ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹಂಗಾಮಿ ಕೋಚ್‌ಗಳನ್ನು ನೇಮಿಸಿದ ಪಿಸಿಬಿ

PCB has appointed Saqlain Mushtaq and Abdul Razzaq as interim coaches for the NZ series

ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳಿರುವಾಗ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆಗಳು ಆಗಿದೆ. ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಹಾಗೂ ಬೌಲಿಂಗ್ ಕೋಚ್ ಯೂನಿಸ್ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಸ್ಥಾನಕ್ಕೆ ಹಂಗಾಮಿ ಕೋಚ್‌ಗಳನ್ನು ತಕ್ಷಣವೇ ನೇಮಕ ಮಾಡಿದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ. ನ್ಯೂಜಿಲೆಂಡ್ ತಂಡದ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಯ ಹಿನ್ನೆಲೆಯಲ್ಲಿ ತಕ್ಷಣವೇ ಹಂಗಾಮಿ ಕೋಚ್‌ಗಳನ್ನು ಹೆಸರಿಸಲಾಗಿದೆ.

ಮಾಜಿ ಕ್ರಿಕೆಟರ್‌ಗಳಾದ ಸಕ್ಲೇನ್ ಮುಶ್ತಾಕ್ ಹಾಗೂ ಅಬ್ದುಲ್ ರಜಾಕ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಂಗಾಮಿ ಕೋಚ್‌ಗಳನ್ನಾಗಿ ನೇಮಕ ಮಾಡಿದೆ. ಸದ್ಯ ಇವರಿಬ್ಬರು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಮಾತ್ರವೇ ಕೋಚ್‌ಗಳಾಗಿ ತಂಡದೊಂದಿಗೆ ಇರಲಿದ್ದಾರೆ. ಸೆಪ್ಟೆಂಬರ್ 17ರಿಂದ ನ್ಯೂಜಿಲೆಂಡ್ ತಂಡದ ವಿರುದ್ಧ ಸೀಮಿತ ಓವರ್‌ಗಳ ಸರಣಿ ಪಾಕಿಸ್ತಾನದಲ್ಲಿ ನಡೆಯಲಿದೆ.

ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಪ್ರಕಟ: ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಿಸ್ಬಾ ಉಲ್ ಹಾಗೂ ವಾಕರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಕೆಲವೇ ಕ್ಷಣಗಳ ಮುನ್ನ ಮುಂಬರುವ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಹೆಸರಿಸಲಾಗಿತ್ತು. ಅದಾದ ಬಳಿಕ ಮಿಸ್ಬಾ ಉಲ್ ಹಕ್ ಹಾಗೂ ವಾಕರ್ ಯೂನಿಸ್ ರಾಜೀನಾಮೆ ವಿಚಾರ ಬಹಿರಂಗವಾಗಿದೆ. ಹೀಗಾಗಿ ಈ ಬೆಳವಣಿಗೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಪಾಕಿಸ್ತಾನ ಕ್ರಿಕೆಟ್‌ ಕೋಚ್ ಸ್ಥಾನಕ್ಕೆ ಮಿಸ್ಬಾ ಉಲ್ ಹಕ್, ವಾಕರ್ ಯೂನಿಸ್ ರಾಜೀನಾಮೆಪಾಕಿಸ್ತಾನ ಕ್ರಿಕೆಟ್‌ ಕೋಚ್ ಸ್ಥಾನಕ್ಕೆ ಮಿಸ್ಬಾ ಉಲ್ ಹಕ್, ವಾಕರ್ ಯೂನಿಸ್ ರಾಜೀನಾಮೆ

ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ಮಿಸ್ಬಾ ಉಲ್ ಹಕ್ ಮತ್ತು ಮುಖ್ಯ ಬೌಲಿಂಗ್ ಕೋಚ್ ವಾಕರ್ ಯೂನಿಸ್ ಇಬ್ಬರೂ ಸೋಮವಾರ ಮುಂಜಾನೆ ತಮ್ಮ ನಿರ್ಧಾರ ತಿಳಿಸಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. ವೆಸ್ಟ್‌ ಇಂಡೀಸ್‌ನಲ್ಲಿರುವ ಮಿಸ್ಬಾ ಉಲ್ ಹಕ್ ಕೋವಿಡ್-19 ರಿಪೋಟರ್ಸ್ ಪಾಸಿಟಿವ್ ಬಂದಿದೆ. ಹೀಗಾಗಿ ಸದ್ಯ ಮಿಸ್ಬಾ ಐಸೊಲೇಶನ್‌ನಲ್ಲಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧ ಇದೇ ಸೆಪ್ಟೆಂಬರ್‌ 25ರಿಂದ ಅಕ್ಟೋಬರ್‌ 3ರ ವರೆಗೆ ಟಿ20 ಸರಣಿಯ ಐದು ಪಂದ್ಯಗಳು ನಡೆಯಲಿದೆ. ಸುದೀರ್ಘ ವರ್ಷಗಳ ನಂತರ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ ತಂಡ ಅಲ್ಲಿ ಟಿ20ಐ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಯ ನಂತರ ಇಂಗ್ಲೆಂಡ್ ವಿರುದ್ಧವೂ ಪಾಕಿಸ್ತಾನ ತಂಡ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಅಕ್ಟೋಬರ್‌ 13 ಮತ್ತು 14ರಂದು ಪಾಕ್ ಮತ್ತು ಇಂಗ್ಲೆಂಡ್ ಮಧ್ಯೆ ಎರಡು ಪಂದ್ಯಗಳ ಟಿ20ಐ ಸರಣಿ ಆಯೋಜನೆಯಾಗಲಿದೆ.

4ನೇ ಟೆಸ್ಟ್: ಭಾರತ ನೀಡಿರುವ ಗುರಿ ಮುಟ್ಟುವುದು ಸುಲಭದ ಮಾತಲ್ಲ ಎಂದ ಇಂಗ್ಲೆಂಡ್ ಆಟಗಾರ4ನೇ ಟೆಸ್ಟ್: ಭಾರತ ನೀಡಿರುವ ಗುರಿ ಮುಟ್ಟುವುದು ಸುಲಭದ ಮಾತಲ್ಲ ಎಂದ ಇಂಗ್ಲೆಂಡ್ ಆಟಗಾರ

ಕೋಚ್ ಆಗಿ ವಿವಾದದಲ್ಲಿ ಸಿಲುಕಿದ ಮಿಸ್ಬಾ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನೂ ಆಗಿರುವ ಮಿಸ್ಬಾ ಉಲ್ ಹಕ್ ತಂಡದ ಕೋಚ್ ಆದ ಬಳಿ ಕೆಲ ವಿವಾದಗಳಲ್ಲಿಯೂ ಹೆಸರು ಕೇಳಿ ಬಂದಿತ್ತು. ಪಾಕಿಸ್ತಾನ ತಂಡದಲ್ಲಿ ಆಟಗಾರರ ಮಧ್ಯೆ ಮಿಸ್ಬಾ ಕಾರಣದಿಂದಾಗಿಯೇ ಭಿನ್ನಾಭಿಪ್ರಾಯಗಳು ಮೂಡುತ್ತಿವೆ ಎಂಬ ಮಾತುಗಳು ಕೇಳಿ ಬಂದಿತ್ತು. ಇನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಆಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಾಜೀನಾಮೆಯನ್ನು ನೀಡಿದ ಬಳಿಕ ಇದೇ ಕಾರಣವನ್ನೂ ನೀಡಿದ್ದರು. ಕೋಚ್ ಮಿಸ್ಬಾ ಉಲ್ ಹಕ್ ಬಗ್ಗೆ ಪಕ್ಷಪಾತದ ಆರೋಪವನ್ನು ಕೂಡ ಮಾಡಿದ್ದರು.

ಟಿ20 ವಿಶ್ವಕಪ್‌ಗೆ ಸೋಮವಾರ ಆಯ್ಕೆ ಮಾಡಿದ ಪಾಕಿಸ್ತಾನ 15 ಜನರ ತಂಡ: ಬಾಬರ್ ಅಝಾಮ್ (ನಾಯಕ), ಮೊಹ್ಮದ್ ರಿಜ್ವಾನ್, ಆಸಿಫ್ ಅಲಿ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಸೊಹೈಬ್ ಮಕ್ಸೂದ್, ಅಝಾಮ್ ಖಾನ್, ಇಮಾದ್ ವಾಸಿಮ್, ಮೊಹಮದ್ ನವಾಜ್, ಮೊಹಮ್ಮದ್ ವಾಸಿಂ, ಹಸನ್ ಅಲಿ, ಶಹಾದಬ್ ಖಾನ್, ಹ್ಯಾರಿಸ್ ರೌಫ್, , ಶಾಹೀನ್ ಅಫ್ರಿದಿ, ಮೊಹಮದ್ ಹಸ್ನೈನ್.
ಮೀಸಲು ಆಟಗಾರರು: ಫಖರ್ ಜಮಾನ್, ಶಹನವಾಜ್ ಧನಿ, ಉಸ್ಮಾನ್ ಖಾದಿರ್.

Story first published: Monday, September 6, 2021, 17:57 [IST]
Other articles published on Sep 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X