ಟಿ20: ಭರ್ಜರಿ ಶತಕ ಬಾರಿಸಿ ದಾಖಲೆ ಬರೆದ ಗಪ್ಟಿಲ್

Posted By:
Martin Guptill breaks world record with stunning century

ಈಡೆನ್ ಪಾರ್ಕ್, ಫೆಬ್ರವರಿ 16: ನ್ಯೂಜಿಲೆಂಡ್ ಆಟಗಾರ ಮಾರ್ಟಿನ್ ಗಪ್ಟಿಲ್ ಅವರು ಶುಕ್ರವಾರದಂದು ಆಸ್ಟ್ರೇಲಿಯಾ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಗಪ್ಟಿಲ್ ಅವರು 54 ಎಸೆತಗಳಲ್ಲಿ 105ರನ್ ಬಾರಿಸುವ ಮೂಲಕ ಟಿ20ಯಲ್ಲಿ ವೈಯಕ್ತಿಕ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ ಅವರು ಇಲ್ಲಿ ತನಕ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು.

ಈಗ ಗಪ್ಟಿಲ್ ಅವರು 2,188ರನ್ ಗಳಿಸಿದ್ದಾರೆ. 2016ರಲ್ಲಿ ಕ್ರಿಕೆಟ್ ನಿಂದ ನಿವೃತ್ತರಾದ ಬ್ರೆಂಡನ್ ಮೆಕಲಮ್ ಅವರು 2,140ರನ್ ಗಳಿಸಿದ್ದರು. ಭಾರತದ ನಾಯಕ ವಿರಾಟ್ ಕೊಹ್ಲಿ ಅವರು 1,956ರನ್ ಗಳಿಸಿದ್ದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಅತ್ಯಧಿಕ ರನ್ ಗಳಿಕೆ ಆಟಗಾರ ಎನಿಸಿಕೊಂಡಿದ್ದಲ್ಲದೆ ಗಪ್ಟಿಲ್ ಅವರು 49 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ, ತ್ವರಿತಗತಿಯಲ್ಲಿ ಶತಕ ಗಳಿಸಿದ ನ್ಯೂಜಿಲೆಂಡ್ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಮೆಕಲಮ್ ಅವರು 2010ರಲ್ಲಿ ಕ್ರೈಸ್ಟ್ ಚರ್ಚ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೈ ಆದ ಪಂದ್ಯದಲ್ಲಿ 50 ಎಸೆತಗಳಲ್ಲಿ ನೂರು ರನ್ ಗಡಿ ದಾಟಿದ್ದರು.

Story first published: Friday, February 16, 2018, 18:49 [IST]
Other articles published on Feb 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ