ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಸಿತ್‌ ಮಾಲಿಂಗ ಸ್ಥಾನ ತುಂಬಲು ಬಂದ ಛೋಟಾ ಮಾಲಿಂಗ! ವಿಡಿಯೊ

Nuwan Thushara, the Carbon Copy of Lasith Malinga

ಬೆಂಗಳೂರು, ಜುಲೈ 31: ಸಂಕಷ್ಟ ಸ್ಥಿತಿಯಲ್ಲೂ ತಂಡಕ್ಕೆ ಜಯ ತಂದುಕೊಡಬಲ್ಲ ಬೌಲರ್‌ ಎಂದರೆ ಅದು ಲಸಿತ್‌ ಮಾಲಿಂಗ. ಶ್ರೀಲಂಕಾದ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮಾಲಿಂಗ ತಮ್ಮ ಸ್ಲಿಂಗ್‌ ಬೌಲಿಂಗ್‌ ಶೈಲಿಯಿಂದಲೇ ಜನಪ್ರಿಯತೆ ಗಿಟ್ಟಿಸಿದವರು.

ಅಷ್ಟೇ ಅಲ್ಲದೆ ತಮ್ಮ ಅಪಾಯಕಾರಿ ಯಾರ್ಕರ್‌ಗಳ ಮೂಲಕ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಿದ ಬೌಲರ್‌. ಎರಡು ತಿಂಗಳ ಹಿಂದಷ್ಟೇ ನಡೆದ 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲೂ ಮಾಲಿಂಗ ತಮ್ಮ ಭರ್ಜರಿ ಬೌಲಿಂಗ್‌ ಮೂಲಕ ಮುಂಬೈ ಇಂಡಿಯನ್ಸ್‌ ತಂಡಕ್ಕೆ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಟೀಮ್‌ ಇಂಡಿಯಾದ ಯಂಗ್‌ ಬ್ಯಾಟ್ಸ್‌ಮನ್‌ ಬ್ಯಾನ್‌ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಟೀಮ್‌ ಇಂಡಿಯಾದ ಯಂಗ್‌ ಬ್ಯಾಟ್ಸ್‌ಮನ್‌ ಬ್ಯಾನ್‌

ಅಂದಹಾಗೆ ಲಸಿತ್‌ ಇದೀಗ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿಯಾಗಿದೆ. ಇತ್ತೀಚೆಗಷ್ಟೇ ನಡೆದ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಮಾಲಿಂಗ ಮೊದಲ ಪಂದ್ಯವನ್ನಾಡಿ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದರು. ಮೊದಲೇ ಶ್ರೀಲಂಕಾ ತಂಡ ಪ್ರದರ್ಶನದ ಮಟ್ಟ ಹಳ್ಳ ಹಿಡಿದಿದೆ. ಇದೀಗ ಮಾಲಿಂಗ ಕೂಡ ನಿವೃತ್ತಿ ಘೋಷಿಸಿರುವಾಗ ಶ್ರೀಲಂಕಾ ತಂಡದ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬುವವರು ಯಾರು? ಎಂಬೆಲ್ಲಾ ಪ್ರಶ್ನೆ ಕಾಡುತ್ತಿದೆ.

ಇದಕ್ಕೆ ಉತ್ತರವಾಗಿ ಯುವ ವೇಗದ ಬೌಲರ್‌ ನುವಾನ್‌ ತುಶಾರಾ ಹೊರಹೊಮ್ಮುತ್ತಿದ್ದಾರೆ. ಲಸಿತ್‌ ಮಾಲಿಂಗ ಅವರ ರೀತಿಯಲ್ಲೇ ಸ್ಲಿಂಗ್‌ ರೌಂಡ್‌ ಆರ್ಮ್‌ ಬೌಲಿಂಗ್‌ ಶೈಲಿಯನ್ನು ಹೊಂದಿರುವ ನುವಾನ್‌, ಕೊಲಂಬೊದಲ್ಲಿ ಪೊಡಿ (ಛೋಟಾ/ ಲಿಟ್ಲ್‌/ ಸ್ಮಾಲ್‌) ಮಾಲಿಂಗ ಎಂದೇ ಖ್ಯಾತಿ ಪಡೆದಿದ್ದಾರೆ. ಮಾಲಿಂಗ ಅವರ ರೀತಿಯಲ್ಲೇ ನಿಖರವಾಗಿ ಬೌಲಿಂಗ್‌ ಮಾಡುವ ಸಾಮರ್ಥ್ಯ ನುವಾನ್‌ ಅವರದ್ದು. ಜೊತೆಗೆ ನೋಡಲು ಕೂಡ ಗುಂಗುರು ಕೂದಲು ಮತ್ತು ದಟ್ಟ ಹುಬ್ಬಿನೊಂದಿಗೆ ಲಸಿತ್‌ ಅವರನ್ನೇ ಹೋಲುತ್ತಾರೆ ಕೂಡ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ

24 ವರ್ಷದ ಯುವ ವೇಗದ ಬೌಲರ್‌ ನುವಾನ್‌, ಈಗಾಗಲೇ 5ನ ಪ್ರಥಮದರ್ಜೆ ಕ್ರಿಕೆಟ್‌ ಪಂದ್ಯಗಳನ್ನಾಡಿದ್ದಾರೆ. ಲಿಸ್ಟ್‌ 'ಎ'ನಲ್ಲಿ 10 ಪಂದ್ಯಗಳು ಮತ್ತು ಒಟ್ಟು 14 ಟಿ20 ಪಂದ್ಯಗಳಲ್ಲೂ ತಮ್ಮ ಬೌಲಿಂಗ್‌ ಪರಾಕ್ರಮವನ್ನು ಅನಾವರಣ ಪಡಿಸಿ ಒಟ್ಟಾರೆ 35 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂದಹಾಗೆ ತುಶಾರ ಹೇಳುವಂತೆ, ಅವರು ಎಂದಿಗೂ ಮಾಲಿಂಗ ಅವರ ಬೌಲಿಂಗ್‌ ಶೈಲಿಯನ್ನು ಅನುಕರಿಸಿಲ್ಲ. ಬದಲಾಗಿ ಸ್ವಾಭಾವಿಕವಾಗಿಯೇ ಅವರಿಗೆ ಈ ರೀತಿಯ ಬೌಲಿಂಗ್‌ ಶೈಲಿ ಕರಗತವಾಗಿದೆಯಂತೆ.

"ಟೆನಿಸ್‌ ಬಾಲ್‌ನಲ್ಲಿ ಆಡುತ್ತಿದ್ದೆ. ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ ಆಡುತ್ತಿದ್ದ ನನ್ನ ಸ್ನೇಹಿತನೊಬ್ಬ ನನ್ನನ್ನು ಕೊಲೊಂಬೊಗೆ ಕರೆತಂದ. ಅಲ್ಲಿ ಮೊದಲಿಗೆ ಸಿಂಹಳೀಸ್‌ ಸ್ಪೋರ್ಟ್ಸ್‌ ಕ್ಲಬ್‌ ಪರ ಆಡಿ ಬಳಿಕ ಕೊಲಂಬೊ ಕ್ರಿಕೆಟ್‌ ಕ್ಲಬ್‌ ಸೇರಿದೆ. ಜನರೆಲ್ಲಾ ನಾನು ಮಾಲಿಂಗ ಬೌಲಿಂಗ್‌ ಶೈಲಿಯನ್ನು ಅನುಕರಿಸಿದ್ದೇನೆ ಎಂದರು. ಆದರೆ, ಇದು ನನಗೆ ಸ್ವಾಭಾವಿಕವಾಗಿ ಕರಗತವಾಗಿರುವ ಶೈಲಿ. ಚಿಕ್ಕವನಾಗಿದ್ದಾಗಿಂದಲೂ ಇದೇ ರೀತಿ ಬೌಲಿಂಗ್‌ ಮಾಡಿದ್ದೇನೆ," ಎಂದು ನುವಾನ್‌ ತುಶಾರ ಹೇಳಿದ್ದಾರೆ.

 ತಂದೆ ಕೂಲಿ ಕೆಲಸಗಾರ

ತಂದೆ ಕೂಲಿ ಕೆಲಸಗಾರ

ಆರಂಭದಲ್ಲಿ ಗಲ್ಲಿ ಕ್ರಿಕೆಟ್‌ ಆಡುತ್ತಿದ್ದ ನುವಾನ್‌ ತುಶಾರ ಅವರಿಗೆ ಹಲವರು ವೃತ್ತಿಪರ ಹಾಗೂ ಲೆದರ್‌ ಬಾಲ್‌ ಕ್ರಿಕೆಟ್‌ ಆಡುವಂತೆ ಹಲವರು ಪ್ರೋತ್ಸಾಹಿಸಿದರೂ ಕೌಟುಂಬಿಕ ಕಾರಣಗಳಿಂದಾಗಿ ಮುಂದುವರಿಯದೇ ಹೋದರು. "ಜನರೆಲ್ಲಾ ನಾನು ಲೆದರ್‌ ಬಾಲ್‌ ಕ್ರಿಕೆಟ್‌ ಆಡಬೇಕೆಂದು ಹೇಳುತ್ತಿದ್ದರು. ಆದರೆ, ಲೆದರ್‌ ಬಾಲ್‌ ಕ್ರಿಕೆಟ್‌ ಆಡಲು ಏನು ಮಾಡಬೇಕು ಎಲ್ಲಿ ಹೇಗಬೇಕು ಎಂಬುದೇ ನನಗೆ ಗೊತ್ತಿರಲಿಲ್ಲ. ನಮ್ಮದು ಬಡ ಕುಟುಂಬ ತಂದೆ ಕಟ್ಟಡ ಕಟ್ಟುವ ಸ್ಥಳಗಳಲ್ಲಿ ಕೂಲಿ ಮಾಡುತ್ತಿದ್ದರು. ಹೀಗಾಗಿ ಕ್ರಿಕೆಟ್‌ ಆಟವನ್ನು ವತ್ತಿಪರವಾಗಿ ಆಡುವುದು ನನಗೆ ದೂರದ ಮಾತಾಗಿತ್ತು," ಎಂದು ನುವಾನ್‌ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಯಾರ್ಕರ್‌ ಕಲಿಸಿಕೊಟ್ಟ ಮಾಲಿಂಗ

ಯಾರ್ಕರ್‌ ಕಲಿಸಿಕೊಟ್ಟ ಮಾಲಿಂಗ

ಅಂದಹಾಗೆ ಛೋಟಾ ಮಾಲಿಂಗಾಗೆ ಯಾರ್ಕರ್‌ ಎಸೆಯುವುದನ್ನು ಹೇಳಿಕೊಟ್ಟಿರುವುದು ಲಸಿತ್‌ ಮಾಲಿಂಗ ಎಂಬುದು ವಿಶೇಷ. ವೃತ್ತಿ ಪರ ಕ್ರಿಕೆಟ್‌ ಆಡಲು ಆರಂಭಿಸಿದ ನುವಾನ್‌ಗೆ ಲಸಿತ್‌ ಅವರನ್ನು ಭೇಟಿ ಮಾಡುವ ಅವಕಾಶ ಲಭ್ಯವಾಗಿತ್ತು. ಈ ಸಂದರ್ಭದಲ್ಲಿ ನುವಾನ್‌ ಅವರಲ್ಲಿನ ಸಾಮರ್ಥ್ಯ ಗುರುತಿಸಿದ ಲಸಿತ್‌ ಯಾರ್ಕರ್‌ ಎಸೆಯುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದರು. "ಹಲವು ಸಮಯದಿಂದ ನುವಾನ್‌ ಅವರನ್ನು ಗಮನಿಸುತ್ತಿದ್ದೇನೆ. ಇದೀಗ ಆತನಿಗೆ ಬೌಲಿಂಗ್‌ ಹೇಳಿಕೊಡುತ್ತಿದ್ದೇನೆ ಕೂಡ. ಅವರು ಮುಂದೆ ಸಾಗಬೇಕಾಗಿರುವ ಹಾದಿ ಬಹಳಷ್ಟಿದೆ," ಎಂದು ಅದೇ ಮಾಧ್ಯಮದ ಎದುರು ಲಸಿತ್‌ ಮಾಲಿಂಗ ಹೇಳಿಕೊಂಡಿದ್ದರು.

ತುಶಾರ ಲಿಸ್ಟ್‌ 'ಎ' ಕ್ರಿಕೆಟ್‌ ಸಾಧನೆ

ತುಶಾರ ಲಿಸ್ಟ್‌ 'ಎ' ಕ್ರಿಕೆಟ್‌ ಸಾಧನೆ

10 ಪಂದ್ಯ
08 ವಿಕೆಟ್‌
3/52 ಶ್ರೇಷ್ಠ
28.37 ಸರಾಸರಿ
5.79 ಎಕಾನಮಿ
29.30 ಸ್ಟ್ರೈಕ್‌ರೇಟ್‌

ನುವಾನ್‌ ಟಿ20 ಸಾಧನೆ

ನುವಾನ್‌ ಟಿ20 ಸಾಧನೆ

14 ಪಂದ್ಯ
25 ವಿಕೆಟ್‌
4/32 ಶ್ರೇಷ್ಠ
12.88 ಸರಾಸರಿ
7.31 ಎಕಾನಮಿ
10.5 ಸ್ಟ್ರೈಕ್‌ ರೇಟ್‌
01 ನಾಲ್ಕು ವಿಕೆಟ್‌ ಸಾಧನೆ

Story first published: Wednesday, July 31, 2019, 15:53 [IST]
Other articles published on Jul 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X