ಯುಕೆ ಪ್ರವಾಸದ ಬಳಿಕ ಕಿವೀಸ್ ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್ ನಿವೃತ್ತಿ

ಆಕ್ಲೆಂಡ್: ಇಂಗ್ಲೆಂಡ್ ಪ್ರವಾಸದ ಬಳಿಕ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ. ಈ ವಿಚಾರವನ್ನು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ (NZC) ಮಂಗಳವಾರ ತಿಳಿಸಿದೆ.

ಶ್ರೀಲಂಕಾ ಪ್ರವಾಸ ಸರಣಿಗೆ ಭಾರತಕ್ಕೆ ಶಿಖರ್ ಧವನ್ ನಾಯಕ?!

ನ್ಯೂಜಿಲೆಂಡ್ ಪರ ಆರಂಭಿಕರಾಗಿ ಆಡುತ್ತಿದ್ದ 35ರ ಹರೆಯದ ಬಿಜೆ ವಾಟ್ಲಿಂಗ್‌, 2009ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದರಾದರೂ ಆ ಬಳಿಕ ವಿಶ್ವಶ್ರೇಷ್ಠ ವಿಕೆಟ್‌ ಕೀಪರ್‌ಗಳಲ್ಲಿ ಒಬ್ಬರಾಗಿ ಹೆಚ್ಚು ಗುರುತಿಸಿಕೊಂಡಿದ್ದರು.

ನ್ಯೂಜಿಲೆಂಡ್ ಕ್ರಿಕೆಟ್ ತಂಡ ಶುಕ್ರವಾರ (ಮೇ 14) 2021-22ನೇ ಸಾಲಿನ ಆಟಗಾರರ ಒಪ್ಪಂದದ ಪಟ್ಟಿ ಪ್ರಕಟಿಸಲಿದೆ. ಇದರಲ್ಲಿ ವಾಟ್ಲಿಂಗ್‌ ಹೆಸರಿರುವ ಸಾಧ್ಯತೆಯಿಲ್ಲ. ಯಾಕೆಂದರೆ ಈಗಾಗಲೇ ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಬಯಸಿರುವುದಾಗಿ ವಾಟ್ಲಿಂಗ್ ಹೇಳಿಕೊಂಡಿದ್ದಾರೆ.

ಚಹಾಲ್‌ಗಿಂತ ಮೊಹಮ್ಮದ್ ಸಿರಾಜ್ ಉತ್ತಮ ಬೌಲರ್ ಎನ್ನುತ್ತಿವೆ ಈ ಅಂಕಿಅಂಶಗಳು

ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ವಾಟ್ಲಿಂಗ್, 73 ಟೆಸ್ಟ್‌ ಪಂದ್ಯಗಳಲ್ಲಿ 3773 ರನ್, 8 ಶತಕ, 19 ಅರ್ಧ ಶತಕ, 1 ದ್ವಿಶತಕ ಬಾರಿಸಿದ್ದರು. ಇನ್ನು 28 ಏಕದಿನ ಪಂದ್ಯಗಳಲ್ಲಿ 573 ರನ್, 5 ಟಿ020ಐ ಪಂದ್ಯಗಳಲ್ಲಿ 38 ರನ್ ಬಾರಿಸಿದ್ದಾರೆ. 2009ರಲ್ಲಿ ವಾಟ್ಲಿಂಗ್‌ ಪಾಕಿಸ್ತಾನ್ ವಿರುದ್ಧ ಟೆಸ್ಟ್‌ ಕ್ರಿಕೆಟ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Tuesday, May 11, 2021, 23:43 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X