ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Pak vs NZ 2nd ODI: ಡಿವೋನ್ ಕಾನ್ವೆ ಶತಕ, ಸವಾಲಿನ ಮೊತ್ತ ಕಲೆ ಹಾಕಿದ ನ್ಯೂಜಿಲೆಂಡ್

Pak vs NZ 2nd ODI: Devon Conway And Kane Wiiliamson Helps New Zealand To Post 261 Runs

ಕರಾಚಿಯ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಆತಿಥೇಯ ಪಾಕಿಸ್ತಾನದ ವಿರುದ್ಧ 49.5 ಓವರ್ ಗಳಲ್ಲಿ 261 ರನ್‌ಗಳನ್ನು ಗಳಿಸಿ ಆಲೌಟ್ ಆಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸ್ಫೋಟಕ ಬ್ಯಾಟರ್ ಫಿನ್ ಅಲೆನ್ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ಮತ್ತೆ ನಿರಾಸೆ ಅನುಭವಿಸಿದರು.

ನಂತರ ಜೊತೆಯಾದ ಡಿವೋನ್ ಕಾನ್ವೆ ಮತ್ತು ಕೇನ್ ವಿಲಿಯಮ್ಸನ್ ಅತ್ಯುತ್ತಮ ಜೊತೆಯಾಟ ಆಡಿದರು. 2ನೇ ವಿಕೆಟ್‌ಗೆ ಈ ಜೋಡಿ 183 ರನ್ ಕಲೆ ಹಾಕುವ ಮೂಲಕ ನ್ಯೂಜಿಲೆಂಡ್‌ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದ್ದರು. ಆದರೆ, ಇವರಿಬ್ಬರೂ ಔಟಾದ ನಂತರ ಉಳಿದ ಬ್ಯಾಟರ್ ಗಳು ಪೆವಿಲಿಯನ್ ಪೆರೇಡ್ ನಡೆಸಿದ್ದರಿಂದ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.

Ranji Trophy: ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್ ಉತ್ತಮ ಬ್ಯಾಟಿಂಗ್, ಬೃಹತ್ ಮುನ್ನಡೆ ಸಾಧಿಸಿದ ಕರ್ನಾಟಕRanji Trophy: ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್ ಉತ್ತಮ ಬ್ಯಾಟಿಂಗ್, ಬೃಹತ್ ಮುನ್ನಡೆ ಸಾಧಿಸಿದ ಕರ್ನಾಟಕ

ಫಿನ್ ಅಲೆನ್ 1 ರನ್ ಗಳಿಸಿ ಔಟಾದರು, ಡೇರಿಲ್ ಮಿಚೆಲ್ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ಟಾಮ್ ಲಥಮ್ (2), ಗ್ಲೆನ್ ಫಿಲಿಪ್ಸ್ (3), ಮಿಚೆಲ್ ಬ್ರಾಸ್‌ವೆಲ್ (8), ಇಶ್ ಸೋಧಿ (7), ಟಿಮ್ ಸೌಥೀ (0) ರನ್ ಗಳಿಸಿದರು.

ಡಿವೋನ್ ಕಾನ್ವೆ ಶತಕ

ಡಿವೋನ್ ಕಾನ್ವೆ ಶತಕ

ನ್ಯೂಜಿಲೆಂಡ್ ಆರಂಭಿಕ ಆಟಗಾರ ಡಿವೋನ್ ಕಾನ್ವೆ ಅಮೋಘ ಶತಕ ಗಳಿಸುವ ಮೂಲಕ ಮಿಂಚಿದರು. 92 ಎಸೆತಗಳಲ್ಲಿ 13 ಬೌಂಡರಿ ಒಂದು ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ಔಟಾದರು. ನಾಯಕನ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಕೇನ್ ವಿಲಿಯಮ್ಸನ್ 100 ಎಸೆತಗಳಲ್ಲಿ 10 ಬೌಂಡರಿ ಸಹಿತ 85 ರನ್ ಗಳಿಸಿ ಕಾನ್ವೆಗೆ ಸಾಥ್ ನೀಡಿದರು.

ಇವರಿಬ್ಬರನ್ನು ಬಿಟ್ಟರೆ ಮಿಚೆಲ್ ಸ್ಯಾಂಟ್ನರ್ ಮಾತ್ರ 40 ಎಸೆತಗಳಲ್ಲಿ 37 ರನ್ ಬಾರಿಸುವ ಮೂಲಕ ನ್ಯೂಜಿಲೆಂಡ್ ಗೌರಾವನ್ವಿತ ಮೊತ್ತ ಕಲೆ ಹಾಕಲು ಸಹಾಯ ಮಾಡಿದರು. ಈ ಮೂವರನ್ನು ಹೊರತುಪಡಿಸಿ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಖಲಿಸಲಿಲ್ಲ.

ನವಾಜ್, ನಸೀಮ್ ಶಾ ಉತ್ತಮ ಬೌಲಿಂಗ್

ನವಾಜ್, ನಸೀಮ್ ಶಾ ಉತ್ತಮ ಬೌಲಿಂಗ್

ಕೇನ್ ವಿಲಿಯಮ್ಸನ್ ಮತ್ತು ಡಿವೋನ್ ಕಾನ್ವೆ ವಿಕೆಟ್ ಪಡೆದ ನಂತರ ನ್ಯೂಜಿಲೆಂಡ್ ಬ್ಯಾಟರ್ ಗಳು ಪಾಕ್ ಬೌಲಿಂಗ್ ದಾಳಿ ವಿರುದ್ಧ ಸಂಪೂರ್ಣ ವಿಫಲವಾದರು. ಮೊಹಮ್ಮದ್ ನವಾಜ್ 10 ಓವರ್ ಗಳಲ್ಲಿ 38 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.

ನಸೀಮ್ ಶಾ 8.5 ಓವರ್ ಗಳಲ್ಲಿ 58 ರನ್ ಗಳಿಸಿ 3 ವಿಕೆಟ್ ಪಡೆದರು. ಉಳಿದಂತೆ ಹ್ಯಾರಿಸ್ ರೌಫ್ ಮತ್ತು ಉಸ್ಮಾನ್ ಮಿರ್ ತಲಾ ಒಂದು ವಿಕೆಟ್ ಪಡೆದರು. ಮೊದಲನೇ ಪಂದ್ಯದಲ್ಲಿ ಜಯ ಸಾಧಿಸಿರುವ ಪಾಕಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ನ್ಯೂಜಿಲೆಂಡ್ ಸರಣಿಯನ್ನು ಸಮಬಲವಾಗಿಸುವ ಉತ್ಸಾಹದಲ್ಲಿದೆ.

ಉಭಯ ತಂಡಗಳ ಪ್ಲೇಯಿಂಗ್ XI

ಉಭಯ ತಂಡಗಳ ಪ್ಲೇಯಿಂಗ್ XI

ಪಾಕಿಸ್ತಾನ : ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಹಾರಿಸ್ ಸೊಹೈಲ್, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹರಿಸ್ ರೌಫ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗುಸನ್

Story first published: Wednesday, January 11, 2023, 20:01 [IST]
Other articles published on Jan 11, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X