ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಏಷ್ಯಾಕಪ್ ಟ್ರೋಫಿ ನನಗೆ ಹಿಡಿಯಲು ಬಿಡುವಂತೆ ರೋಹಿತ್ ಗೆ ಧೋನಿ ಹೇಳಿದ್ರು'

MS Dhoni asked Rohit Sharma to let me hold Asia Cup trophy, reveals Khaleel

ನವದೆಹಲಿ, ಅಕ್ಟೋಬರ್ 9: ಏಷ್ಯಾ ಕಪ್ 2018ರ ಚಾಂಪಿಯನ್ ತಂಡವಾಗಿ ಭಾರತ ಹೊರಹೊಮ್ಮಿದ್ದಾಗ ಟ್ರೋಫಿಯನ್ನು ನನಗೆ ಹಿಡಿಯಲು ಬಿಡುವಂತೆ ಮಹೇಂದ್ರ ಸಿಂಗ್ ಧೋನಿ ಅವರು ರೋಹಿತ್ ಶರ್ಮಾ ಅವರಿಗೆ ಹೇಳಿದ್ದರು ಎಂದು ಯುವ ಆಟಗಾರ ಖಲೀಲ್ ಅಹ್ಮದ್ ಹೇಳಿದ್ದಾರೆ.

ಐಸಿಸಿ ಶ್ರೇಯಾಂಕ: ಅಗ್ರಸ್ಥಾನ ಉಳಿಸಿಕೊಂಡ ಕೊಹ್ಲಿ, ಬೂಮ್ರಾಐಸಿಸಿ ಶ್ರೇಯಾಂಕ: ಅಗ್ರಸ್ಥಾನ ಉಳಿಸಿಕೊಂಡ ಕೊಹ್ಲಿ, ಬೂಮ್ರಾ

ಈ ಬಾರಿಯ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ವೇಳೆ ಭಾರತ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ವಹಿಸಿದ್ದರು. ಫೈನಲ್ ನಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧ 3 ವಿಕೆಟ್ ಜಯ ಸಾಧಿಸುವ ಮೂಲಕ ಏಳನೇ ಬಾರಿಗೆ ಏಷ್ಯಾ ಕಪ್ ಜಯಿಸಿತ್ತು.

ಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲ

ದೇಸಿ ಕ್ರಿಕೆಟ್, ಪ್ರಥಮದರ್ಜೆ ಮತ್ತು ಐಪಿಎಲ್ ನಲ್ಲಿ ಆಡಿದ ಅನುಭವವಿದ್ದ ಖಲೀಲ್ ಅಹ್ಮದ್ ಅವರು ಏಷ್ಯಾ ಕಪ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಹೀಗಾಗಿ ಪ್ರಶಸ್ತಿ ವಿತರಣೆ ವೇಳೆ ಖಲೀಲ್ ಅಪೂರ್ವ ಕ್ಷಣವೊಂದಕ್ಕೆ ಸಾಕ್ಷಿಯಾಗಿದ್ದರು.

ಸ್ಫೂರ್ತಿ ತುಂಬಿದ ಧೋನಿ

ಸ್ಫೂರ್ತಿ ತುಂಬಿದ ಧೋನಿ

ಏಷ್ಯಾ ಕಪ್ 2018ರ ಮೂಲಕ ಖಲೀಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರಿಂದ ಟ್ರೋಫಿ ಗೆದ್ದ ಸಂಭ್ರಮ ಯುವ ಆಟಗಾರನ ಅನುಭವಕ್ಕೆ ಸಿಗಲಿ ಎಂಬ ಕಾರಣಕ್ಕೆ ಪ್ರಶಸ್ತಿ ವಿತರಣೆ ವೇಳೆ ಧೋನಿ ಅವರು ರೋಹಿತ್ ಅವರಲ್ಲಿ 'ಖಲೀಲ್ ಟ್ರೋಫಿ ಹಿಡಿದುಕೊಳ್ಳಲಿ' ಎಂದು ಹೇಳುವ ಮೂಲಕ ಸ್ಫೂರ್ತಿ ತುಂಬಿದ್ದರು. ಇದನ್ನು ಖಲೀಲ್ ನೆನಪಿಸಿಕೊಂಡರು.

ರೋಚಕ ಫೈನಲ್ ಹಣಾಹಣಿ

ರೋಚಕ ಫೈನಲ್ ಹಣಾಹಣಿ

2018ರ ಏಷ್ಯಾ ಕಪ್ ಫೈನಲ್ ಪಂದ್ಯ ಸಾಕಷ್ಟು ರೋಚಕ ಎನಿಸಿತ್ತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ 48.3 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 222 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ಭಾರತ ಕೂಡ ಬೇಗನೆ ವಿಕೆಟ್ ಕಳೆದುಕೊಳ್ಳುತ್ತ ಬಂದಿತ್ತು. ಪಂದ್ಯ ಬಾಲ್ ಟು ಬಾಲ್ ಗೆ ಬಂದಿತ್ತಾದರೂ ಅಂತಿಮ ವಾಗಿ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದು 223 ರನ್ ಪೇರಿಸಿ ರೋಚಕ ರೀತಿಯಲ್ಲಿ ಗೆಲುವನ್ನಾಚರಿಸಿತ್ತು.

ಖಲೀಲ್ ಕೈ ಸೇರಿದ್ದ ಟ್ರೋಫಿ

ಖಲೀಲ್ ಕೈ ಸೇರಿದ್ದ ಟ್ರೋಫಿ

ಏಷ್ಯಾ ಕಪ್ ವಿಜೇತ ಭಾರತ ತಂಡಕ್ಕೆ ಟ್ರೋಫಿ ವಿತರಿಸುವಾಗ ನಾಯಕ ರೋಹಿತ್ ಶರ್ಮ ಟ್ರೋಫಿ ಈಸಿಕೊಂಡರು. ಮರುಕ್ಷಣವೇ ಮುಂಬೈ ಆಟಗಾರ ರೋಹಿತ್, ಟ್ರೋಫಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವ ಆಟಗಾರ ಅಹ್ಮದ್ ಕೈಗೆ ಹಸ್ತಾಂತರಿಸಿದ್ದರು.

ಅವಿಸ್ಮರಣೀಯ ಅನುಭವ

ಅವಿಸ್ಮರಣೀಯ ಅನುಭವ

'ಟ್ರೋಫಿ ನನ್ನ ಕೈಗೆ ನೀಡುವಂತೆ ಧೋನಿ ಭಾಯಿ ರೋಹಿತ್ ಭಾಯಿ ಅವರಲ್ಲಿ ಹೇಳಿದರು. ಸರಣಿಯಲ್ಲಿ ಪಾದಾರ್ಪಣೆ ಮಾಡಿದ್ದ ಯುವ ಆಟಗಾರ ನಾನಾಗಿದ್ದರಿಂದ ರೋಹಿತ್ ಕೂಡ ಮರುಕ್ಷಣವೇ ಟ್ರೋಫಿ ನನ್ನ ಕೈಗಿತ್ತರು. ನನ್ನ ಪಾಲಿಗೆ ಅದೊಂದು ಅಪೂರ್ವ ಅನುಭವ' ಎಂದು ಖಲೀಲ್ ಹೇಳಿದ್ದಾರೆ.

ನನಗೆ ಮಾತೇ ಬರಲಿಲ್ಲ

ನನಗೆ ಮಾತೇ ಬರಲಿಲ್ಲ

'ವಿಜೇತ ಟ್ರೋಫಿಯನ್ನು ನನಗೆ ಹಿಡಿದುಕೊಳ್ಳಲು ಧೋನಿ, ರೋಹಿತ್ ಗೆ ಹೇಳಿದ್ದು ನೋಡುವಾಗ ನನಗಂತೂ ಮಾತೇ ಬರಲಿಲ್ಲ. ಅಷ್ಟರಮಟ್ಟಿಗೆ ಭಾವುಕನಾಗಿದ್ದ ಕ್ಷಣವದು. ನಾನದನ್ನು ಯಾವತ್ತಿಗೂ ಮರೆಯಲಾರೆ' ಎಂದು ಖಲೀಲ್ ಖುಷಿಯ ಕ್ಷಣವನ್ನು ಸ್ಮರಿಸಿಕೊಂಡರು. (ಚಿತ್ರ ಕೃಪೆ: Cricadium)

Story first published: Tuesday, October 9, 2018, 17:57 [IST]
Other articles published on Oct 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X