್ಯಾನ್ ಆಫ್ ದಿ ಟೂರ್ನಮೆಂಟ್" ಪ್ರಶಸ್ತಿಯನ್ನು ಗೆದ್ದಿಲ್ಲ. 2016 ರಲ್ಲಿ, 136.50 ಸರಾಸರಿಯಲ್ಲಿ ಮೂರು ಅರ್ಧ ಶತಕಗಳನ್ನು ಒಳಗೊಂಡಂತೆ 273 ರನ್ ಗಳಿಸಿದರು. ಎರಡನೇ ಬಾರಿ ಮ್ಯಾನ್ ಆಫ್‌ ದಿ ಟೂರ್ನಮೆಂಟ್ ಪ್ರಶಸ್ತಿ ಗಳಿಸಿದರು

 ಡೇವಿಡ್ ವಾರ್ನರ್ ಅತ್ಯುತ್ತಮ ಬ್ಯಾಟಿಂಗ್

ಡೇವಿಡ್ ವಾರ್ನರ್ ಅತ್ಯುತ್ತಮ ಬ್ಯಾಟಿಂಗ್

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಯುಎಇಯಲ್ಲಿ ಕಳೆದ ಆವೃತ್ತಿಯಲ್ಲಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರನ್ನು ಹೊಂದಿತ್ತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅತ್ಯುತ್ತಮ ಪ್ರದರ್ಶಣ ನೀಡಿದರು.

ವಿಶ್ವಕಪ್ ಆರಂಭಕ್ಕೂ ಮುನ್ನ ಫಾರ್ಮ್ ಕಳೆದುಕೊಂಡಿದ್ದ ಡೇವಿಡ್ ವಾರ್ನರ್ ಟಿ20 ವಿಶ್ವಕಪ್‌ನಲ್ಲಿ ಫಾರ್ಮ್‌ಗೆ ಮರಳಿದರು. ಇಡೀ ಪಂದ್ಯಾವಳಿಯಲ್ಲಿ ಅತ್ಯಂತ ಪ್ರಭಾವಶಾಲಿ ಆಟಗಾರರಾಗಿದ್ದರು. ಏಳು ಪಂದ್ಯಗಳಲ್ಲಿ 48.16 ಸರಾಸರಿಯಲ್ಲಿ ಮತ್ತು 146.70 ಸ್ಟ್ರೈಕ್ ರೇಟ್‌ನಲ್ಲಿ 289 ರನ್‌ಗಳೊಂದಿಗೆ "ಮ್ಯಾನ್ ಆಫ್ ದಿ ಟೂರ್ನಮೆಂಟ್" ಪ್ರಶಸ್ತಿಯನ್ನು ಗೆದ್ದರು.

Story first published: Saturday, September 17, 2022, 10:58 [IST]
Other articles published on Sep 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X