ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉಪನಾಯಕನನ್ನೇ ಪ್ಲೇಯಿಂಗ್‌ XI ನಿಂದ ಹೊರಗಿಟ್ಟ ಪಾಕ್‌ ವರ್ತನೆಗೆ ರಮೀಝ್ ರಾಜಾ ಕಿಡಿ

Pak vs NZ: Ramiz Raja Slams Pakistan Cricket For Benching Vice Captain Shan Masood

ಜನವರಿ 11 ರಂದು ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ 79 ರನ್‌ಗಳ ಸೋಲನುಭವಿಸಿತು. ಪಾಕಿಸ್ತಾನ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಜಿ ಅಧ್ಯಕ್ಷ ರಮೀಝ್ ರಾಜಾ ತಂಡದ ವಿರುದ್ಧ ಕಿಡಿ ಕಾರಿದ್ದಾರೆ.

ಮೊದಲನೇ ಪಂದ್ಯದಲ್ಲೇ ಪಾಕಿಸ್ತಾನ ಉಪನಾಯಕ ಶಾನ್‌ ಮಸೂದ್‌ರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದ ಪಾಕಿಸ್ತಾನ, ಎರಡನೇ ಪಂದ್ಯದಲ್ಲಿ ಕೂಡ ಅದೇ ಕೆಲಸ ಮಾಡಿತು. ಪಾಕ್ ತಂಡದ ಈ ಕ್ರಮಕ್ಕೆ ರಮೀಝ್ ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಎಲ್‌ ರಾಹುಲ್ ಫಾರ್ಮ್‌ ಬಗ್ಗೆ ಆಯ್ಕೆದಾರರ ಅಸಮಾಧಾನ: ಇದೇ ಕೊನೆ ಅವಕಾಶ!ಕೆಎಲ್‌ ರಾಹುಲ್ ಫಾರ್ಮ್‌ ಬಗ್ಗೆ ಆಯ್ಕೆದಾರರ ಅಸಮಾಧಾನ: ಇದೇ ಕೊನೆ ಅವಕಾಶ!

ಆಲ್‌ರೌಂಡರ್ ಶದಾಬ್ ಖಾನ್ ಗಾಯಗೊಂಡು ಸರಣಿಯಿಂದ ಹೊರಗುಳಿದ ನಂತರ, ಶಾನ್‌ ಮಸೂದ್‌ರನ್ನು ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ. ಆದರೂ, ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಆಡುವ ಬಳಗದಿಂದ ದೂರವುಳಿಯಬೇಕಾಯಿತು.

ಪಾಕಿಸ್ತಾನ ಸೋತರೂ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 262 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 182 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಬಾಬರ್ ಅಜಮ್ ಹೊರತು ಪಡಿಸಿ ಉಳಿದ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ರಿಜ್ವಾನ್, ಬಾಬರ್ ಮೇಲೆ ಒತ್ತಡ

ರಿಜ್ವಾನ್, ಬಾಬರ್ ಮೇಲೆ ಒತ್ತಡ

ಉಪನಾಯಕ, ಆರಂಭಿಕ ಆಟಗಾರ ಶಾನ್ ಮಸೂದ್‌ರನ್ನು ಆಡುವ ಬಳದಿಂದ ಹೊರಗಿಟ್ಟಾಗ, ಆರಂಭಿಕರನ್ನು ಒತ್ತಡಕ್ಕೆ ಒಳಪಡಿಸುತ್ತದೆ. ಮೊಹಮ್ಮದ್ ರಿಜ್ವಾನ್ ಕೂಡ ಒತ್ತಡಕ್ಕೆ ಸಿಲುಕಿದ್ದಾರೆ. ಪ್ರತಿಬಾರಿಯೂ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಒತ್ತಡದಲ್ಲಿದ್ದಾರೆ ಎಂದು ರಮೀಝ್ ರಾಜಾ ಹೇಳಿದರು.

ಬಾಬರ್ ಅಜಮ್ ಕೂಡ ಪ್ರತಿ ಬಾರಿ ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾರೆ. ಅವರು ಸೀಮಿತ ಓವರ್ ಮಾದರಿಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಕೆಲವು ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ರಾಜಾ ಹೇಳಿದ್ದಾರೆ.

ಪಾಕಿಸ್ತಾನ vs ನ್ಯೂಜಿಲೆಂಡ್: 2ನೇ ಪಂದ್ಯ ಸೋತ ಪಾಕ್ ಪಡೆಗೆ ಚಾಟಿ ಬೀಸಿದ ಶೋಯೆಬ್ ಅಖ್ತರ್

ನಿರ್ಣಾಯಕ ಪಂದ್ಯದಲ್ಲಿ ಅವಕಾಶ?

ನಿರ್ಣಾಯಕ ಪಂದ್ಯದಲ್ಲಿ ಅವಕಾಶ?

ಪಾಕಿಸ್ತಾನ ನ್ಯೂಜಿಲೆಂಡ್‌ 3 ಪಂದ್ಯಗಳ ಏಕದಿನ ಸರಣಿ ಈಗ 1-1 ರಲ್ಲಿ ಸಮಬಲವಾಗಿದೆ. ಸರಣಿಯ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ ಜಯ ಗಳಿಸಿದರೆ, ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಜಯ ದಾಖಲಿಸಿತ್ತು. ಮೂರನೇ ಪಂದ್ಯ ಸರಣಿಯ ನಿರ್ಣಾಯಕ ಆಗಿರುವುದರಿಂದ ಪಾಕಿಸ್ತಾನ ಪ್ಲೇಯಿಂಗ್‌ XI ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಮೊದಲ ಎರಡು ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಮೊದಲನೇ ಪಂದ್ಯದಲ್ಲಿ 11 ಮತ್ತು ಎರಡನೇ ಪಂದ್ಯದಲ್ಲಿ 6 ರನ್ ಗಳಿಸಿದ್ದಾರೆ. ಜನವರಿ 13ರಂದು ಶುಕ್ರವಾರ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಇಮಾಮ್-ಉಲ್-ಹಕ್‌ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.

ಸ್ಪಿನ್ ದಾಳಿಯನ್ನು ಎದುರಿಸುತ್ತಿಲ್ಲ

ಸ್ಪಿನ್ ದಾಳಿಯನ್ನು ಎದುರಿಸುತ್ತಿಲ್ಲ

ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ಸ್ಪಿನ್ ದಾಳಿಗೆ ತತ್ತರಿಸಿತು. ನ್ಯೂಜಿಲೆಂಡ್ ಸ್ಪಿನ್ನರ್ ಗಳು 5 ವಿಕೆಟ್ ಪಡೆದು ಮಿಂಚಿದರು. ಇಶ್ ಸೋಧಿ ಎರಡು ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್, ಮೈಕಲ್ ಬ್ರೇಸ್‌ವೆಲ್ ಮತ್ತು ಗ್ಲೆನ್ ಫಿಲಿಪ್ಸ್ ತಲಾ ಒಂದು ವಿಕೆಟ್ ಪಡೆದರು.

ಸ್ಪಿನ್ನರ್ ಗಳ ವಿರುದ್ಧ ಪಾಕಿಸ್ತಾನ ಬ್ಯಾಟರ್ ಗಳು ಪರದಾಡುತ್ತಿರುವ ಬಗ್ಗೆ ರಮೀಝ್ ರಾಜಾ ಮಾತನಾಡಿದರು. "ಸ್ಪಿನ್ ವಿರುದ್ಧ ಸಮರ್ಥವಾಗಿ ಆಡಲಿಲ್ಲ, ಯಾವುದೇ ದೊಡ್ಡ ಜೊತೆಯಾಟ ಬರಲಿಲ್ಲ. ಬಾಬರ್ ಅಜಮ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಸುಲಭವಾಗಿ ಬೌಂಡರಿ ಗಳಿಸುವ ಪಿಚ್ ಆಗಿರಲಿಲ್ಲ, ಸತತವಾಗಿ ವಿಕೆಟ್ ಬೀಳುತ್ತಿದ್ದವು" ಎಂದು ಹೇಳಿದ್ದರು.

Story first published: Thursday, January 12, 2023, 16:55 [IST]
Other articles published on Jan 12, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X